Athani

ಅಥಣಿಯಲ್ಲಿ ಹಣ್ಣು-ಹಂಪಲು ಹಂಚಿ ಶಾಸಕ ರಾಜು ಕಾಗೆ ಜನ್ಮದಿನ ಆಚರಿಸಿದ ಗಜಾನನ ಮಂಗಸೂಳಿ ಮತ್ತು ಅಭಿಮಾನಿಗಳು

Share

ಅಥಣಿ: ಕಾಗವಾಡ ಮತಕ್ಷೇತ್ರದ ಶಾಸಕರಾದ ರಾಜು ಕಾಗೆ ಅವರ 68ನೇ ಜನ್ಮದಿನದ ಅಂಗವಾಗಿ ಅಥಣಿ ಪಟ್ಟಣದಲ್ಲಿ ಹಿರಿಯ ಮುಖಂಡರಾದ ಗಜಾನನ ಮಂಗಸೂಳಿ ಹಾಗೂ ಅಭಿಮಾನಿ ಬಳಗದವರು ಸಾರ್ವಜನಿಕರಿಗೆ ಹಣ್ಣು-ಹಂಪಲು ಹಂಚುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನಾಚರಣೆಯನ್ನು ಆಚರಿಸಿದರು.


ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣುಗಳನ್ನು ವಿತರಿಸಲಾಯಿತು.
ತಮ್ಮ ಸರಳತೆ ಮತ್ತು ಜನಪರ ಕಾರ್ಯಗಳಿಂದ ಕ್ಷೇತ್ರದ ಜನರ ಮನಗೆದ್ದಿದ್ದಾರೆ. ಅವರ ಆಯುಷ್ಯ, ಆರೋಗ್ಯ ವೃದ್ಧಿಸಲಿ ಮತ್ತು ಅವರಿಂದ ಇನ್ನು ಹೆಚ್ಚಿನ ಜನಸೇವೆ ನಡೆಯಲಿ ಎಂದು ಈ ಸಂದರ್ಭದಲ್ಲಿ ಹಾರೈಸಲಾಯಿತು.


ಹಣ್ಣು ಹಂಪಲು ವಿತರಿಸಿದ ಬಳಿಕ ಗಜಾನನ ಮಂಗಸೂಳಿ ಅವರು ಮಾತನಾಡಿ, ರಾಜು ಕಾಗೆ ಅವರು ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಹುಟ್ಟುಹಬ್ಬವನ್ನು ಸಾರ್ವಜನಿಕರಿಗೆ ಹಾಗೂ ಬಡವರಿಗೆ ನೆರವಾಗುವಂತಹ ಸತ್ಕಾರ್ಯಗಳ ಮೂಲಕ ಆಚರಿಸುತ್ತಿರುವುದು ನಮ್ಮ ಹೆಮ್ಮೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರ ನೂರಾರು ಅಭಿಮಾನಿಗಳು, ಪ್ರಮುಖ ಮುಖಂಡರು ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದು, ಶಾಸಕರಿಗೆ ದೀರ್ಘಾಯುಷ್ಯ ಕೋರಿ ಶುಭ ಹಾರೈಸಿದರು.

Tags:

error: Content is protected !!