baglkote

ಮರಳು ಮಾಫಿಯಾಗೆ ಲೋಕಾ ಶಾಕ್: ಬಾಗಲಕೋಟೆ ಜಿಲ್ಲಾದ್ಯಂತ ಅಕ್ರಮ ಅಡ್ಡೆಗಳ ಮೇಲೆ ಲೋಕಾಯುಕ್ತ ಹಿಗ್ಗಾಮುಗ್ಗಾ ದಾಳಿ!

Share

• ಬಾಗಲಕೋಟೆಯಲ್ಲಿ ಅಕ್ರಮ ಮರಳು ಮಾಫಿಯಾಗೆ ನಡುಕ!
• ಬೆಂಗಳೂರು ಲೋಕಾಯುಕ್ತ ತಂಡದಿಂದ ಭರ್ಜರಿ ದಾಳಿ
• ಇಪ್ಪತ್ತಕ್ಕೂ ಹೆಚ್ಚು ತಂಡಗಳಿಂದ ಏಕಕಾಲಕ್ಕೆ ಆಪರೇಷನ್
• ಮಾಧ್ಯಮಗಳ ವರದಿ ಆಧರಿಸಿ ಲೋಕಾ ಬೇಟೆ

ಆಂಕರ್: ಬಾಗಲಕೋಟೆ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಲು ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಬೆಂಗಳೂರಿನಿಂದ ಬಂದ ವಿಶೇಷ ಲೋಕಾ ಪಡೆಗಳು ಜಿಲ್ಲಾದ್ಯಂತ ಏಕಕಾಲಕ್ಕೆ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿ ಧೂಳೆಬ್ಬಿಸಿವೆ.
ಬಾಗಲಕೋಟೆ ಜಿಲ್ಲಾದ್ಯಂತ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮತ್ತು ಸಂಗ್ರಹಣಾ ಅಡ್ಡೆಗಳ ಮೇಲೆ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳ ತಂಡ ಸರಣಿ ದಾಳಿ ನಡೆಸಿದೆ. ಸಾರ್ವಜನಿಕರ ದೂರು ಹಾಗೂ ಮಾಧ್ಯಮಗಳ ವಿಶೇಷ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಸಂಸ್ಥೆ, ಇಂದು ಮುಂಜಾನೆಯೇ ಭ್ರಷ್ಟ ದಂಧೆಕೋರರಿಗೆ ಬಿಸಿ ಮುಟ್ಟಿಸಿದೆ. ಸುಮಾರು 20ಕ್ಕೂ ಅಧಿಕ ಜಾಗೃತ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಏಕಕಾಲಕ್ಕೆ ಜಿಲ್ಲೆಯ ವಿವಿಧ ಮರಳು ದಂಧೆಯ ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿವೆ. ಈ ದಿಢೀರ್ ಕಾರ್ಯಾಚರಣೆಯಿಂದ ಮರಳು ಮಾಫಿಯಾ ಮತ್ತು ಅವರಿಗೆ ಸಾಥ್ ನೀಡುತ್ತಿದ್ದ ಅಧಿಕಾರಿಗಳ ಗುಂಡಿಗೆಯಲ್ಲಿ ನಡುಕ ಶುರುವಾಗಿದ್ದು, ಜಿಲ್ಲಾದ್ಯಂತ ಈ ದಾಳಿ ಭಾರಿ ಸಂಚಲನ ಮೂಡಿಸಿದೆ.

Tags:

error: Content is protected !!