Bagalkot

ಸಂಜೆ ಜಮೀನಿಗೆ ತೆರಳುತ್ತಿದ್ದ ವ್ಯಕ್ತಿ ಬೀದಿಯಲ್ಲಿ ಹತ್ಯೆ..

Share

ಆ ಗ್ರಾಮದ ರಸ್ತೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದೆ ಯುವಕನ ಹೆಣ.ಸಂಜೆ ಬೈಕ್ ಮೇಲೆ ಹೊಲಕ್ಕೆ ಹೊರಟವ ಮಸನ ಸೇರಿದ್ದಾನೆ. ಯುವಕನನ್ನು ಕೊಲೆಗೈದು ಕಿರಾತಕರು ಪರಾರಿ ಆಗಿದ್ದಾರೆ.ಯುವಕನ ಜೀವ ಬಲಿಗೆ ಕಾರಣ ಆಸ್ತಿ ಕಲಹ ಎಂಬ ಶಂಕೆ ದಟ್ಟವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…

ಒಂದೆಡೆ ಮಖ-ತಲೆ ಭಾಗದಿಂದ ಹತಿದ ನೆತ್ತರು,ರಸ್ತೆಯಲ್ಲಿ ಬಿದ್ದ ಹೆಣ.ಮತ್ತೊಂದೆಡೆ ಬೈಕ್ ಪಕ್ಕದಲ್ಲಿ ಬಲವಾಗಿ ರಾಡ್ ನಿಂದ ತಲೆಗೆ ಬಿದ್ದ ಏಟಿಗೆ ಸಾವನ್ನಪ್ಪಿದ ಯವಕ. ಇನ್ನೊಂದೆಡೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ ಪಿ ಸಿದ್ದಾರ್ಥ್ ಗೊಯಲ್ ಆ್ಯಂಡ್ ಟೀಂ.ಇಂತಹ ಘಟನೆ ನಡೆದಿದ್ದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕುರಗೊಡ ಗ್ರಾಮದಲ್ಲಿ.ಹೌದು ಗ್ರಾಮದ ಸದ್ದಪ್ಪ ಬಿರಾದಾರ(೩೫) ನಿನ್ನೆ ಸಂಜೆ ತನ್ನ ಹೊಲಕ್ಕೆ ಬೈಕ್ ಮೇಲೆ ಹೊರಟಾಗ ಆತನ ತಲೆಗೆ ರಾಡ್ ನಿಂದ ದುಷ್ಕರ್ಮಿಗಳು ಹೊಡೆದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಸಿದ್ದಪ್ಪ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ದುಷ್ಕರ್ಮಿಗಳಿಂದ ಕೊಲೆ ಹಿನ್ನೆಲೆ ಸ್ಥಳಕ್ಕೆ ಸಾವಳಗಿ ಪೊಲೀಸರು ದೌಡಾಯಿಸಿದ್ದು, ಬಳಿಕ ಎಸ್ ಪಿ ಸಿದ್ದಾರ್ಥ್ ಗೊಯಲ್ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣದ ಮಾಹಿತಿ ಪಡೆದ್ರು.ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ಇನ್ನು ರಾಡ್ ನಿಂದ ತಲೆಗೆ ಬಲವಾದ ಏಟು ಬಿದ್ದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ ಸಿದ್ದಪ್ಪ ಬಿರಾದಾರ ಗೆ ಶ್ರೀಶೈಲ್ ಎಂಬ ಓರ್ವ ಸಹೋದರ ಇದ್ದಾನೆ.ಇಬ್ಬರಿಗೂ ಮದುವೆ ವಯಸ್ಸಾದ್ರೂ ಇನ್ನು ಮದುವೆ ಆಗಿಲ್ಲ. ಮನೆಯಲ್ಲಿ ಆಸ್ತಿಗಾಗಿ ಕಲಹ ಇತ್ತು ಎಂಬ ಸುದ್ದಿ ಹರಿದಾಡ್ತಿದೆ.ಪೊಲೀಸರಿಗೂ ಈ ಪ್ರಕರಣ ಪ್ರೀ ಪ್ಲ್ಯಾನ್ ಮರ್ಡರ ಎಂಬ ಶಂಕೆ ವ್ಯಕ್ತವಾಗಿದ್ದು,ಸಿದ್ದಪ್ಪನ ಕೊಲೆಗೆ ಅನೈತಿಕ ಸಂಬಂಧ ಕಾರಣಾನಾ ಎಂಬ ಆ್ಯಂಗಲ್ ನಲ್ಲೂ ತನಿಖೆ ನಡೆಸುತ್ತಿದ್ದಾರೆ ಪೊಲೀಸರು.ಕೊಲೆಯಾದ ಸಿದ್ದಪ್ಪನ ತಂದೆಗೆ ಇಬ್ಬರು ಹೆಂಡ್ತಿಯರು,ಸಿದ್ದಪ್ಪ ಹಾಗೂ ಶ್ರೀಶೈಲ್ ಮೊದಲನೆ ಹೆಂಡ್ತಿ ಮಕ್ಕಳು.ಇವ್ರಿಗೆ 2.ಎಕರೆ 26 ಗುಂಟೆ ಜಮೀನು ಇದೆ.ಜಮೀನಿನಲ್ಲಿ ಪಾಲು ಕೇಳ್ತಿದ್ದನಂತೆ ಸಿದ್ದಪ್ಪ.ಅದಕ್ಕೆ ಆತನ ಸಹೋದರ ವಿರೋಧ ವ್ಯಕ್ತ ಪಡಿಸಿದ್ದ ಎನ್ನಲಾಗಿದೆ.ಇದೀಗ ಕೊಲೆಯಾದ ಸಿದ್ದಪ್ಪನ ತಾಯಿ ಸಾವಳಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ…

ಒಟ್ಟಿನಲ್ಲಿ ಬೈಕ್ ಮೇಲೆ ಹೊಲಕ್ಕೆ ಹೊರಟವ ಕಿರಾತಕರ ಹೊಡೆತದಿಂದ ಮಸನ ಸಸೇರಿದ್ದು,ಕುರುಗೊಡ ಗ್ರಾಮಸ್ಥರು ಆತಂಕ ಪಡುವಂತಾಗಿದೆ.ಕೊಲೆ ಮಾಡಿ ಪರಾರಿಯಾಗಿರೋ ಆರೋಪಿಗಳ ಬಂಧನಕ್ಕೆ ಸಾವಳಗಿ ಪೊಲೀಸರು ಬಲೆ ಬೀಸಿದ್ದಾರೆ.

Tags:

error: Content is protected !!