• ಬೆಳಗಾವಿಯಲ್ಲಿ ಎರಡು ದಿನಗಳ ಜೀತೋ ಹರ್ಷೋತ್ಸವ
• ವಿಶ್ವಮಟ್ಟದಲ್ಲಿ ಬೆಳಗಾವಿ ಪರಿಚಯಿಸಿದ ಜೀತೋ ಸಂಸ್ಥೆ
• ಆರ್ಥಿಕತೆಯಲ್ಲಿ ಭಾರತ 3ನೇ ಸ್ಥಾನಕ್ಕೆ: ಸುನೀಲ್ ಶಿಂಘಿ
• ಐಎಎಸ್, ಐಪಿಎಸ್ ಪರೀಕ್ಷಾರ್ಥಿಗಳಿಗೆ ಜೀತೋ ಪ್ರೋತ್ಸಾಹ

ಬೆಳಗಾವಿ ತನ್ನ ವೈಶಿಷ್ಟ್ಯತೆಗಳಿಂದ ಖ್ಯಾತಿಯನ್ನು ಪಡೆದಿದೆ. ಆದರೇ, ವಿಶ್ವಮಟ್ಟದಲ್ಲಿ ಬೆಳಗಾವಿಯನ್ನು ಪರಿಚಯಿಸುವ ಕಾರ್ಯವನ್ನು ಜೀತೋ ತನ್ನ ಕಾರ್ಯಚಟುವಟಿಕೆಗಳಿಂದ ಮಾಡಿದೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಹೇಳಿದರು.

ಕಳೆದ ಹಲವಾರು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿರುವ ಜೈನ ಇಂಟರ್ ನ್ಯಾಶನಲ್ ಟೈಡ್ ಆರ್ಗನೈಸೇಶನ್ ಜೀತೋ ಹಾಗೂ ಜಿತೋ ಕೆಕೆಜಿ ವಲಯ ಸಹಯೋಗದೊಂದಿಗೆ ಇಂದಿನಿಂದ ಎರಡು ದಿನಗಳ ಕಾಲ ಜೀತೋ ಹರ್ಷೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ್, ಉಪಾಧ್ಯಕ್ಷರಾದ ವಿಕ್ರಮ್ ಜೈನ್, ಪ್ರಧಾನ ಕಾರ್ಯದರ್ಶಿ ದಿಲೀಪ್ ಜೈನ್, ಜೀತೋ ಕಾರ್ಯದರ್ಶಿ ಶ್ರೀಪಾಲ್ ಬಚಾವತ್, ನ್ಯಾಷನಲ್ ಟ್ರೇಡರ್ಸ್ ವೆಲ್’ಫರ್ ಬೋರ್ಡಿನ ಅಧ್ಯಕ್ಷ ಸುನೀಲ್ ಶಿಂಘಿ, ಡಿಐಸಿ ಅಧ್ಯಕ್ಷ ಪ್ರವೀಣ್ ಭಾಪನಾ, ಜೀತೋ ಅಧ್ಯಕ್ಷ ಹರ್ಷವರ್ಧನ ಇಂಚಲ್, ಜೀತೋ ನಿರ್ದೇಶಕ ನರೇಂದ್ರಸಿಂಗ್ ಸಮರ್, ಡಿಐಸಿ ಮೈನಾರಿಟಿ ಪುಷ್ಪಕ್ ಹಣಮನ್ನವರ, ಜೀತೋ ಪ್ರಧಾನ ಕಾರ್ಯದರ್ಶಿ ಅಭಯ್ ಆದಿಮನಿ ಸೇರಿದಂತೆ ಇನ್ನುಳಿದ ಗಣ್ಯರು ಸಮಾರಂಭಕ್ಕೆ ಚಾಲನೆಯನ್ನು ನೀಡಿದರು. ರಾಷ್ಟ್ರೀಯ ವ್ಯಾಪಾರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸುನೀಲ್ ಶಿಂಘಿ ಅವರು ಚಿನ್ನದ ಹಕ್ಕಿಯಾಗಿದ್ದ ಭಾರತದ ರಾಜಧಾನಿ ಮೊದಲು ಕೊಲಕತ್ತಾ ಆಗಿತ್ತು. ಆದರೇ, ಆಂಗ್ಲರು ಭಾರತಕ್ಕೆ ವ್ಯಾಪಾರಕ್ಕೆಂದು ಬಂದು ಭಾರತದ ಮೇಲೆಯೇ ಆಳ್ವಿಕೆಯನ್ನು ನಡೆಸಿದರು. ನಂತರ ದೇಶವೂ ಅಧೋಗತಿಗೆ ಬಂದಿತ್ತು. ಆದರೇ, 2014 ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದು, ಗುಜರಾತ್ ಮಾದರಿಯಲ್ಲಿ ಆಡಳಿತವನ್ನು ನಡೆಸಿ ಚಿನ್ನದ ಹಕ್ಕಿಯಾಗಿದ್ದ ಭಾರತದ ಪರಿಸ್ಥಿತಿಯನ್ನು ಅವಲೋಕಿಸುವಂತೆ ಮಾಡಿ, ದೇಶದಲ್ಲಿ ಪರಿವರ್ತನೆಯನ್ನು ಮಾಡಿದ್ದಾರೆ. 2014 ರಲ್ಲಿ ದೇಶವು ಆರ್ಥಿಕತೆಯೂ 14ನೇ ಸ್ಥಾನದಲಿದ್ದನ್ನು ಈಗ 3ನೇ ಸ್ಥಾನದಲ್ಲಿ ಮುಂದುವರೆಯುತ್ತಿದೆ. ವಿಶ್ವದಲ್ಲಿ ಸಂಕಷ್ಟವಿದ್ದರೂ ಪಿಎಂ ಮೋದಿ ನೇತೃತ್ವದಲ್ಲಿ ದೇಶದ ಆಡಳಿತವನ್ನು ಸುಗಮವಾಗಿ ನಡೆಸಲಾಗುತ್ತಿದೆ ಎಂದರು.
ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ಮಾತನಾಡುತ್ತ ಬೆಳಗಾವಿ ತನ್ನ ವೈಶಿಷ್ಟ್ಯತೆಗಳಿಂದ ಖ್ಯಾತಿಯನ್ನು ಪಡೆದಿದೆ. ಆದರೇ, ವಿಶ್ವಮಟ್ಟದಲ್ಲಿ ಬೆಳಗಾವಿಯನ್ನು ಪರಿಚಯಿಸುವ ಕಾರ್ಯವನ್ನು ಜೀತೋ ತನ್ನ ಕಾರ್ಯಚಟುವಟಿಕೆಗಳಿಂದ ಮಾಡಿದೆ. ಜೀತೋ ರಾಜಕೀಯದಲ್ಲಿ ಆದರತೆಯ ಭಾವನೆಯನ್ನು ಹುಟ್ಟು ಹಾಕಿದೆ. ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಕಾರ್ಯವನ್ನು ಜೀತೋ ಮಾಡುತ್ತದೆ. ಜೀತೋ ಉದ್ಯಮಿಗಳು ಬೆಳಗಾವಿಯೆಡೆಯೂ ಮುಖ ಮಾಡಬೇಕು. ಜೀತೋ ಐಎಎಸ್, ಐಪಿಎಸ್ ಪರೀಕ್ಷಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮಹತ್ತರ ಕಾರ್ಯವನ್ನು ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಜೀತೋ ಪದಾಧಿಕಾರಿಗಳು ಇನ್ನುಳಿದವರು ಉಪಸ್ಥಿತರಿದ್ಧರು.
