Chikkodi

ಮಾಂಜರಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ

Share

• ಶಾಸಕ ಗಣೇಶ ಹುಕ್ಕೇರಿ ಪ್ರಯತ್ನಕ್ಕೆ ಫಲ
• ಕರಿಸಿದ್ದೇಶ್ವರ ದೇವಸ್ಥಾನದ ಬಳಿ ಭವನ ನಿರ್ಮಾಣ
• ಗ್ರಾಮಕ್ಕೆ ಹರಿದು ಬಂದ ಕೋಟಿಗಟ್ಟಲೆ ಅನುದಾನ
• ಕಾಂಗ್ರೆಸ್ ಮುಖಂಡ ಪಾಂಡುರಂಗ ಮಾನೆ ಚಾಲನೆ

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಶಾಸಕ ಗಣೇಶ ಹುಕ್ಕೇರಿ ಹಾಗೂ ಎಂಎಲ್ಸಿ ಪ್ರಕಾಶ ಹುಕ್ಕೇರಿ ಅವರ ಪ್ರಯತ್ನದಿಂದ, 20 ಲಕ್ಷ ರೂಪಾಯಿ ವೆಚ್ಚದಲ್ಲಿ ಕರಿಸಿದ್ದೇಶ್ವರ ದೇವಸ್ಥಾನದ ಹತ್ತಿರ ನಿರ್ಮಿಸಲಿರುವ ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಕಾಮಗಾರಿಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಪಾಂಡುರಂಗ ಮಾನೆ ಚಾಲನೆ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಶಾಸಕ ಗಣೇಶ ಹುಕ್ಕೇರಿ ಮತ್ತು ಎಂಎಲ್ಸಿ ಪ್ರಕಾಶ ಹುಕ್ಕೇರಿ ಅವರ ಪ್ರಯತ್ನದಿಂದ ಈ ಹಿಂದೆ ಕರಿಸಿದ್ದೇಶ್ವರ ದೇವಸ್ಥಾನದ ನಿರ್ಮಾಣಕ್ಕೆ 20 ಲಕ್ಷ ರೂಪಾಯಿ ಅನುದಾನ ನೀಡಲಾಗಿತ್ತು. ಇದೀಗ ಸಮುದಾಯ ಭವನ ನಿರ್ಮಾಣಕ್ಕೆ ಮತ್ತೆ 20 ಲಕ್ಷ ರೂಪಾಯಿ ಅನುದಾನ ನೀಡಿದ್ದಾರೆ. ಕಳೆದ ಆರು ತಿಂಗಳಿಂದ ಮಾಂಜರಿ ಗ್ರಾಮಕ್ಕೆ ಒಟ್ಟು 3 ಕೋಟಿ 65 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಜು ನರವಾಡೆ, ಶಕೀಲ ಮುಲ್ಲಾ, ಸುರೇಶ ಪಾಟೋಳೆ, ಸಂಶೀರ್ ಮತ್ತೆಬಾಯಿ, ಅಶೋಕ ವಗ್ಗೆ, ಕೃಷ್ಣಾ ವಗ್ಗೆ, ಕಲ್ಲಪ್ಪ ವಗ್ಗೆ, ಮಾಯಪ್ಪ ವಗ್ಗೆ, ಅಜೀತ ವಗ್ಗೆ, ಪರಶು ವಗ್ಗೆ, ಶಂಕರ ವಗ್ಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!