• ನಗರ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಪಾತ್ರ ಅತಿಮುಖ್ಯ
• ಕಾರ್ಮಿಕರಿಗೆ 5 ಲಕ್ಷದವರೆಗೆ ವೈದ್ಯಕೀಯ ಸೌಲಭ್ಯ
• ಸುರಕ್ಷತಾ ಕಿಟ್ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ
• ಆಯುಕ್ತ ಕಾರ್ತಿಕ್ ಎಂ. ಅವರಿಂದ ಮಾಹಿತಿ

ಬೆಳಗಾವಿಯಲ್ಲಿಂದು ನಡೆದ ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ., ನಗರದ ಸ್ವಚ್ಛತೆಯ ರೂವಾರಿಗಳಾದ ಪೌರಕಾರ್ಮಿಕರ ಆರೋಗ್ಯ ರಕ್ಷಣೆಗೆ ಪಾಲಿಕೆ ಸದಾ ಸಿದ್ಧವಿದೆ ಎಂದರು.
ಬೆಳಗಾವಿಯ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಬೆಳಗಾವಿ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ವಿಮೆ ಕಾರ್ಡ್‌ಗಳನ್ನು ವಿತರಿಸಲಾಯಿತು. ನಿಗಮದ ಅಧ್ಯಕ್ಷರಾದ ಮುರಳಿ ಅಶೋಕ ಸಾಲಪ್ಪ ಅವರ ಸಮ್ಮುಖದಲ್ಲಿ ಪೌರಕಾರ್ಮಿಕರ ಆರೋಗ್ಯ ರಕ್ಷಣೆಯ ಕುರಿತು ಮಹತ್ವದ ಚರ್ಚೆಗಳು ನಡೆದವು.

ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ., ಅವರು ನಗರಗಳು ಸ್ವಚ್ಛವಾಗಿಡಿಸುವಲ್ಲಿ ಪೌರ ಕಾರ್ಮಿಕ ಪಾತ್ರ ಅತಿಮುಖ್ಯವಾಗಿದ್ದು, ಅವರಿಗೆ ಬೇಕಾದ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸುತ್ತಿದೆ. ಕಾಯಂ ಪೌರ ಕಾರ್ಮಿಕರಂತೆ ಇತರ ಕಾರ್ಮಿಕರಿಗೂ ನೀಡಲಾಗುತ್ತಿದೆ. 5 ಲಕ್ಷದ ವರೆಗಿನ ವೈದ್ಯಕೀಯ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಪೌರ ಕಾರ್ಮಿಕರು ತಮಗೆ ನೀಡಿದ ಸುರಕ್ಷತಾ ಕಿಟ್’ಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಈ ವೇಳೆ ಮಹಾಪೌರ ಪ್ರೀತಿ ಕಾಮಕರ, ಉಪಮಹಾಪೌರ ಹನುಮಂತ ಕೊಂಗಾಲಿ, ನಗರಸೇವಕರಾದ ಬಾಬಾಜಾಜ್ ಮತವಾಲೆ, ಎಇಇ ಹಣುಮಂತ ಕಲಾದಗಿ, ರಾಜು ಸಾಖೆ ಸೇರಿದಂತೆ ಪೌರ ಕಾರ್ಮಿಕರು ಉಪಸ್ಥಿತರಿದ್ಧರು.
