BELAGAVI

ಸಿಎಂ ಬದಲಾವಣೆ ಹೇಳಿಕೆಗೆ ಶೀಘ್ರವೇ ಬೀಳಲಿದೆ ತೆರೆ: ದೆಹಲಿ ಬುಲಾವಾ ಸುಳಿವು ನೀಡಿದ ಸಚಿವ ಸತೀಶ್ ಜಾರಕಿಹೊಳಿ!

Share

ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವ ಸಚಿವ ಕೆ.ಎನ್. ರಾಜಣ್ಣ ಅವರ ‘ಮುಂದಿನ ಸಿಎಂ ಪರಮೇಶ್ವರ್’ ಎಂಬ ಹೇಳಿಕೆಗೆ ಹೈಕಮಾಂಡ್ ಮಟ್ಟದಲ್ಲೇ ಶೀಘ್ರದಲ್ಲಿ ತೆರೆ ಬೀಳಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ಇಂದು ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಖಾಸಗಿ ತರಕಾರಿ ಮಾರುಕಟ್ಟೆಯವರ ಸಮಸ್ಯೆಗೆ ಸಂಬಂಧಿಸಿದಂತೆ ಇಂದು ಸಭೆಯನ್ನು ಕರೆಯಲಾಗಿದೆ. ನಾವು ಇಬ್ಬರೂ ಮಾರುಕಟ್ಟೆಯವರೊಂದಿಗೆ ಚರ್ಚೆ ನಡೆಸುತ್ತೇವೆ. ನಮ್ಮಿಂದ ಆದ ಸಹಾಯವನ್ನು ಮಾಡುತ್ತೇವೆ. ಎಲ್ಲದಕ್ಕೂ ಕಾನೂನು ಮೊದಲು. ಅದರಡಿ ಅನುಕೂಲವನ್ನು ಮಾಡಿಕೊಡುತ್ತೇವೆ ಎಂದರು.

ಇನ್ನು ನಾಳೆ ತುಮಕೂರಿನಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಲಿದೆ. ಬಹಿರಂಗವಾಗಿ ಸಿಎಂ ನಮ್ಮ ಘೋಷಣೆ ಮತ್ತು ಅವುಗಳ ಪೂರೈಕೆ ಕುರಿತು ಬಹಿರಂಗವಾಗಿ ಮಾಹಿತಿ ನೀಡಲಿದ್ದಾರೆ. ಇನ್ನುಳಿದ 2 ವರ್ಷದಲ್ಲಿ ಉಳಿದದ್ದನ್ನು ಪೂರ್ಣಗೊಳಿಸುತ್ತೇವೆ ಎಂದರು.

ಮಾಜಿ ಸಚಿವ ರಾಜಣ್ಣ ಅವರ ಮುಂದಿನ ಸಿಎಂ ಪರಮೇಶ್ವರ ಆಗಲಿ ಎಂಬ ಹೇಳಿಕೆಗೆ ಆದಷ್ಟು ಬೇಗ ದೆಹಲಿಯಿಂದ ಬುಲಾವಾ ಬರಲಿದ್ದು, ಈ ವಿಚಾರಗಳು ಅಲ್ಲಿ ಚರ್ಚೆಯಾಗಿ ಶೀಘ್ರದಲ್ಲೇ ತೆರೆ ಬೀಳಲಿದೆ ಎಂದ ವಿಶ್ವಾಸವನ್ನು ವ್ಯಕ್ತಪಡಿಸಿದರು.

Tags:

error: Content is protected !!