BELAGAVI

ರಾಮತೀರ್ಥನಗರದ ಬುಡಾ ಜಾಗೆಯಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ಅತಿಕ್ರಮಣ!!!!??

Share

ಬೆಳಗಾವಿಯ ರಾಮತೀರ್ಥನಗರದ ಬುಡಾ ಜಮೀನನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯೂ ಅನಧಿಕೃತವಾಗಿ ತನ್ನ ಸುಪರ್ದಿಗೆ ಪಡೆಯುತ್ತಿದೆ ಎಂದು ಆರೋಪಿಸಿ ರಾಮತೀರ್ಥನಗರದ ರಹಿವಾಸಿಗಳು ಧರಣಿಯನ್ನು ನಡೆಸಿದರು. ಜಮೀನಿನಲ್ಲಿ ನಿರ್ಮಿಸಲಾಗಿದ್ದ ಕಂಪೌಂಡ್ ಗೋಡೆಯನ್ನು ಅಧಿಕಾರಿಗಳು ತೆರವುಗೊಳಿಸಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಬೆಳಗಾವಿ ರಾಮತೀರ್ಥನಗರದಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೇಲಿನ ಮುಂಭಾಗದಲ್ಲಿ ಬುಡಾ ಜಮೀನಿದ್ದು ಅದನ್ನು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳು ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡು ಕಂಪೌಂಡ್ ಗೋಡೆ ನಿರ್ಮಿಸಿದ್ದಾರೆಂದು ಆರೋಪಿಸಿ ರಾಮತೀರ್ಥನಗರದ ರಹಿವಾಸಿಗಳು ಧರಣಿಯನ್ನು ನಡೆಸಿದರು.

ಬೆಳಗಾವಿಯ ರಾಮತೀರ್ಥನಗರದ ಗಣೇಶ ಸರ್ಕಲ್ ಹತ್ತಿರ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಸತಿ ನಿಲಯದ ಎದುರಿಗಿನ ಬುಡಾದ ಸಿಎ ನಿವೇಶನವನ್ನು ಕೇಳದೇ ತಮ್ಮ ಸುಪರ್ದಿಗೆ ಪಡೆದು ಅಭಿವೃದ್ಧಿಗೆ ಮುಂದಾಗಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಲು ಮೀನಮೀಷ ಎಣಿಸುವ ಅಧಿಕಾರಿಗಳು, ಈಗ ಬುಡಾ ಜಾಗವನ್ನು ಕಬಳಿಸಲು ಹೊರಟಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಮೊದಲೇ ಎಚ್ಚೆತ್ತುಕೊಂಡು ಕಂಪೌಂಡ್ ನಿರ್ಮಿಸಿರುವುದಾಗಿ ಒಪ್ಪಿಕೊಂಡ ಅಧಿಕಾರಿಯೇ ಸ್ವತಃ ಅದನ್ನು ಕೆಡುವಬೇಕು. ಅಲ್ಲಿಯ ವರೆಗೂ ನಾವೂ ಧರಣಿಯನ್ನು ಕೈಬಿಡಲ್ಲ ಎಂದು ಮಹಾಂತೇಶ ವಕ್ಕುಂದ ಎಚ್ಚರಿಕೆಯನ್ನು ನೀಡಿದರು.

ರಾಮತೀರ್ಥನಗರದಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯವಿದೆ. ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳು ಸಿಗುತ್ತಿಲ್ಲ. ಅಂತಹದ್ದರಲ್ಲಿ ಕಣಬರ್ಗಿ ರಸ್ತೆಗೆ ಸಂಪರ್ಕವಾದ ಒಂದು ಬುಡಾ ಜಮೀನಿನಲ್ಲಿ ತಮ್ಮ ವ್ಯಾಪ್ತಿ ಮೀರಿ ಕಂಪೌಂಡ್ ಹಾಕಿಸಿದ್ದಾರೆ. ಈ ಕೆಲಸವನ್ನು ಕೈಗೊಂಡ ಅಧಿಕಾರಿಯನ್ನು ವಜಾಗೊಳಿಸಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಇನ್ನೋರ್ವ ಹೋರಾಟಗಾರರು ಒತ್ತಾಯಿಸಿದರು.

ಉಪಮಹಾಪೌರ ಹಣುಮಂತ ಕೊಂಗಾಲಿ ಅವರು ಬಹಳಷ್ಟು ಹೋರಾಟಗಳ ಬಳಿಕ ರಾಮತೀರ್ಥನಗರದಲ್ಲಿ ಅಭಿವೃದ್ಧಿ ಪರ್ವವನ್ನು ಆರಂಭಿಸಲಾಗಿದೆ. 20 ಗುಂಟೆ ಜಮೀನನ್ನು ಪಾರ್ಕಿಗಾಗಿ ಮೀಸಲಿಡಲಾಗಿತ್ತು. ಇನ್ನುಳಿದದ್ದು ಹಾಸ್ಟೆಲಿಗೆ ಮಂಜೂರಾಗಿದೆ. ಆದರೇ ಅಧಿಕಾರಿಗಳ ಬೇಜವಾಬ್ದಾರಿ ಇದರಲ್ಲಿ ಕಂಡು ಬರುತ್ತಿದೆ. ರಾಮತೀರ್ಥನಗರದ ಝಿರೋ ಪಾಯಿಂಟ್ ಇದಾಗಿದ್ದು, ಅಮೃತ ಯೋಜನೆಯಡಿ 10 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಯುಜಿಡಿ ಸಂಪರ್ಕ ಪೂರ್ಣಗೊಂಡಾಗ ಇಲ್ಲಿ ಪ್ಲಾಂಟ್ ನಿರ್ಮಿಸಿ ಅಲಾರವಾಡಕ್ಕೆ ಸಂಪರ್ಕ ಕಲ್ಪಿಸಲಾಗುವುದು. ಆದರೇ ಈ ಯೋಜನೆಯನ್ನು ಹಾಳುಗೆಡವಲು ಬಂದಿದ್ದಾರೆ. ಈಗಾಗಲೇ ಲೋಕಾಯುಕ್ತರು ಮತ್ತು ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಲಾಗಿದೆ ಎಂದರು.

ಸ್ಥಳೀಯರ ತೀವ್ರ ಪ್ರತಿಭಟನೆ ಹಾಗೂ ಆಕ್ರೋಶಕ್ಕೆ ಮಣಿದ ಅಧಿಕಾರಿಗಳು, ಕೊನೆಗೆ ಸ್ಥಳಕ್ಕೆ ಆಗಮಿಸಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಕಂಪೌಂಡ್ ಗೋಡೆಯನ್ನು ತೆರವುಗೊಳಿಸಿದರು. ಜಮೀನು ಕಬಳಿಸುವ ಪ್ರಯತ್ನಕ್ಕೆ ತಡೆಯುಂಟಾದ ಹಿನ್ನೆಲೆಯಲ್ಲಿ ನಿವಾಸಿಗಳು ತಮ್ಮ ಧರಣಿಯನ್ನು ಹಿಂಪಡೆದರು.

Tags:

error: Content is protected !!