Vijaypura

ಹಾಲು ನೀಡಿ ಅಚ್ಚರಿಗೊಳಿಸಿದ ಎರಡು ತಿಂಗಳ ಕುರಿಮರಿ

Share

ವಿಜಯಪುರ ಜಿಲ್ಲೆ ಚಡಚಣ ತಾಲ್ಲೂಕಿನ ಜಗ್ಗಜೇವಣಿ ಗ್ರಾಮದ ಶ್ರೀಮಂತ ದುಂಡಪ್ಪ ಹೊನ್ನಮೋರೆ ಎಂಬ ರೈತರ ಮನೆಯಲ್ಲಿ ಎರಡು ತಿಂಗಳ ಕುರಿಮರಿ ಹಾಲು ಹಿಂಡುವ ಮೂಲಕ ವೈದ್ಯಕೀಯ ಲೋಕಕ್ಕೆ ಸವಾಲೊಡ್ಡಿದೆ. ಈ ವಿಶಿಷ್ಟ ಘಟನೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸ್ಥಳಕ್ಕೆ ಪಶು ಸಂಗೋಪನೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಳೆದ ಹತ್ತು ದಿನಗಳಿಂದ ಈ ವಿಚಿತ್ರ ಘಟನೆಯನ್ನು ವೀಕ್ಷಿಸಲು ಗ್ರಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಗ್ರಾಮದ ಮುಖಂಡ ಸಿದ್ದಪ್ಪ ಅವರು ಈ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದು, ತಮ್ಮ ಜೀವಮಾನದಲ್ಲಿ ಇಂತಹ ಘಟನೆಯನ್ನು ನೋಡಿಲ್ಲ ಎಂದು ಹೇಳಿದ್ದಾರೆ.

Tags:

error: Content is protected !!