BELAGAVI

ಬೆಳಗಾವಿಯ ಸದಾಶಿವನಗರ ಮುಖ್ಯ ರಸ್ತೆಗೆ ಕಾಯಕಲ್ಪ: ₹1.3 ಕೋಟಿ ಸಿಎಂ ವಿಶೇಷ ಅನುದಾನದ ಕಾಮಗಾರಿಗೆ ಶಾಸಕ ಆಸೀಫ್ ಸೇಠ್ ಚಾಲನೆ!

Share

ಬೆಳಗಾವಿಯ ಸದಾಶಿವನಗರದ ಮುಖ್ಯ ರಸ್ತೆಯನ್ನು ಮುಖ್ಯಮಂತ್ರಿಗಳ ವಿಶೇಷ 1.3 ಕೋಟಿ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಉತ್ತರ ಶಾಸಕ ಆಸೀಫ್ ಸೇಠ್ ಅವರು ಚಾಲನೆಯನ್ನು ನೀಡಿದರು.

ಈ ವೇಳೆ ಮಾತನಾಡಿದ ಅವರು ಅಭಿವೃದ್ಧಿ ಕಾಮಗಾರಿಗಳ ಬಳಿಕ ಬೆಳಗಾವಿಯ ಸದಾಶಿವನಗರದ ಮುಖ್ಯ ರಸ್ತೆಯೂ ಹದಗೆಟ್ಟಿತ್ತು. ಸಾರ್ವಜನಿಕರ ಬೇಡಿಕೆಯಂತೆ ಮುಖ್ಯಮಂತ್ರಿಗಳ ವಿಶೇಷ 1.3 ಕೋಟಿ ರೂಪಾಯಿ ಅನುದಾನದಲ್ಲಿ ಲಕ್ಷ್ಮೀ ಕಾಂಪ್ಲೇಕ್ಸ್’ನಿಂದ ಮುಂದಿನ ವೃತ್ತದ ವರೆಗೆ ಸಿಸಿ ರಸ್ತೆ, ಪೇವರ್ಸ್ ಮತ್ತು ಒಳಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಹಂತ ಹಂತವಾಗಿ ಒಳ ರಸ್ತೆಗಳನ್ನು ಕೂಡ ಅಭಿವೃದ್ಧಿಪಡಿಸಲಾಗುವುದು. ಅದರಂತೆ ಜನರು ಮತ್ತು ನಗರಸೇವಕ ಬೇಡಿಕೆಯಂತೆ ಕೆಲಸವನ್ನು ಮಾಡಲಾಗುವುದು ಎಂದರು.


ಈ ಸಂದರ್ಭದಲ್ಲಿ ಮಾಜಿ ಮಹಾಪೌರ ಮತ್ತು ಹಾಲಿ ನಗರಸೇವಕಿ ಸವೀತಾ ಕಾಂಬಳೆ, ಅಮಾನ್ ಸೇಠ್, ಗುತ್ತಿಗೆದಾರರು, ಅಧಿಕಾರಿಗಳು, ಸ್ಥಳೀಯರು ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!