ಅಯೋಧ್ಯಾ ನಗರದಲ್ಲಿ 21 ರಂದು ಜರುಗಿದ ಗುರುಪುಷ್ಯಾಮೃತ ಯೋಗ ದಿನದ ನಿಮಿತ್ಯ ಸರ್ವ ಲೋಕಸೇವಾ ಫೌಂಡೇಶನ ವತಿಯಿಂದ ಅರಳಿ, ಆಲ, ಬಿಲ್ವ ಪತ್ರೆಯ ಸಸಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ವೀರೇಶ ಬಸಯ್ಯಾ ಹಿರೇಮಠ ಇವರ ನೇತೃತ್ವದಲ್ಲಿ ನೆಡಲಾಯಿತು.


ಈ ಸಂದರ್ಭದಲ್ಲಿ ಅವರು ಮಾತನಾಡಿ ಈ ಸಸಿಗಳನ್ನು ಪರಿಸರದಲ್ಲಿ ನೆಡುವುದರಿಂದ ಧಾರ್ಮಿಕ ಭಾವನೆ, ಆರ್ಥಿಕ ವೃದ್ದಿ, ಪ್ರಾಣವಾಯು ಎಂದೇ ಸಸಿಗಳು ಖ್ಯಾತಿ ಪಡೆದಿವೆ ಇಂತಹ ಸಸಿಗಳು ಸುಸ್ಥಿರ ಅಭಿವೃದ್ಧಿ ಕಾಪಾಡುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ತಿಳಿಸಿದರು.


ಈ ಸಂಧರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಸುಭಾಷ ಪಾಟೀಲ, ಗೌರವ ಭೋಸಲೆ, ಗೌರೀಶ ಹಿರೇಮಠ, ಗುರುರಾಜ ಹಿರೇಮಠ ಇವರು ಉಪಸ್ಥಿತಿಯಲ್ಲಿದ್ದರು
