Belagavi

ಶಿವಾಪುರ ಮಠದ ಬುದ್ಧಿಮಾಂದ್ಯ ಯುವಕ ನಾಪತ್ತೆ: ಪತ್ತೆಗಾಗಿ ಪೊಲೀಸರ ಮೊರೆ

Share

• ಶಿವಾಪುರ ಮಠದಿಂದ ಯುವಕ ನಿಗೂಢ ನಾಪತ್ತೆ
• ಬುದ್ಧಿಮಾಂದ್ಯ ಮಗನಿಗಾಗಿ ತಾಯಿಯ ಕಣ್ಣೀರಿನ ಮೊರೆ
• ಕಪ್ಪು ಶರ್ಟ್ ಧರಿಸಿರುವ ಅವಿನಾಶ ನಾಪತ್ತೆ
• ಮಾಹಿತಿ ಇದ್ದಲ್ಲಿ ಕಾಕತಿ ಪೊಲೀಸರಿಗೆ ತಿಳಿಸಿ

ಬೆಳಗಾವಿ ತಾಲೂಕಿನ ಶಿವಾಪುರ ಮಠದಲ್ಲಿ ನೆಲೆಸಿದ್ದ ಬುದ್ಧಿಮಾಂದ್ಯ ಯುವಕನೊಬ್ಬ ನಾಪತ್ತೆಯಾಗಿದ್ದು, ತಾಯಿ ಮಗನ ಪತ್ತೆಗಾಗಿ ಕಣ್ಣೀರಿಡುತ್ತಿದ್ದಾರೆ. ಕಳೆದ ಹದಿನೈದು ದಿನಗಳಿಂದ ಮಗನಿಗಾಗಿ ಹುಡುಕಾಟ ನಡೆಸುತ್ತಿರುವ ತಾಯಿ ಈಗ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೂಲತಃ ನಿಪ್ಪಾಣಿ ತಾಲೂಕಿನ ಅಕೋಳ ಗ್ರಾಮದವರಾದ ಶಾಲನ್ ಅಣ್ಣಾಸಾಹೇಬ ತೊಡಕರ ಅವರು ಬೆಳಗಾವಿಯ ಶಿವಪುರ ಮುಪ್ಪಿನ ಕಾಡಸಿದ್ದೇಶ್ವರ ಮಠದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ. ಇವರ 26 ವರ್ಷದ ಮಗ ಅವಿನಾಶ ಅಣ್ಣಾಸಾಹೇಬ ತೊಡಕರ ದಿನಾಂಕ 13/04/2026 ರಂದು ಮಧ್ಯಾಹ್ನ ಯಾರಿಗೂ ಹೇಳದೆ ಮಠದಿಂದ ಹೊರಹೋದವನು ಮರಳಿ ಬಂದಿಲ್ಲ. ಬುದ್ಧಿಮಾಂದ್ಯನಾಗಿರುವ ಈ ಯುವಕನಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಸಪೂರ ಮೈಕಟ್ಟು, ದುಂಡು ಮುಖ ಹಾಗೂ ಕಪ್ಪು ಕೂದಲು ಹೊಂದಿರುವ ಈತ ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದನು. ಈ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ಮಾಹಿತಿ ಇದ್ದಲ್ಲಿ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.

Tags:

error: Content is protected !!