State

ಡಿ.ಕೆ.ಶಿ ರಾಕ್ಷಸನಿದ್ದಂತೆ ಸಿಎಂ ಆದ್ರೇ 10 ಬಾರಿ ರಾಜ್ಯವನ್ನು ಮಾರಿ ಬಿಡ್ತಾರೆ ಯಾವ ಪುರುಷಾರ್ಥಕ್ಕಾಗಿ ಯಡಿಯೂರಪ್ಪ ಅಭಿಮಾನೋತ್ಸವ; ; ಯತ್ನಾಳ್…

Share

• ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಯಾವ ಪುರುಷಾರ್ಥಕ್ಕೆ
• ಡಿ.ಕೆ. ಶಿವಕುಮಾರ್ ವಿರುದ್ಧ ‘ರಾಕ್ಷಸ’ ಪದ ಬಳಕೆ
• ಬಾಗಲಕೋಟೆ ಚುನಾವಣೆಯಲ್ಲಿ ಹಣದ ಹೊಳೆ ಆರೋಪ
• ರಾಜ್ಯವನ್ನು 10 ಬಾರಿ ಮಾರಿ ಬಿಡ್ತಾರೆ; ಯತ್ನಾಳ್

ಯಾವ ಪುರುಷಾರ್ಥಕ್ಕಾಗಿ ಯಡಿಯೂರಪ್ಪ ಅಭಿಮಾನೋತ್ಸವವನ್ನು ಆಚರಿಸಲಾಗುತ್ತಿದೆ. ಡಿ.ಕೆ.ಶಿವಕುಮಾರ ರಾಕ್ಷಸನಿದ್ದಂತೆ ಸಿಎಂ ಆದ್ರೇ ರಾಜ್ಯವನ್ನು 10 ಬಾರಿ ಮಾರಿ ಬಿಡ್ತಾರೆ ಎಂದು ವಿಜಯಪುರದ ಶಾಸಕ ಯತ್ನಾಳ್ ಸ್ವಪಕ್ಷ ಮತ್ತು ಕಾಂಗ್ರೆಸ್ ವಿರುದ್ಧವೂ ಇಂದು ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ್ ಯಾವ ಪುರುಷಾರ್ಥಕ್ಕೆ ಯಡಿಯೂರಪ್ಪ ಅಭಿಮಾನೋತ್ಸವ ಆಚರಿಸಿಕೊಳ್ಳುತ್ತಿದ್ದಾರೆಂದು ಗೊತ್ತಿಲ್ಲ. ಹೊಗಳಿಸಿಕೊಳ್ಳಲು ಇದನ್ನ ಆಯೋಜಿಸಿದ್ದಾರೆ. ಅಂತಹ ಕೆಲಸ ಮಾಡಿದ್ದಾರು ಏನು. ಒಳ್ಳೆಯ ಕೆಲಸ ಮಾಡಿದ್ದರೇ ಜೈಲಿಗೆ ಯಾಕೆ ಹೋಗಿದ್ದರು. ಮೇಕೆದಾಟು, ಉತ್ತರ ಕರ್ನಾಟಕ ನೀರಿನ ಯೋಜನೆ ಅಥವಾ ಪ್ರಾಮಾಣಿಕ ಸರ್ಕಾರ ಬರಬೇಕೆಂದು ಸಿಎಂ ಜೈಲಿಗೆ ಹೋಗಿದ್ದು ಅಸಹ್ಯ. ಅವರು ಮಾಡಿದ ಅನೇಕ ಘಟನೆಗಳನ್ನು ನೋಡಿದರೇ, ಅವರಿಗೆ ಅರ್ಹತೆಯಿಲ್ಲ. ದೇಶದಲ್ಲಿ ಪಕ್ಷ ಕಟ್ಟಿದ ಅಟಲ್ ಬಿಹಾರಿ ವಾಜಪೇಯಿ, ಲಾಲ್’ಕೃಷ್ಣ ಅಡ್ವಾನಿ ಅವರು ಇಂತಹ ಅಭಿಮಾನೋತ್ಸವಗಳನ್ನು ಆಚರಿಸಿಕೊಂಡರೇ? ನವೆಂಬರ್’ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರ ಅವಧಿ ಮುಕ್ತಾಯಗೊಳ್ಳಲಿದೆ. ಮತ್ತೋಮ್ಮೆ ಬ್ಲಾಕ್’ಮೇಲ್ ಮಾಡುವ ತಂತ್ರ ಎಂದರು.

ಇನ್ನು ದಲಿತ ಸಿಎಂ, ಸಿಎಂ ಬದಲಾವಣೆಗೆ ಸಂಬಂಧಿಸಿದಂತೆ ಯಾರೇ ಸಿಎಂ ಆದರೂ ಭ್ರಷ್ಟಾಚಾರ ಮೀತಿ ಮೀರಿದೆ. ಡಿ.ಕೆ.ಶಿವಕುಮಾರ್ ದೊಡ್ಡ ರಾಕ್ಷಸ ಇದ್ದ ಹಾಗೆ. ಸಿಎಂ ಆದರೇ, ಕರ್ನಾಟಕವನ್ನು 10 ಬಾರಿ ಮಾರಾಟ ಮಾಡುತ್ತಾರೆ ಎಂದರು.

ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದು ಜನರು ನೀಡಿದ ತೀರ್ಪು ಅಲ್ಲ. ಜಾತಿ ಆಧಾರದ ಮೇಲೆ ಮತಗಳಿಗೆ ಹಣ ನೀಡಲಾಗಿದೆ. ಲಿಂಗಾಯತರಿಗೆ 10 ಸಾವಿರ ರೂಪಾಯಿ ಹಣ ನೀಡಿದ್ದಾರೆ. ಬಿಜೆಪಿ ಲೋಕಸಭಾ ಸದಸ್ಯರ ಸಂಖ್ಯೆ ಕಡಿಮೆಯಾಗಲೂ ರಾಜ್ಯಾಧ್ಯಕ್ಷರ ವ್ಯವಹಾರಗಳೇ ಕಾರಣ ಎಂದರು.

Tags:

error: Content is protected !!