Belagavi

ಬೆಳಗಾವಿಯಲ್ಲಿ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಮೇಲೆ ದಾಳಿ: ಓರ್ವನ ಬಂಧನ, ನಗದು ಜಪ್ತಿ

Share

• ಬೆಳಗಾವಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ಮೇಲೆ ದಾಳಿ

• ಮಾರ್ಕೆಟ್ ಠಾಣೆ ಪೊಲೀಸರಿಂದ ಓರ್ವ ಆರೋಪಿಯ ಬಂಧನ
• ನಗದು ಹಾಗೂ ಮೊಬೈಲ್ ಸೇರಿ ಬೆಲೆಬಾಳುವ ವಸ್ತು ಜಪ್ತಿ
• ಐವರು ಆರೋಪಿಗಳಿಗಾಗಿ ಪೊಲೀಸರಿಂದ ತೀವ್ರ ಶೋಧ ಕಾರ್ಯ

ಬೆಳಗಾವಿಯಲ್ಲಿ ಐಪಿಎಲ್‌ ಕ್ರಿಕೆಟ್‌ ಹಬ್ಬದ ನಡುವೆ ಬೆಟ್ಟಿಂಗ್‌ ದಂಧೆಕೋರರ ಅಟ್ಟಹಾಸ ಮುಂದುವರೆದಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಾರ್ಕೆಟ್‌ ಠಾಣಾ ಪೊಲೀಸರು ದೊಡ್ಡ ಜಾಲವೊಂದನ್ನು ಭೇದಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಆನ್‌ಲೈನ್‌ ಮೂಲಕ ಹಣ ಕಟ್ಟಿಸಿಕೊಳ್ಳುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ, ತನಿಖೆ ಚುರುಕುಗೊಳಿಸಿದ್ದಾರೆ.
ಬೆಳಗಾವಿಯ ಜೈಲ್‌ ಗ್ರೌಂಡ್‌ ಸಮೀಪದ ಮರಾಠಿ ಶಾಲೆ ಹತ್ತಿರ ಆನ್‌ಲೈನ್‌ ಮೂಲಕ ಐಪಿಎಲ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಸುಫಿಯಾನ್‌ ಅಬ್ದುಲ್‌ಸಲಾಮ್‌ ಶೇಖ್‌ ಎಂಬಾತನನ್ನು ಮಾರ್ಕೆಟ್‌ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಎಸ್‌ಐ ವಿಠಲ ಹಾವನ್ನವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಬಂಧಿತನಿಂದ 5,600 ರೂಪಾಯಿ ನಗದು ಹಾಗೂ ಮೊಬೈಲ್‌ ಸೇರಿ ಒಟ್ಟು 10,500 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಶಾಹಿದ್‌, ಪ್ರತೀಕ್‌ ಸೇರಿದಂತೆ ಇತರ ಐವರು ಆರೋಪಿಗಳ ಕೈವಾಡವಿರುವುದು ಪತ್ತೆಯಾಗಿದ್ದು, ಕೆ.ಪಿ. ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Tags:

error: Content is protected !!