• ಲೆಕ್ಸ್ ಅಲ್ಟಿಮಾ ಸ್ಪರ್ಧೆಯಲ್ಲಿ ಕೆಎಲ್‌ಇ ವಿದ್ಯಾರ್ಥಿಗಳ ಸಾಧನೆ
• ಮೂಟ್ ಕೋರ್ಟ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ
• ಬೆಲ್ ಪಿಟಿಷನ್ ವಿಭಾಗದಲ್ಲಿ ಪ್ರೇರಣಾಗೆ ರನ್ನರ್ಸ್-ಅಪ್
• ಬಿ.ವಿ. ಬೆಳ್ಳದ್ ಕಾನೂನು ಕಾಲೇಜು ವಿದ್ಯಾರ್ಥಿಗಳ ಜಯಭೇರಿ

2026ರ ಮೇ ತಿಂಗಳಲ್ಲಿ ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯ, ಮಂಗಳೂರು ಆಯೋಜಿಸಿದ್ದ “ಲೆಕ್ಸ್ ಅಲ್ಟಿಮಾ” ಸ್ಪರ್ಧೆಯಲ್ಲಿ ನಮ್ಮ ಮೂಟ್ ಕೋರ್ಟ್ ತಂಡದ ಸದಸ್ಯರಾದ ಶ್ರೀ ಓಂ ಮತ್ತು ಕುಮಾರಿ ಗಾಯತ್ರಿ (5 ವರ್ಷದ ಬಿ.ಎ.ಎಲ್.ಎಲ್.ಬಿ ವಿದ್ಯಾರ್ಥಿಗಳು) ಸೆಮಿ ಫೈನಲ್ ಸುತ್ತಿಗೆ ಅರ್ಹತೆ ಪಡೆದರು.

ಹಾಗೂ ಅಂತಿಮ ವರ್ಷದ ಬಿ.ಎ.ಎಲ್.ಎಲ್.ಬಿ ವಿದ್ಯಾರ್ಥಿಯಾದ ಶ್ರೀ ಸಾಯಿರಾಜ್ ಅಂಬಳೆ ಅವರು ಲೀಗಲ್ ಡಿಬೇಟ್ ಮತ್ತು ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ವಿಭಾಗದ ಫೈನಲ್ಸ್‌ಗೆ ಅರ್ಹತೆ ಪಡೆದರು.ಅದೇ ರೀತಿ ಅಂತಿಮ ವರ್ಷದ ಎಲ್.ಎಲ್.ಬಿ ವಿದ್ಯಾರ್ಥಿನಿಯಾದ ಕುಮಾರಿ ಪ್ರೇರಣ ಹನುಮಸೆಠ್ ಅವರು ಬೆಲ್ ಪಿಟಿಷನ್ ವಿಭಾಗದಲ್ಲಿ ರನ್ನರ್ಸ್-ಅಪ್ ಸ್ಥಾನ ಪಡೆದರು. ಕೆ.ಎಲ್.ಇ ಸೊಸೈಟಿಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗವು ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.
