Bagalkot

ಮಲಪ್ರಭಾ ಬಲ‌ದಂಡೆ ಕಾಲುವೆಗೆ ಜಮೀನು ಭೂಸ್ವಾಧೀನ…

Share

ಅದು ಒಂದಿಲ್ಲೊಂದು ಯೋಜನೆಗಳಿಗೆ ಭೂಮಿ ಕಳೆದುಕೊಂಡ ಸಂತ್ರಸ್ತರೇ ಹೆಚ್ಚಿರೋ ಜಿಲ್ಲೆ.ನ್ಯಾಯಸಮ್ಮತ ಭೂ ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಅನ್ನದಾತನಿಗೆ ಕೊರ್ಟ್ ಪರಿಹಾರ ನೀಡುವಂತೆ ಸೂಚಿಸಿದ್ರೂ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಣಾ-ಮುಚ್ಚಾಲೆ ಆಡ್ತಿದ್ದಾರೆ.ಸಂತ್ರಸ್ತನಿಗೆ ಭೂ ಪರಿಹಾರ ನೀಡದ ಇಲಾಖೆಯ ಅಧಿಕಾರಿ ವಾಹನ ಜಪ್ತಿಗೆ ಕೋರ್ಟ್ ಆದೇಶ ನೀಡಿದ್ದು,ವಾಹನ ಜಪ್ತಿ ಮಾಡಿದಲಾಗಿದೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…

ಒಂದೆಡೆ ಭೂಮಿ ಕಳೆದುಕೊಂಡು ಪರಿಹಾರಕ್ಕಾಗಿ ದಶಕಗಳಿಂದ ಅಲೆದು ಸುಸ್ತಾಗಿರೋ ಸಂತ್ರಸ್ತ. ಇನ್ನೊಂದೆಡೆ ಭೂ ಸ್ವಾಧೀನ ಪಡೆದ ಭೂಮಿಯ ಸಂತ್ರಸ್ತರಿಗೆ ಪರಿಹಾರ ನೀಡಿದ ಅಧಿಕಾರಿ ವಾಹನ ಜಪ್ತ ಆದೇಶ ನೀಡಿದ ಕೋರ್ಟ್. ಹೌದು ಬಾಗಲಕೋಟೆ ಜಿಲ್ಲೆ
ಇನಾಂ ಹೂಲಗೇರಿ ಗ್ರಾಮದ ಸರ್ವೆ ನಂಬರ್ 161/1 ರ 3 ಎಕರೆ ಮಲಪ್ರಭಾ ಕಾಲುವೆಗಾಗಿ ಭೂ ಸ್ವಾಧೀನ ಮಾಡಿಕೊಂಡಿದೆ.2003-04 ರಲ್ಲಿ ನಡೆದಿದ್ಧ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ1 ಕೋಟಿ 82 ಲಕ್ಷ 21 ಸಾವಿರದ 162 ರೂ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿತ್ತು.ಆದ್ರೆ ಸಂಬಂಧಿಸಿದ ಇಲಾಖೆ ಪರಿಹಾರ ಬರಿಸದಿದ್ದಿದ್ದಕ್ಕೆ
ನವನಗರದಲ್ಲಿರೋ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯ ನಿರ್ವಾಹಕ ಅಭಿಯಂತರ ಕಚೇರಿಯ EE ಎನ್.ಎಮ್.ದಿವಟೆ ಕಾರು ಜಪ್ತಿ ಮಾಡುವಂತೆ ಕೊರ್ಟ್ ಆದೇಶಿಸಿದೆ. ಕೊರ್ಟ್ ಆದೇಶದಂತೆ ಕಾರ್ ಜಪ್ತ ಮಾಡಲಾಯಿತು…

ಇನ್ನು ಭೂ ಪರಿಹಾರಕ್ಕಾಗಿ ಕಳೆದೊಂದು ದಶಕದಿಂದ ಮಲಪ್ರಭಾ ಕಚೇರಿಗೆ ಅಲೆದು ಕೊರ್ಟ್ ಮೆಟ್ಟಿಲೇರಿದ್ದ ಸಂತ್ರಸ್ತ ಡೊಂಗ್ರಿಸಾಬ್.ಕೊರ್ಟ್ ಆದೇಶ ಪಾಲಿಸದ ಕರ್ನಾಟಕ ನೀರಾವರಿ ನಿಗಮದ EE ಎನ್.ಎಮ್.ದಿವಟೆ ಕಾರು ಜಪ್ತಿ ಮಾಡುವಂತೆ ಇಂದು ಆದೇಶಿದೆ.ಬಾಗಲಕೋಟೆ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶ ಹಿನ್ನೆಲೆ ನೀರಾವರಿ ಇಲಾಖೆ ಇ&ಇ ಅವ್ರ ಕಾರ್ ಜಪ್ತಿ ಮಾಡಿದೆ.ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ನಡೆಯಿಂದ ಭೂಮಿ ಕಳೆದುಕೊಂಡ ಸಂತ್ರಸ್ತ ಪರಿಹಾರಕ್ಕೆ ಅಲೆಯುಂತಾಗಿದ್ದು,ಕೋರ್ಟ್ ಪರಿಹಾರ ನೀಡುವಂತೆ ಎಚ್ಚರಿಕೆ ನೀಡಿದೆ…

ಒಟ್ಟಿನಲ್ಲಿ ಸರ್ಕಾರಿ ಯೋಜನೆಗಳಿಗೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡದ ಸರ್ಕಾರದ ವಿರುದ್ಧ ಸಂತ್ರಸ್ತರು ಹಿಡಿಶಾಪ ಹಾಕ್ತಿದ್ದು,ಕೋರ್ಟ್ ಆದೇಶ ನಿರ್ಲಕ್ಷಿಸಿದ ಇಲಾಖೆಯ ಅಧಿಕಾರಿಗಳ ವಾಹನ ಜಪ್ತಿಗೆ ಆದೇಶಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ ನ್ಯಾಯಾಲಯ….

Tags:

error: Content is protected !!