• ಅಹಿಂದ ಮತಗಳೇ ಕಾಂಗ್ರೆಸ್ ಗೆಲುವಿಗೆ ಬೆನ್ನೆಲುಬು.
• ಹೈಕಮಾಂಡ್ ಅಂಗಳದಲ್ಲಿ ಸಿಎಂ ಕುರ್ಚಿ ನಿರ್ಧಾರ.
• ಬೆಳಗಾವಿ ತಂಡದ ತಂತ್ರಗಾರಿಕೆಗೆ ಸಿಕ್ಕಿತು ಯಶಸ್ಸು.
• ಬಿಜೆಪಿಯ ಚುನಾವಣಾ ಸ್ಟ್ರಾಟಜಿ ನಮಗೂ ಅನಿವಾರ್ಯ.

ಉಪಚುನಾವಣೆಯ ಭರ್ಜರಿ ಗೆಲುವಿನ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಅಹಿಂದ ಮತಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಬದಲಾವಣೆಯ ಚರ್ಚೆ ಹಾಗೂ ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಕುರಿತು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸುಮಾರು ಫ್ಯಾಕ್ಟರ್’ಗಳನ್ನು ಉಪಯೋಗಿಸಿ ಉಪಚುನಾವಣೆಯನ್ನು ಗೆಲ್ಲಲಾಗಿದೆ. ಬಿಜೆಪಿಯಲ್ಲಿರುವ ನಮ್ಮ ಅಹಿಂದ್ ಮತಗಳನ್ನು ಮರಳಿ ತಂದಿದ್ದೆ ಭಾರಿ ಅಂತರದ ಗೆಲುವಿಗೆ ಕಾರಣವಾಗಿದೆ. ಅಲ್ಲದೇ ಅಹಿಂದ ಮತಗಳನ್ನು ಸೆಳೆಯಲು ಬೆಳಗಾವಿಯ ತಂಡವು ಯಶಸ್ವಿಯಾಗಿದೆ. ಶಿಗ್ಗಾಂವಿಯಂತಹ ತಂತ್ರಗಾರಿಕೆಯನ್ನ ಬಳಸಲಾಗಿದೆ. ಕಾಂಗ್ರೆಸ್ ಗೆಲ್ಲಲು ಅಹಿಂದ ಮತಗಳೇ ಬೆನ್ನೆಲುಬು. ಒಳ್ಳೆಯ ಕೆಲಸ ಮಾಡಿದರೇ ಮತ್ತೇ ನಾವು ಅಧಿಕಾರಿಕ್ಕೆ ಬರುತ್ತೇವೆ ಎಂದರು.
ಇನ್ನು ಸಿಎಂ ಕುರ್ಚಿ ಫಲಿತಾಂಶದ ಬಗ್ಗೆ ಕೇಳಿದ ಪ್ರಶ್ನೆಗೆ ಅದು ನಮ್ಮ ವ್ಯಾಪ್ತಿಯಲ್ಲಿ ಚೆಂಡಿಲ್ಲ. ಇದು ದೆಹಲಿಯ ಅಂಗಳದಲ್ಲಿದೆ. ಸ್ವತಃ ಎಐಸಿಸಿ ಅಧ್ಯಕ್ಷ ಖರ್ಗೆ ಅವರೇ ಹೇಳಿದ್ದಾರೆ. ಗೊಂದಲಕ್ಕೆ ಶೀಘ್ರವೇ ಪರಿಹಾರ ಸಿಗಬೇಕು. ಪಕ್ಷ ಬಲಿಷ್ಠವಾಗಿದ್ದರೇ ನಾವು ಇರುತ್ತೇವೆ. ಪಕ್ಷವೇ ಮೊದಲು ಎಂದರು. ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೇ, ಎಲ್ಲದ್ದಕ್ಕೂ ಅಂತಿಮ ನಿರ್ಣಯ ತೆಗೆದುಕೊಳ್ಳುವುದು ಹೈಕಮಾಂಡ್.
ಇನ್ನು ಪಶ್ಚಿಮ ಬಂಗಾಳದ ಫಲಿತಾಂಶದ ಕುರಿತು ಓವರ್ ಲೂಕ್ ಮಾಡಲೂ ಹೋಗಿ ಯಶಸ್ಸು ಕಾಣಲಿಲ್ಲ. 15 ವರ್ಷದಲ್ಲಿ ಹಲವಾರು ನೂನ್ಯತೆಗಳಿದ್ದವು. ಬಿಜೆಪಿಯವರು ಅವಕಾಶವನ್ನು ಬಳಸಿಕೊಂಡರು. ಅದರ ಲಾಭ ಬಿಜೆಪಿಗಾಗಿದೆ. ಬಿಜೆಪಿಗರ ಚುನಾವಣೆ ಸ್ಟಾಟರ್ಜಿಯನ್ನು ನಾವು ರೂಢಿಸಿಕೊಳ್ಳಬೇಕಿದೆ ಎಂದರು.
