BELAGAVI

ಬೆಳಗಾವಿ: ಶಿವಬಸವ ನಗರದ ನಿವಾಸಿಗಳ ಬಹುದಿನಗಳ ಬೇಡಿಕೆ ಈಡೇರಿಕೆ; ಹೈಟೆಕ್ ಉದ್ಯಾನವನ ಕಾಮಗಾರಿಗೆ ಶಾಸಕ ಆಸೀಫ್ ಸೇಠ್ ಚಾಲನೆ!

Share

ಬೆಳಗಾವಿಯ ಶಿವ ಬಸವ ನಗರದಲ್ಲಿ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಉತ್ತರ ಶಾಸಕ ಆಸೀಫ್ ಸೇಠ್ ಅವರು ಚಾಲನೆಯನ್ನು ನೀಡಿದರು.

ಜನರ ಬಹುದಿನಗಳ ಬೇಡಿಕೆಯಂತೆ ಶಿವಬಸವ ನಗರದ ಕಾರಂಜಿ ಮಠದ ಎದುರುಗಡೆ 40 ಸರ್ಕಾರದ ಅನುದಾನದಲ್ಲಿ ಉದ್ಯಾನವನದ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ನಡೆದಾಡಲು ಸತ್ಯ ರಸ್ತೆ ಹೈ ಮಾಸ್ಟ್ ದೀಪ ಸೇರಿದಂತೆ ವಿವಿಧ ಹೈಟೆಕ್ ಅಭಿವೃದ್ದಿಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೆ ಎದುರಿಗಿನ ಶ್ರೀ ಜ್ಯೋತಿಬಾ ಮಂದಿರದ ಆವರಣದಲ್ಲಿ ಅಳವಡಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಜನರು ಕೂಡ ಉದ್ಯಾನವನದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.

ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿಗಳು ಮಾತನಾಡಿ
ಬೆಳಗಾವಿಯ ವಾರ್ಡ್ ನಂಬರ್ 26ರ ವ್ಯಾಪ್ತಿಯಲ್ಲಿ ಬರುವ ಶಿವಬಸವನಗರದ ಜ್ಯೋತಿಬಾ ಮಂದಿರದ ಕಾರಂಜಿ ಮಠದ ಎದುರಿಗಿರುವ ಉದ್ಯಾನವನ ಗೊಳಿಸುವ ಕಾರ್ಯವನ್ನು ಶಾಸಕ ಆಸೀಫ್ ಸೇಠ್ ಅವರು 40 ಲಕ್ಷ ರೂಪಾಯಿಯಲ್ಲಿ ಕೈಗೊಂಡಿದ್ದು, ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸುತ್ತಿದ್ದಾರೆ. ಶಿವ ಬಸವ ನಗರದ ಜನರು ಈ ಉದ್ಯಾನವನದ ಪವಿತ್ರತೆಯನ್ನ ಕಾಪಾಡಿಕೊಂಡು ಹೋಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಿವಬಸವ ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

Tags:

error: Content is protected !!