Chikkodi

ಗುಣಮಟ್ಟದ ರಸ್ತೆ ಮಾಡಿ,ಗುತ್ತಿಗೆದಾರಿಗೆ ಎಂಎಲ್ಸಿ ಪ್ರಕಾಶ ಹುಕ್ಕೇರಿ ಖಡಕ್ ಎಚ್ಚರಿಕೆ

Share

ಚಿಕ್ಕೋಡಿಯಲ್ಲಿ ಗುತ್ತಿಗೆದಾರರಿಗೆ ಪ್ರಕಾಶ್ ಹುಕ್ಕೇರಿ ಎಚ್ಚರಿಕೆ

ಗುಣಮಟ್ಟದ ರಸ್ತೆಯಾಗದಿದ್ದರೆ ಕಾಮಗಾರಿ ತಕ್ಷಣ ನಿಲ್ಲಿಸಿ

ನೇಜ್ ಗ್ರಾಮದಲ್ಲಿ ವಿವಿಧ ರಸ್ತೆ ಅಭಿವೃದ್ಧಿಗೆ ಚಾಲನೆ

ಕಳಪೆ ಕಾಮಗಾರಿ ವಿರುದ್ಧ ಎಂಎಲ್ಸಿ ಕೆಂಡಾಮಂಡಲ

ಚಿಕ್ಕೋಡಿ: ಗುಣಮಟ್ಟದ ರಸ್ತೆ ಆಗದಿದ್ದರೆ, ಅರ್ಧದಲ್ಲಿ ಕಾಮಗಾರಿ ನಿಲ್ಲಿಸಿ ಎಂದು ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಅವರು ಚಿಕ್ಕೋಡಿ ತಾಲೂಕಿನ ‌ನೇಜ್ ಗ್ರಾಮದಲ್ಲಿ ೧ ಕೋಟಿ ೪೧ ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಚಾಲನೆಯನ್ನು ನೀಡಿ ಮಾತನಾಡಿದರು.ಇತ್ತೀಚಿಗೆ ನೇಜ್ ಗ್ರಾಮದಲ್ಲಿ‌ ಗುಣಮಟ್ಟದ ರಸ್ತೆಗಳು ಆಗುತ್ತಿಲ್ಲ ಎಂದು ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ರಸ್ತೆ ಕಾಮಗಾರಿಗೆ ಚಾಲನೆ ನೀಡುವ ಮೊದಲು ಸರಿಯಾಗಿ ರಸ್ತೆ ಮಾಡಿ ಹಾಗೂ ನಿಗದಿತ ಸಮಯದಲ್ಲಿ ಕಾಮಗಾರಿಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರಿಗೆ ಖಡಕ್ ಸೂಚನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ರಾಜು ಪಾಟೀಲ, ಪ್ರಕಾಶ ಮಗದುಮ,ಅರುಣ ಬೋನೆ,ಸದಾನಂದ ಸ್ವಾಮಿ,ಅಪ್ಪಾಸಾಹೇಬ ಸುಟ್ಟಟಿ,ರಾಜು ನಾಗೂರೆ,ರಮೇಶ ಖೋತ ,ಈರಗೌಡ ಪಾಟೀಲ, ರಾಜು ಚಿಂಚಣೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!