Dharwad

ಸಾರಿಗೆ ನೌಕರರ ಮುಷ್ಕರ ಇಳಿಯದಂತೆ ಪರಿಷತ್ ಸದಸ್ಯ ಎಫ್ ಎಚ್ ಜಕ್ಕಪ್ಪನವರ ಮನವಿ…. 80% ಬೇಡಿಕೆ ಈಡೇರಿವೆ ಉಳಿದ 20% ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ- ಜಕ್ಕಪ್ಪನವರ

Share

• ಸಾರಿಗೆ ನೌಕರರ ಮುಷ್ಕರಕ್ಕೆ ಬಿತ್ತು ಬ್ರೇಕ್?
• ನೌಕರರ ಶೇಕಡಾ 80 ಬೇಡಿಕೆ ಈಡೇರಿಕೆ!
• ಉಳಿದ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ.
• ಬಡ ಪ್ರಯಾಣಿಕರಿಗೆ ತೊಂದರೆ ಕೊಡಬೇಡಿ: ಜಕ್ಕಪ್ಪನವರ.

ಈ ಹಿಂದೆ ಇದ್ದ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸರ್ಕಾರಿ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸರಲಿಲ್ಲ. ಈಗ ಸಿಎಂ ಸಿದ್ದರಾಯ್ಯನವರು ಅಧಿಕಾರಕ್ಕೆ ಬಂದ ನಂತರ ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ ಸಿಎಂ ಸಿದ್ದರಾಯ್ಯನವರು ಸಾರಿಗೆ ನೌಕರರ 80% ಬೇಡಿಜೆ ಈಡೇರಿಸಿದೆ, ಉಳಿದ 20% ಬೇಡಿಕೆ ಈಡೇರಸಲು ಕೂಡಾ ಸರ್ಕಾರ ಬದ್ದವಾಗಿದೆ, ಮುಷ್ಕರದಿಂದ ನೌಕರರ ಹಿಂದೆ ಸರಿಯಬೇಕು ಎಂದು ಪರಿಷತ್ ಸದಸ್ಯ ಎಫ್ ಹೆಚ್ ಜಕ್ಕಪ್ಪನವರ ಮನವಿ ಮಾಡಿದ್ದಾರೆ.

ಈ ಕುರಿತು ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕಾಂಗ್ರೆಸ್ ಸರ್ಕಾರ ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ ತಪ್ಪುಗಳನ್ನು ಸರಿ ಮಾಡುತ್ತಿದೆ. ಬೊಮ್ಮಾಯಿ ಅವರ ಸರ್ಕಾರ ಜಂಟಿ ಕ್ರೀಯಾ ಸಮಿತಿ ಮುಂದಿಟ್ಟ ಬೇಡಿಕೆಗಳಲ್ಲಿ ಯಾವುದನ್ನು ಈಡೇರಿಸರಲಿಲ್ಲ. ಆದರೆ ನಾವು ಅವರ ಹಾಗೇ ಮಾಡಿಲ್ಲ. ನಮ್ಮ ಸಿಎಂ ಸುದ್ದರಾಮಯ್ಯ ಸರ್ಕಾರ ಸಾರಿಗೆ ನೌಕರರ ಬೇಡಿಕೆಗೆ ಸ್ಒಂದಿಸುತ್ತಲೇ ಬರುತ್ತಿದೆ. ಮುಂದೆಯೂ ಸ್ಪಂದನೆ ಮಾಡುತ್ತಲೆ ಬರುತ್ತದೆ. ಕೆಎಸ್‌ಆರ್‌ಡಿಸಿಯಲ್ಲಿ ಮೂರು ಸಂಘಟನೆಗಳು ಇವೆ, ಒಂದು ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರ ಸಂಘ, ಇನ್ನೊಂದು ಸಾರಿಗೆ ನೌಕರರ ಜಂಟಿ ಕ್ರೀಯಾ ಸಮಿತಿ ಹಾಗೂ ಎಸ್ಸಿ-ಎಸ್ಟಿ ಸಾರಿಗೆ ನೌಕರರ ಸಂಘ ಅಂತಾ ಇವೆ. ಸದ್ಯಕ್ಕೆ ಯಾರು ಕೂಡಾ ಮುಷ್ಕರಕ್ಕೆ ಮುಂದಾಗಬಾರದು, ಬೇಡಿಕೆಗಳಿಗೆ ಸ್ಪಂದನೆ ಮಾಡುತ್ತಿರುವಾಗ ದೊಡ್ಡಮಟ್ಟದ ಚಳುವಳಿ ಸರಿಯಲ್ಲ. ಬೇಡಿಕೆಗಳ ಈಡೇರಿಕೆಗೆ ಬೇರೆ ಮಾರ್ಗದ ಮೂಲಕ ಒತ್ತಾಯಿಸಬಹುದು, ಹಾಗಾಗಿ ಆ ಮಾರ್ಗ ಮೂಲಕ ಈಡೇರಿಸಿಕೊಳ್ಳಲು ಅವಕಾಶವಿದೆ. ದೊಡ್ಡಮಟ್ಟದ ಮುಷ್ಕರ ನಡೆಸುವುದರಿಂದ ಜನಗಳಿಗೆ ಬಡ ಪ್ರಯಾಣಿಕರಿಗರ ತೊಂದರೆಯಾಗುತ್ತದೆ. ಹಾಗಾಗಿ ದೊಡ್ಡ ಮಟ್ಟದ ಮುಷ್ಕರ ಹಾಗೂ ಹೋರಾಟಕ್ಕೆ ಸಾರಿಗೆ ನೌಕರರ ಮುಂದಾಗಬಾರದ ಎಂದು ಮನವಿ ಮಾಡಿದ್ದಾರೆ.

Tags:

error: Content is protected !!