BELAGAVI

ಸಕ್ಕರೆ ನಾಡಿನಲ್ಲಿ ‘ಕಬ್ಬು ಬೆಳೆ ಸಮೃದ್ಧಿ’ ಮಂತ್ರ: ಮಣ್ಣಿನ ಆರೋಗ್ಯ ಮತ್ತು ಕುಳೆ ಕಬ್ಬು ನಿರ್ವಹಣೆಯ ಬಗ್ಗೆ ತಜ್ಞರಿಂದ ಮಹತ್ವದ ಪಾಠ

Share

ರಾಜ್ಯದ ಬೆನ್ನೆಲುಬಾಗಿರುವ ಕಬ್ಬು ಬೆಳೆಗಾರರ ಆದಾಯ ಹೆಚ್ಚಿಸಲು ಹಾಗೂ ಮಣ್ಣಿನ ಫಲವತ್ತತೆ ಕಾಪಾಡಲು ಬೆಳಗಾವಿಯಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ವಿಚಾರ ಸಂಕಿರಣದಲ್ಲಿ ಕಬ್ಬಿನ ಇಳುವರಿ ಹೆಚ್ಚಿಸುವ ವೈಜ್ಞಾನಿಕ ಗುಟ್ಟುಗಳನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ, ಸಕ್ಕರೆ ನಿರ್ದೇಶನಾಲಯ, ಬೆಳಗಾವಿ ಇವರು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಕಬ್ಬು ವಿಭಾಗದ ಅಧಿಕಾರಿಗಳು/ ಸಿಬ್ಬಂದಿಯವರಿಗೆ “ಕಬ್ಬು ಉತ್ಪಾದನೆ ಹೆಚ್ಚಿಸಲು, ಮಣ್ಣು ಪರೀಕ್ಷೆ ಮಹತ್ವ, ಸುಸ್ಥಿರ ಮಣ್ಣಿನ ಫಲವತ್ತತೆ ಮತ್ತು ಸಮಸ್ಯಾತ್ಮಕ ಮಣ್ಣು ನಿರ್ವಹಣೆ ಹಾಗೂ ಕುಳೆ ಕಬ್ಬು ನಿರ್ವಹಣೆ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ರಾಜಗೋಪಾಲ ಅಧ್ಯಕ್ಷತೆಯನ್ನು ವಹಿಸಿದ್ದರು, ಹಾಗೂ ಡಾ|| ಎಸ್.ಜಿ ಪಾಟೀಲ, ವಿಶ್ರಾಂತ ವಿಸ್ತರಣಾ ನಿರ್ದೇಶಕರು ಕೃಷಿ ವಿಶ್ವವಿದ್ಯಾಲಯ ರಾಯಚೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಚಾರ ಸಂಕಿರಣದ ಅತಿಥಿ ಉಪನ್ಯಾಸಕರಾಗಿ ಡಾ|| ಎಸ್. ಎಸ್. ನೂಲಿ, ಬೆಸಾಯ ತಜ್ಞರು, ಮತ್ತು ಡಾ|| ವ್ಹಿ.ಬಿ. ಕುಲಗೋಡ, ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಮಣ್ಣು ವಿಜ್ಞಾನ ವಿಭಾಗ ಕೃಷಿ ವಿಶ್ವವಿದ್ಯಾಲಯ ಧಾರವಾಡ ಇವರು ಭಾಗವಹಿಸಿದ್ದರು. ಸಸಿಗೆ ನೀರು ಉಣಿಸುವ ಮುಖಾಂತರ ಹಾಗೂ ರೈತ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಿಚಾರ ಸಂಕಿರಣದ ಅಧ್ಯಕ್ಷೀಯ ಭಾಷಣದಲ್ಲಿ ರಾಜಗೋಪಾಲ ಅವರು ಮಾತನಾಡುತ್ತಾ ಸಂಸ್ಥೆಯಲ್ಲಿ ಕಬ್ಬು ಕೃಷಿ ಹಾಗೂ ಸಂಶೋಧನೆಗೆ ಸಂಬAಧಿಸಿದAತೆ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ, ಕಾರ್ಖಾನೆ ಸಿಬ್ಬಂದಿ ಮತ್ತು ಕಬ್ಬು ಬೆಳೆಗಾರರಿಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಕಬ್ಬಿನ ಇಳುವರಿ ಹೆಚ್ಚಿಸಲು ಮಣ್ಣಿನ ಫಲವತ್ತತೆ ಬಹಳ ಮುಖ್ಯವಾದದ್ದು ಎಂದು ತಿಳಿಸಿದರು, ಅಲ್ಲದೇ ಸಂಸ್ಥೆಯಲ್ಲಿ ಜೈವಿಕ ಗೊಬ್ಬರ ಹಾಗೂ ಪ್ರಾಯೋಗಿಕವಾಗಿ ಜೈವಿಕ ಪೀಡೆನಾಶಕಗಳನ್ನು ಉತ್ಪಾದಿಸಿ ಕಾರ್ಖಾನೆ ಹಾಗೂ ರೈತರಿಗೆ ಪೂರೈಸಲಾಗುತ್ತಿದೆ ಇದರಿಂದ ಮಣ್ಣಿನಲ್ಲಿ ಉಂಟಾಗುವ ಸಮಸ್ಯೆಗಳನ್ನು ನಿರ್ವಹಣೆ ಮಾಡಬಹುದು, ಪ್ರಸ್ತುತ ಸ್ಥಿತಿಯಲ್ಲಿ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸಭಲತೆಯನ್ನು ಕಾಯ್ದುಕೊಳ್ಳಬೇಕಾದರೆ ಪ್ರತಿಯೊಂದು ಕಾರ್ಖಾನೆಯವರು ಕಬ್ಬು ಅಭಿವೃದ್ಧಿ ವಿಭಾಗದಿಂದ ಸಮಸ್ಯಾತ್ಮ ಮಣ್ಣು ನಿರ್ವಹಣೆಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅತ್ಯವಶ್ಯವಿದೆ ಎಂದು ತಿಳಿಸಿದರು. ಕಾರ್ಖಾನೆ ಸಿಬ್ಬಂದಿಗೆ ಹಾಗೂ ಕಬ್ಬು ಬೆಳೆಗಾರರಿಗೆ ಸಂಸ್ಥೆಯಲ್ಲಿ ಮತ್ತು ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಬೆಳೆ ಸಂಬAಧಿತ ತರಬೇತಿ ಮಣ್ಣಿನ ಫಲವತ್ತೆಯ ಬಗ್ಗೆ ಕಾರ್ಯಕ್ರಮಗಳನ್ನು ಸತತವಾಗಿ ಹಮ್ಮಿಕೊಳ್ಳುತ್ತಿದ್ದು, ಪ್ರತಿ ಕಾರ್ಖಾನೆಯವರು ಸಂಸ್ಥೆಯಿAದ ಸದರಿ ವಿಸ್ತರಣಾ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಮುಖ್ಯ ಅತಿಥಿಗಳಾದ ಡಾ|| ಎಸ್.ಜಿ ಪಾಟೀಲ, ಅವರು ಮಾತನಾಡುತ್ತಾ ಭಾರತೀಯ ಕೃಷಿಯಲ್ಲಿ ಮಣ್ಣಿನ ಆರೋಗ್ಯ ಕಾಪಾಡುವುದು ಬಹುಮುಖ್ಯವಾಗಿದೆ, ಇತ್ತೀಚಿನ ವರ್ಷಗಳಲ್ಲಿ ಕೃಷಿಯಲ್ಲಿ ನೀರು ಮತ್ತು ಪೋಷಕಾಂಶಗಳನ್ನು ವ್ಯತಿರೀಕ್ತವಾಗಿ ಹಾಗೂ ಅಸಮತೋಲನವಾಗಿ ಬಳಕೆ ಮಾಡುತ್ತಿರುವದರಿಂದ ಮಣ್ಣಿನ ಪೋಷಕಾಂಶಗಳಲ್ಲಿ ಅಸಮತೋಲನೆ ಕಂಡು ಬರುತ್ತಿದ್ದು ಹಾಗೂ ಬಹಳಷ್ಟು ಪ್ರಮಾಣದಲ್ಲಿ ಸವಳು-ಜವಳು ಪ್ರಮಾಣ ಹೆಚ್ಚುತ್ತಿದ್ದು, ಇದರಿಂದ ಬೆಳೆಗಳ ಇಳುವರಿ ಮತ್ತು ಗುಣಮಟ್ಟದ ಮೇಲೆ ಬಹಳಷ್ಟು ದುಷ್ಪರಿಣಾಮವಾಗುತ್ತಿದೆ. ಕಾರಣ ಮಣ್ಣಿನ ಆರೋಗ್ಯ ಕಾಪಾಡಲು ಹೆಚ್ಚಿನ ಪ್ರಮಾಣದಲ್ಲಿ ಸಾವಯವ ವಸ್ತು ಮತ್ತು ಜೈವಿಕ ಗೊಬ್ಬರಗಳ ಬಳಕೆ ಮಾಡುವುದು ಅನಿವಾರ್ಯವಿದೆ ಎಂದು ತಿಳಿಸಿದರು. ಸಮಸ್ಯಾತ್ಮಕ ಮಣ್ಣುಗಳನ್ನು ವೈಜ್ಞಾನಿಕವಾಗಿ ಸುಧಾರಣೆ ಮಾಡುವ ಮಾರ್ಗೋಪಾಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.

