Belagavi

ಖಾಸಗಿ ಮಾರುಕಟ್ಟೆ ವ್ಯಾಪಾರಿಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ವಿಲೀನಗೊಳಿಸಿ ಬೆಳಗಾವಿ ಎಪಿಎಂಸಿ ಕಚೇರಿ ಎದುರು ಮೂಲ ವ್ಯಾಪಾರಿಗಳಿಗಂದ ಪ್ರತಿಭಟನೆ; ಜಿಲ್ಲಾಡಳಿತದ ನಡೆಗೆ ಅಸಮಾಧಾನ

Share

• ಬೆಳಗಾವಿ ಎಪಿಎಂಸಿ ಕಚೇರಿ ಎದುರು ಪ್ರತಿಭಟನೆ
• ಖಾಸಗಿ ವ್ಯಾಪಾರಿಗಳ ವಿಲೀನಕ್ಕೆ ಮೂಲ ವ್ಯಾಪಾರಿಗಳ ಪಟ್ಟು
• ಒಂದೇ ಆವರಣದಲ್ಲಿ ಎರಡು ಮಾರುಕಟ್ಟೆ; ದರದಲ್ಲಿ ವ್ಯತ್ಯಾಸ
• ಜಿಲ್ಲಾಡಳಿತದ ನಡೆಗೆ ಮೂಲ ಮಾರುಕಟ್ಟೆ ವ್ಯಾಪಾರಿಗಳ ಆಕ್ರೋಶ

ಕಾನೂನು ಹೋರಾಟದಲ್ಲಿ ಸೋತರೂ ಜೈ ಕಿಸಾನ್ ತರಕಾರಿ ಮಾರುಕಟ್ಟೆಯವರಿಗೆ ಸರ್ಕಾರಿ ಎಪಿಎಂಸಿಯಲ್ಲಿ ವಿಶೇಷ ಸೌಲಭ್ಯ ನೀಡಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಎಪಿಎಂಸಿಯ ಮೂಲ ವ್ಯಾಪಾರಿಗಳು ಮತ್ತು ರೈತರ ಅನಾಕೂಲಕ್ಕೆ ಕಾರಣವಾಗುತ್ತಿದ್ದು, ಕೂಡಲೇ ಅವರನ್ನು ಮುಖ್ಯ ಮಾರುಕಟ್ಟೆಯಲ್ಲಿ ವಿಲೀನಗೊಳಿಸಬೇಕೆಂದು ಒತ್ತಾಯಿಸಿ ಇಂದು ಎಪಿಎಂಸಿ ಕಾರ್ಯಾಲಯದ ಎದುರು ಎಪಿಎಂಸಿಯ ಮೂಲ ವ್ಯಾಪಾರಿಗಳು ಪ್ರತಿಭಟನೆಯನ್ನು ನಡೆಸಿದರು.

ಬೆಳಗಾವಿಯ ಸರ್ಕಾರಿ ಎಪಿಎಂಸಿಯಲ್ಲಿ ವಿಶೇಷ ಸೌಲಭ್ಯ ನೀಡಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಎಪಿಎಂಸಿಯ ಮೂಲ ವ್ಯಾಪಾರಿಗಳು ಮತ್ತು ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಖಂಡಿಸಿ ಇಂದು ಎಪಿಎಂಸಿಯ ಮೂಲ ವ್ಯಾಪಾರಿಗಳು ಎಪಿಎಂಸಿ ಕಾರ್ಯಾಲಯದ ಎದುರು ಪ್ರತಿಭಟನೆಯನ್ನು ನಡೆಸಿದರು.

