• ಖಾನಾಪೂರ ಅರವಟಿಗೆಗೆ ಕೊನೆಗೂ ಸಿಕ್ಕಿತು ಭಾಗ್ಯ
• ಇನ್ ನ್ಯೂಸ್ ವರದಿಗೆ ಬೆದರಿದ ಅಧಿಕಾರಿಗಳು
• ವಾಹನ ಪಾರ್ಕಿಂಗ್ ಜಾಗದಲ್ಲಿ ನೀರಿನ ವ್ಯವಸ್ಥೆ
• ಸಾರ್ವಜನಿಕರ ದಾಹ ನೀಗಿಸಿದ ಬಿಗ್ ಇಂಪ್ಯಾಕ್ಟ್

ಆಂಕರ್: ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಖಾನಾಪೂರದ ಜನತೆಗೆ ನಮ್ಮ ‘ಇನ್ ನ್ಯೂಸ್’ ವರದಿಯ ಬೆನ್ನಲ್ಲೇ ದೊಡ್ಡ ರಿಲೀಫ್ ಸಿಕ್ಕಿದೆ. ತಹಶೀಲ್ದಾರ್ ಕಚೇರಿ ಮುಂಭಾಗ ಬರೀ ಕಾಟಾಚಾರಕ್ಕೆ ನಿಂತಿದ್ದ ನೀರಿನ ಅರವಟಿಗೆಯ ಅವ್ಯವಸ್ಥೆಯನ್ನು ಜಗಜ್ಜಾಹೀರುಗೊಳಿಸಿದ್ದ ನಮ್ಮ ಸೋಷಿಯಲ್ ಇಂಪ್ಯಾಕ್ಟ್ಗೆ ಕೊನೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಖಾನಾಪೂರ ಪಟ್ಟಣ ಪಂಚಾಯಿತಿ ವತಿಯಿಂದ ತಹಶೀಲ್ದಾರ್ ಕಚೇರಿ ಆವರಣದ ಮುಂದೆ ಕೇವಲ ನಾಮಕಾವಸ್ತೆ ಪೈಡಾಲ್ ಹಾಕಿ, ನೀರಿನ ವ್ಯವಸ್ಥೆಯನ್ನೇ ಮಾಡದೆ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಡಿಸಲಾಗಿದ್ದ ಅರವಟಿಗೆಯ ಕುರಿತು ನಮ್ಮ ‘ಇನ್ ನ್ಯೂಸ್’ ವಾಹಿನಿಯು ಸಾರ್ವಜನಿಕ ಹಿತದೃಷ್ಟಿಯಿಂದ ವಿಶೇಷ ವರದಿ ಪ್ರಸಾರ ಮಾಡಿತ್ತು. ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶವನ್ನು ಬಿಂಬಿಸಿದ್ದ ಈ ವರದಿಗೆ ತಕ್ಷಣವೇ ಸ್ಪಂದಿಸಿರುವ ಆಡಳಿತ ಮಂಡಳಿ, ಇದೀಗ ಅಲ್ಲಿ ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಿ ನಿರಂತರವಾಗಿ ಶುದ್ಧ ಕುಡಿಯುವ ನೀರು ತುಂಬಿಸುವ ಮೂಲಕ ಸಾರ್ವಜನಿಕರ ದಾಹ ನೀಗಿಸುವ ಕೆಲಸ ಮಾಡಿದೆ. ಇನ್ ನ್ಯೂಸ್ ವಾಹಿನಿಯ ಈ ‘ಬಿಗ್ ಇಂಪ್ಯಾಕ್ಟ್’ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಈಗ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಜನರ ಧ್ವನಿಯಾಗಿ ನಿಂತ ವಾಹಿನಿಗೆ ಸಾರ್ವಜನಿಕರು ಧನ್ಯವಾದ ಸಮರ್ಪಿಸುತ್ತಿದ್ದಾರೆ.

