• ಕಾಂಗ್ರೆಸ್‌ಗೆ ಅಹಿಂದ ಮತಗಳೇ ಭದ್ರ ಬುನಾದಿ
• ಪಕ್ಷದ ಶಕ್ತಿ ಬಗ್ಗೆ ಸಚಿವ ಪರಮೇಶ್ವರ ಹೇಳಿಕೆ
• ಶೃಂಗೇರಿ ಮತಗಳ್ಳತನ ಪ್ರಕರಣಕ್ಕೆ ಈಗ ಸ್ಟೇ
• ರಾಜುಗೌಡ ಕೋರ್ಟ್ ಮೆಟ್ಟಿಲೇರುತ್ತಾರಾ? ಕುತೂಹಲ

ಅಹಿಂದ ವರ್ಗಗಳೇ ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ಗೃಹ ಸಚಿವ ಜಿ. ಪರಮೇಶ್ವರ ಇಂದು ದೃಢವಾಗಿ ಪ್ರತಿಪಾದಿಸಿದ್ದಾರೆ. ಅತ್ತ ಶೃಂಗೇರಿ ಮತಗಳ್ಳತನ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಪ್ರಕರಣದ ಮುಂದಿನ ಕಾನೂನು ಹೋರಾಟದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.”

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ ಅವರು ಅಹಿಂದ್ ಮತಗಳೇ ಮೊದಲಿನಿಂದಲೂ ಕಾಂಗ್ರೆಸ್’ಗೆ ಬುನಾದಿ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಬೇರೆ ಬೇರೆ ಸಮುದಾಯದವರೇ ಕಾಂಗ್ರೆಸ್ಸಿನ ಮೂಲ ಮತದಾರರು ಎಂದರು.
ಇನ್ನು ಶೃಂಗೇರಿ ವಿಚಾರಕ್ಕೆ ಸಂಬಂಧಿಸಿದಂತೆ ಮತಗಳ್ಳತನದ ವಿರುದ್ಧ ದೂರು ಕೊಟ್ಟಿದ್ದು, ಎಫ್.ಐ.ಆರ್ ದಾಖಲಾಗಿದೆ. ಆದರೇ ಸ್ಟೇ ತರಲಾಗಿದೆ. 2 ದಿನದ ಕಾಲಾವಕಾಶ ನೀಡಿದ್ದು, ಚುನಾವಣಾ ಆಯೋಗ ಈಗಾಗಲೇ ಪ್ರಮಾಣಪತ್ರ ನೀಡಿದೆ. ರಾಜುಗೌಡು ಮತ್ತೇ ನ್ಯಾಯಾಲಯದ ಮೊರೆ ಹೋಗುತ್ತಾರಾ ಎಂಬುದನ್ನು ನೋಡಬೇಕು ಎಂದರು.
