arrest

ಬೆಳಗಾವಿಯಲ್ಲಿ ಪೊಲೀಸ್ ಭೇಟೆ: ತಲವಾರ್ ಹಿಡಿದು ಅಲೆಯುತ್ತಿದ್ದ ವ್ಯಕ್ತಿ ವಶಕ್ಕೆ!

Share

ಬೆಳಗಾವಿ ನಗರದಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೋಲಿಸರು ಈಗ ಖಡಕ್ ಆಕ್ಷನ್ ಮೂಡ್‌ಗೆ ಬಂದಿದ್ದಾರೆ. ನಗರದ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ ವ್ಯಕ್ತಿಯನ್ನು ‘ಆ್ಯಂಟಿ ಸ್ಟಾಲಿಂಗ್ ಸ್ಕ್ವಾಡ್’ ಯಶಸ್ವಿಯಾಗಿ ಬಂಧಿಸಿದೆ.

ದಿನಾಂಕ 13.05.2026 ರಂದು ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಗರ ಮತ್ತು ಗ್ರಾಮೀಣ ಉಪವಿಭಾಗಗಳಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಚರಣೆಯ ವೇಳೆ ಈ ಬಂಧನ ನಡೆದಿದೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ನಗರದ 3ನೇ ಕ್ರಾಸ್ ಹತ್ತಿರ, ಲಾಲೂಖಾನ್ ಬಾಬುಖಾನ್ ಪಠಾಣ (50) ಎಂಬಾತ ಅಕ್ರಮವಾಗಿ ತಲವಾರ್ ಹಿಡಿದು ಜನರಲ್ಲಿ ಭೀತಿ ಮೂಡಿಸುತ್ತಿದ್ದನ್ನು ಗಮಸಿದ ಪಿಎಸ್‌ಐ ಪಿ.ಎಂ. ಮೋಹಿತೆ ಹಾಗೂ ಸಿಬ್ಬಂದಿಯವರು ಕೂಡಲೇ ಆತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿರುದ್ಧ ಆರ್ಮ್ಸ್ ಆಕ್ಟ್ ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಈ ಸಮಯೋಚಿತ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಶ್ಲಾಘಿಸಿದ್ದಾರೆ.

Tags:

error: Content is protected !!