ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನೂರಾರು ಮಂಗಗಳು ಮೊಬೈಲ್ ಟವರ್‌ಗಳ ಮೇಲೆ ಹತ್ತಿ ಅವುಗಳನ್ನು ಅಲುಗಾಡಿಸುತ್ತಿರುವುದರಿಂದ ಸ್ಥಳೀಯರು ಭಯಭೀತರಾಗಿದ್ದರು. ಈ ಮಂಗಗಳ ಹಾವಳಿಯಿಂದಾಗಿ ಜನರು ರಸ್ತೆಯಲ್ಲಿ ಓಡಾಡಲು ಹೆದರುತ್ತಿದ್ದಾರೆ. ಟವರ್‌ಗಳು ಬಿದ್ದು ಯಾವುದೇ ಅನಾಹುತ ಸಂಭವಿಸಿದರೆ ಎಂಬ ಆತಂಕದಲ್ಲಿದ್ದರು. ಈ ಕುರಿತು ನಿಮ್ಮ ಇನ್ ನ್ಯೂಜ್ ಮಂಗಗಳ ಹಾವಳಿಗೆ ಭಯಭೀತರಾದ ಜನತೆ ಎಂಬ ಶಿರ್ಷಿಕೆಯಡಿ ಸರಣಿ ವರದಿ ಪ್ರಸಾರ ಮಾಡೊ ಮೂಲಕ ಕೂಡಲೇ ಈ ಮಂಗಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಮೂಲಕ ಅಧಿಕಾರಿಗಳಿಗೆ ಆಗ್ರಹಿಸಿತ್ತು. ನಿಮ್ಮ ಇನ್ ನ್ಯೂಜ್ ವರದಿ ಪ್ರಸಾರವಾಗುತ್ತಲೇ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಕಡಿವಾಣ ಹಾಕಿದ್ದಾರೆ. ಟವರ್ ಏರಿ ಮತ್ತು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಮಂಗಗಳನ್ನು ಸೆರೆಹಿಡಿದು ಪಂಜರದಲ್ಲಿ ಹಾಕುವ ಮೂಲಕ ನಿವಾಸಿಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಸಾರ್ವಜನಿಕರು ಇನ್ ನ್ಯೂಜ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

