Vijaypura

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಚ್ಛೇ ದಿನದಲ್ಲಿ ಏನೆಲ್ಲ ಆಗಬೇಕೋ ಅದೆಲ್ಲವೂ ಆಗುತ್ತಿದೆ: ಸಚಿವ ಎಂ.ಬಿ.ಪಾಟೀಲ

Share

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಚ್ಛೇ ದಿನದಲ್ಲಿ ಏನೆಲ್ಲ ಆಗಬೇಕೋ ಅದೆಲ್ಲವೂ ಆಗುತ್ತಿದೆ. ಕರೋನಾ ಸಮಯದಲ್ಲಿ ಔಷಧ ಕೊಡೋದನ್ನು ಬಿಟ್ಟು ತಮಟೆ ಹೊಡೆಯಿರಿ ಎಂದರು, ಇದೀಗ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿಯುತ್ತಿದ್ದಂತೆ ಸೈಕಲ್ ಮೇಲೆ ಹೋಗಿ, ಗಾಡಿ ಬಳಸಬೇಡಿ ಎನ್ನುತ್ತಿದ್ದಾರೆ. ಆದರೂ ಮೋದಿಯ ಅಂಧಭಕ್ತರಿಗೆ ಇನ್ನೂ ಅರ್ಥವಾಗುತ್ತಿಲ್ಲವೆಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಲೇವಡಿ ಮಾಡಿದರು.

ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಸಚಿವರು ದೇಶದ ಆರ್ಥಿಕತೆ ಅಧೋಗತಿಗೆ ಇಳಿದಿದೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಹೇಗಿತ್ತು? ಈಗ ಹೇಗಿದೆ ಎಂಬುದನ್ನು ಅವಲೋಕಿಸಿ. ಡಾಲರ್, ಪೆಟ್ರೋಲ್, ಡಿಸೇಲ್ ದರದ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ ವಿಡಿಯೋಗಳೇ ಇಂದು ಸಾಮಾಜಿಕ ಜಾಲತಾಣದಲ್ಲಿ ತಿರುಗಿಬೀಳುತ್ತಿದೆ. ಕಾಲಚಕ್ರ ಉರುಳುತ್ತಿದೆ. ಮೋದಿ ಆಡಿದ ಮಾತುಗಳೇ ವಾಪಸ್ ತಮಗೇ ಅನ್ವಯವಾಗುತ್ತಿವೆ ಎಂದು ತಿರುಗೇಟು ನೀಡಿದರು. ಕೆಲವು ಮಾಧ್ಯಮಗಳ ಮಾಲೀಕರನ್ನೂ ಮೋದಿ ಸರ್ಕಾರ ಹೈಜಾಕ್ ಮಾಡಿದೆ. ನೀವೂ ಅಂಧಭಕ್ತರಂತೆ ಮಾತನಾಡುತ್ತಿದ್ದೀರಿ ಎಂದು ಸುದ್ದಿಗಾರರ ಕಾಲೆಳೆದ ಎಂ.ಬಿ. ಪಾಟೀಲರು, ಅಚ್ಛೇ ದಿನ್ ಬಂದಿತಾ? ರೈತರ ಆದಾಯ ದ್ವಿಗುಣ ಮಾಡುತ್ತೇವೆ, ಗ್ಯಾಸ್ ರೇಟ್ ಕಡಿಮೆ ಮಾಡುತ್ತೇವೆ ಎಂದಿದ್ದ ಮೋದಿ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಈಗಲೂ ವೈರಲ್ ಆಗುತ್ತಿದೆ ನೋಡಿ ಎಂದರು. ಮೋದಿ ವಿದೇಶಾಂಗ ನೀತಿ ವಿಫಲವಾಗಿದೆ. ಈ ಹಿಂದೆ ವಾಜಪೇಯಿ ಸಹ ನಮ್ಮ ವಿದೇಶಾಂಗ ನೀತಿಯನ್ನೇ ಮುಂದುವರಿಸಿಕೊಂಡು ಹೋಗಿದ್ದರು. ಅದು ಪ್ಯಾಲೆಸ್ತೇನ್, ಇರಾನ್ ಅಥವಾ ಬೇರೆ ಯಾವುದೇ ವಿಚಾರದಲ್ಲಾಗಿರಬಹುದು. ಆದರೆ, ಇಂದಿನ ಕೇಂದ್ರ ಸರ್ಕಾರದ ಧೋರಣೆಯಿಂದಾಗಿ ತಲೆತಗ್ಗಿಸುವಂತಾಗಿದೆ. ಇಸ್ರೇಲ್ ನಮ್ಮ ಫಾದರ್ ನೇಶನ್-ಇಂಡಿಯಾ ಮದರ್ ನೇಶನ್ ಎಂದ್ದಿದ್ದು ಎಲ್ಲವೂ ತಿರುಗಿ ಬೀಳುತ್ತಿದೆ.

ಭ್ರಷ್ಟಾಚಾರ ತಡೆಯುವ ಕುರಿತು ಮಾತನಾಡಿದ ಮೋದಿ ಸಂಪುಟದಲ್ಲಿ ಈಗ ಯಾರಿದ್ದಾರೆ? ಕ್ರಿಮಿನಲ್ಸ್‌ಗೆಳೆಲ್ಲ ಸಚ್ಛಾರಿತ್ರೃರಾಗುತ್ತಿದ್ದಾರೆ. ಬಿಜೆಪಿಯ ವಾಷಿಂಗ್ ಮಶೀನ್‌ನಲ್ಲಿ ಸ್ವಚ್ಛವಾಗುತ್ತಿದ್ದಾರೆ ಎಂದು ಕಿಚಾಯಿಸಿದರು.

Tags:

error: Content is protected !!