ಬೆಳಗಾವಿಯ ಖಾಸಗಿ ತರಕಾರಿ ಮಾರುಕಟ್ಟೆ ಬಂದ್ ಆದ ಹಿನ್ನೆಲೆ ಅಲ್ಲಿನ ವ್ಯಾಪಾರಿಗಳಿಗೆ ಕಳೆದ 8 ತಿಂಗಳುಗಳಿಂದ ಖಾಸಗಿ ಮಾರುಕಟ್ಟೆಯ ವ್ಯಾಪಾರಿಗಳಿಗೆ ರವಿವಾರದ ರೈತರ ಸಂತೆಯಲ್ಲಿನ ಮಳಿಗೆಗಳನ್ನು ನೀಡಲಾಗಿದೆ. ಇದರಿಂದಾಗಿ ಎಪಿಎಂಸಿಯಲ್ಲಿಯೇ ಎರಡು ಮಾರುಕಟ್ಟೆಗಳು ಸೃಷ್ಠಿಯಾಗಿ ರೈತರಿಗೆ ದರಗಳಲ್ಲಿ ವ್ಯತ್ಯಾಸಗಳು ಕಾಣಿಸುತ್ತಿವೆ. ಜಿಲ್ಲಾಡಳಿತವು ಮಧ್ಯಸ್ಥಿಕೆ ವಹಿಸಿ ಪ್ರಮುಖ ಮಾರುಕಟ್ಟೆಯಲ್ಲಿಯೇ ಖಾಸಗಿಯವರನ್ನು ವಿಲೀನಗೊಳಿಸಬೇಕೆಂದು ವ್ಯಾಪಾರಿ ಸದಾನಂದ ಪಾಟೀಲ್ ಆಗ್ರಹಿಸಿದರು.

ಖಾಸಗಿ ತರಕಾರಿ ಮಾರುಕಟ್ಟೆಯವರಿಗೆ ನ್ಯಾಯಾಲಯದ ತೀರ್ಪು ಬರುವವರೆಗೂ ಎಪಿಎಂಸಿಯ ರವಿವಾರದ ರೈತರ ಸಂತೆಯಲ್ಲಿ ಅವಕಾಶ ಮಾಡಿ ಕೊಟ್ಟಿದ್ದು, ಆದರೇ, ಖಾಸಗಿ ತರಕಾರಿ ಮಾರುಕಟ್ಟೆಯವರು ಕಾನೂನು ಹೋರಾಟದಲ್ಲಿ ಸೋತಿದ್ದು, ಅವರಿಗೆ ವಿಶೇಷ ಮಾರುಕಟ್ಟೆಯ ಸೌಲಭ್ಯವನ್ನು ನೀಡದೇ, ಅವರನ್ನು ಕೂಡ ಮುಖ್ಯ ಮಾರುಕಟ್ಟೆಯಲ್ಲಿ ವಿಲೀನಗೊಳಿಸಬೇಕು. 2 ಬಗೆಯ ಮಾರುಕಟ್ಟೆಯಿಂದ ರೈತರ ಉತ್ಪನ್ನಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಖಾಸಗಿಯವರಿಂದ ಬಾಡಿಗೆ ಪಡೆಯದೇ ಎಲ್ಲ ಅನುಕೂಲ ಮಾಡಿಕೊಟ್ಟಿದ್ದು, ಎಪಿಎಂಸಿಯಲ್ಲಿ ಬಾಡಿಗೆ ನೀಡಿ ಮಳಿಗೆ ಪಡೆದವರ ಮೇಲೆ ಅನ್ಯಾಯವಾಗಿದೆ ಎಂದು ಸತೀಶ್ ಪಾಟೀಲ್ ಹೇಳಿದರು.

ಇನ್ನು ಎಪಿಎಂಸಿ ಕಾರ್ಯದರ್ಶಿಗಳು ಖಾಸಗಿ ಮಾರುಕಟ್ಟೆ ರದ್ಧಾದ ಹಿನ್ನೆಲೆ ರವಿವಾರದ ರೈತರ ಸಂತೆಯಲ್ಲಿ ಅಲ್ಲಿನ ವ್ಯಾಪಾರಿಗಳಿಗೆ ಅವಕಾಶವನ್ನು ನೀಡಲಾಗಿತ್ತು. ಅದರ ಅವಧಿಯನ್ನು ಈಗ ವಿಸ್ತರಿಸಲಾಗಿದೆ. ಜಿಲ್ಲಾಡಳಿತದ ಆದೇಶದಂತೆ ಮುಖ್ಯ ಮಾರುಕಟ್ಟೆಯ ಪ್ರಾಂಗಣದಲ್ಲಿ ಅವರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತೇವೆ. ಖಾಸಗಿ ಮಾರುಕಟ್ಟೆಯ ವ್ಯಾಪಾರಿಗಳಿಂದ ವಿದ್ಯುತ್ ಸೇರಿದಂತೆ ಇನ್ನುಳಿದ ಬಿಲ್’ಗಳನ್ನು ಆಕರಿಸಲಾಗುತ್ತಿದೆ ಎಂದರು.

ಈ ವೇಳೆ ಎಪಿಎಂಸಿಯ ಮಾಜಿ ಅಧ್ಯಕ್ಷರು, ವ್ಯಾಪಾರಿಗಳು ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!