arrest

ಬೆಳಗಾವಿಯಲ್ಲಿ ಪೊಲೀಸರ ಖಡಕ್ ಆಕ್ಷನ್: ಮಟಕಾ ಮತ್ತು ಜೂಜಾಟದ ಅಡ್ಡೆಗಳ ಮೇಲೆ ಸರಣಿ ದಾಳಿ!

Share

ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ಪೊಲೀಸರು ಸಮರ ಸಾರಿದ್ದಾರೆ. ತಿಲಕವಾಡಿ, ಕ್ಯಾಂಪ್ ಹಾಗೂ ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಿಂಚಿನ ದಾಳಿಯಲ್ಲಿ ಮಟಕಾ ಮತ್ತು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಒಟ್ಟು 6 ಮಂದಿಯನ್ನು ಬಂಧಿಸಿ, ನಗದು ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಿನಾಂಕ 13/05/2026 ರಂದು ನಗರದಾದ್ಯಂತ ಪೊಲೀಸರು ಅಕ್ರಮಗಳ ಮೇಲೆ ದಾಳಿ ನಡೆಸಿದ್ದಾರೆ. ತಿಲಕವಾಡಿ ಪೊಲೀಸರು ಭಾಗ್ಯ ನಗರದಲ್ಲಿ ಮಟಕಾ ಆಡುತ್ತಿದ್ದ ಆನಂದ ಬಸಪ್ಪ ಹೊನ್ನಳ್ಳಿ ಎಂಬಾತನನ್ನು ಬಂಧಿಸಿದ್ದು, ಈತ ಸಂಗ್ರಹಿಸಿದ ಹಣವನ್ನು ಸಂಗೀತಾ ಬಾಲು ಕಮಕಾರಟ್ಟಿ ಎಂಬಾಕೆಗೆ ನೀಡುತ್ತಿರುವುದಾಗಿ ತಿಳಿಸಿದ್ದರಿಂದ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ, ಬೆಳಗಾವಿ ಗ್ರಾಮೀಣ ಠಾಣೆಯ ಪಿಎಸ್‌ಐ ಸಂತೋಷ ದಳವಾಯಿ ನೇತೃತ್ವದಲ್ಲಿ ಯಳ್ಳೂರ ಗ್ರಾಮದ ಹತ್ತಿರ ದಾಳಿ ನಡೆಸಿ, ಓಸಿ ಆಟ ಆಡುತ್ತಿದ್ದ ಸಾಗರ ಪಾಂಡುರಂಗ ಕುಂಡೇಕರ ಎಂಬಾತನನ್ನು ಬಂಧಿಸಲಾಗಿದೆ. ಹಾಗೆಯೇ, ಕ್ಯಾಂಪ್ ಠಾಣಾ ವ್ಯಾಪ್ತಿಯ ದೋಬಿ ಘಾಟ್ ಹತ್ತಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಅಷ್ಟು ಲಕ್ಷ್ಮಣ ಲಮಾಣಿ, ಅಲೆಕ್ಸ್ ಇಡದೋ ಫ್ರಾನ್ಸಿಸ್, ಸುದೀಪ ಲಕ್ಷ್ಮಣ ಲಮಾಣಿ ಮತ್ತು ಮಹೇಶ ಗೋಪಾಲ ಪಾಟೀಲ ಎಂಬ ನಾಲ್ವರನ್ನು ಪಿಎಸ್‌ಐ ರುಕ್ಕಿಣಿ ಎ. ಮತ್ತು ತಂಡ ಬಂಧಿಸಿದೆ. ಈ ಎಲ್ಲಾ ಯಶಸ್ವಿ ದಾಳಿಗಳನ್ನು ನಡೆಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಶ್ಲಾಘಿಸಿದ್ದಾರೆ.

Tags:

error: Content is protected !!