ತಾಂತ್ರಿಕ ಉಪನ್ಯಾಸದಲ್ಲಿ ಡಾ|| ವ್ಹಿ.ಬಿ. ಕುಲಗೋಡ ಮಣ್ಣು ವಿಜ್ಞಾನಿಗಳು, ಅವರು ಮಾತನಾಡುತ್ತಾ ಮಣ್ಣಿನ ಪರೀಕ್ಷೆಯ ಮಹತ್ವ ಮತ್ತು ಮಣ್ಣು ಮಾದರಿ ತೆಗೆಯುವ ಹಾಗೂ ಇದರಿಂದಾಗುವ ಅನುಕೂಲತೆಗಳ ಬಗ್ಗೆ ವೈಜ್ಞಾನಿಕವಾಗಿ ತಿಳಿಸಿಕೊಟ್ಟರು. ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಹಾಗೂ ಬೆಳೆ ಇಳುವರಿ ಹೆಚ್ಚಿಸಲು ಅನುಸರಿಸಬೇಕಾದ ವೈಜ್ಞಾನಿಕ ಮಾಹಿತಿಯನ್ನು ನೀಡಿದರು.
ಡಾ|| ಎಸ್. ಎಸ್. ನೂಲಿ, ಬೇಸಾಯ ತಜ್ಞರು, ಅವರು ತಾಂತ್ರಿಕ ಉಪನ್ಯಾಸದಲ್ಲಿ ಕಬ್ಬಿನ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯುವ ಬಗ್ಗೆ ವೈಜ್ಞಾನಿಕ ಮಾರ್ಗೋಪಾಯಗಳು ಮತ್ತು ಕುಳೆ ಕಬ್ಬು ವೈಜ್ಞಾನಿಕ ರೀತಿಯಿಂದ ನಿರ್ವಹಣೆ ಮಾಡಿ ಹೆಚ್ಚಿನ ಇಳುವರಿ ಪಡೆಯುವ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.

ಸಂಸ್ಥೆಯ ಕೃಷಿ ವಿಭಾಗದ ಮುಖ್ಯಸ್ಥರಾದ ಆರ್.ಬಿ. ಸುತಗುಂಡಿ ಅವರು ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು. ಸಂತೋಷಕುಮಾರ ಪೂಜಾರಿಯವರು ಕಾರ್ಯಕ್ರಮದ ಸ್ವಾಗತಿಸಿದರು. ಸಚಿನ ಘಟಕಾಂಬಳೆ ಅವರು ವಂದನಾರ್ಪನೆಯನ್ನು ಸಲ್ಲಿಸಿದರು.
ಸದರಿ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ೧೧೦ ಕ್ಕೂ ಅಧಿಕ ಕಾರ್ಖಾನೆಗಳ ಕಬ್ಬು ಅಭಿವೃದ್ಧಿ ವಿಭಾಗದ ಅಧಿಕಾರಿಗಳು/ಸಿಬ್ಬಂದಿಯವರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು ಭಾಗಹಿಸಿದ ಶಿಭಿರಾರ್ಥಿಗಳಿಗೆ ವಿಷಯಕ್ಕೆ ಸಂಬAಧಿಸಿದ ಕರಪತ್ರಗಳನ್ನು ವಿತರಿಸಲಾಯಿತು.

Tags:

error: Content is protected !!