• ಬಸವನ ಕುಡಚಿಯಲ್ಲಿ ಸಾಯಿಬಾಬಾ ಮಂದಿರ ಲೋಕಾರ್ಪಣೆ
• ಹಲವು ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ
• ಶಾಸಕ ಅಭಯ್ ಪಾಟೀಲ್, ಹಟ್ಟಿಹೊಳಿ ಭಾಗಿ
• ಭಕ್ತಿ ಪರವಶರಾದ ಸಾಯಿಶ ಕಾಲನಿ ಭಕ್ತರು

ಬೆಳಗಾವಿಯ ಬಸವನ ಕುಡಚಿಯ ಸಾಯಿಶ ಕಾಲನಿಯಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಹಲವಾರು ಮಠಾಧೀಶರ ಸಾನಿಧ್ಯ ಹಾಗೂ ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ಭಕ್ತ ಸಾಗರದ ನಡುವೆ ಈ ಪುಣ್ಯ ಕಾರ್ಯಕ್ರಮ ನೆರವೇರಿತು.
ಮಾಜಿ ಸೈನಿಕ ರುದ್ರಪ್ಪಾ ಚೌಲಿಗೇರ ಹಾಗೂ ಡಾ. ಸತೀಶ್ ಚೌಲಿಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ನಾಡಿನ ಪ್ರಮುಖ ಮಠಾಧೀಶರಾದ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಜೀ, ಶ್ರೀ ಪ್ರಭುನೀಲಕಂಠ ಮಹಾಸ್ವಾಮಿಜೀ, ಶ್ರೀ ಸಿದ್ಧಬಸವ ದೇವರು, ಶ್ರೀ ಜಗದ್ಗುರು ಶೂನ್ಯ, ಶ್ರೀ ಗುರುಸಿದ್ಧ ಮಹಾಸ್ವಾಮಿಜೀ, ಶ್ರೀ ಅಡವೇಶ್ವರ ದೇವರು, ಶ್ರೀ ಶ್ರೀ ವಿಠ್ಠಲ ಸ್ವರೂಪ ಸ್ವಾಮಿಜೀ, ಡಾ. ನೀಲಕಂಠಯ್ಯಾ ಶಾಸ್ತ್ರೀಜೀ ಹಿರೇಮಠ, ಶ್ರೀ ಚಂದ್ರಶೇಖರ್ ಶಿವಾಚಾರ್ಯ ಸ್ವಾಮಿಜೀ, ಶ್ರೀ ವಿಜಯಾನಂದ ಸ್ವಾಮಿಜೀ ಮತ್ತು ಶ್ರೀ ಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜೀಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಹಾಗೂ ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಡಾ. ಸತೀಶ್ ಚೌಲಿಗೇರ್ ಅವರು, ಮಂದಿರದ ನಿರ್ಮಾಣ ಹಾಗೂ ಪ್ರತಿಷ್ಠಾಪನಾ ಕಾರ್ಯದ ಬಗ್ಗೆ ಮಾಹಿತಿ ನೀಡಿ, ಈ ಧಾರ್ಮಿಕ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ದಲಿತ ಮುಖಂಡ ಮಲ್ಲೇಶ್ ಚೌಗಲೆ ಅವರು ಡಾ. ಸತೀಶ್ ಚೌಲಿಗೇರ್ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಸಮಾರಂಭದ ಯಶಸ್ವಿಗಾಗಿ ಪ್ರವೀಣ ನಾಯ್ಕರ್, ಅಮರೇಶ್ ಜಿ.ಸಿ., ಗಣೇಶ್ ಹವಳಿ, ಭರಮೇಶ ತಳವಾರ, ಆಕಾಶ ಹೊಸಮನಿ ಸೇರಿದಂತೆ ಅನೇಕರು ಶ್ರಮವಹಿಸಿದ್ದರು.
