• ಎ.ಐ.ಪಿ.ಸಿ ವತಿಯಿಂದ ಸಂಸ್ಥಾಪನಾ ದಿನಾಚರಣೆ
• ಸವಿತಾ ಇನಾಮದಾರ್ ಅವರಿಗೆ ಗೌರವ ಸನ್ಮಾನ
• ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸಾಂಘಿಕ ಶಕ್ತಿ
• ರಾಜನಂದ ಗರ್ಗಿ ಅವರಿಂದ ಸುಂದರ ನಿರೂಪಣೆ

ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಮ್ಮೇಳನದ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸವಿತಾ ಇನಾಮದಾರ್ ಅವರು ಸಾಹಿತ್ಯದ ನಿಜವಾದ ಶಕ್ತಿಯ ಬಗ್ಗೆ ಮಾತನಾಡಿದರು. ಅನುವಾದ ಮತ್ತು ಭಾಷಾಂತರದ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ವಿವರಿಸಿದ ಅವರು, ಸಾಹಿತ್ಯವು ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಆಶಿಸಿದರು.
ಬೆಳಗಾವಿಯ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಎ.ಐ.ಪಿ.ಸಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಸಾಹಿತಿ ಸವಿತಾ ಇನಾಮದಾರ್, ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಜಾತಿ, ಭಾಷೆ ಮತ್ತು ಮತ ಪಂಥಗಳ ಸಂಕೋಲೆಯಿಂದ ಹೊರಬರಬೇಕು ಎಂದು ತಿಳಿಸಿದರು. ದೆಹಲಿಯಂತಹ ನಗರದಲ್ಲಿದ್ದರೂ ಕನ್ನಡದ ಕಂಪು ಪಸರಿಸುತ್ತಿರುವ ಅವರು, ಸಾಹಿತ್ಯದ ಮೂಲಕ ಸಮಾಜವನ್ನು ಹೇಗೆ ಒಗ್ಗೂಡಿಸಬಹುದು ಎಂಬ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ದೇಶದ ರಾಜಧಾನಿಯಲ್ಲಿದ್ದರು ಕನ್ನಡದ ಸೇವೆಯನ್ನು ಸಲ್ಲಿಸುತ್ತಿದ್ದು, ಅನುವಾದ ಎನ್ನುವುದು ಸುಲಭ ಆದರೇ, ಭಾಷಾಂತರ ಬೇರೆ. ಮಾತುಗಳನ್ನು ಅರ್ಥಬದ್ಧವಾಗಿ ಸಂಯೋಜಿಸಬೇಕು. ಜಾತಿ, ಭಾಷೆ, ಮತ ಪಂಥಗಳನ್ನು ಮೀರಿ ಸೇವೆ ಸಲ್ಲಿಸಬೇಕು. ನಮ್ಮ ಸೇವೆಯೂ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದರು. ಬೈಟ್
ಕಾರ್ಯಕ್ರಮದ ಯಶಸ್ಸಿಗೆ ಹಲವು ಗಣ್ಯರು ಸಾಕ್ಷಿಯಾದರು. ಬಹುಭಾಷಾ ಕವಿಗೋಷ್ಠಿ ಹಾಗೂ ಗಜಲ್ ಗಾಯನದಲ್ಲಿ ಸಂಘಟನೆಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸುಧಾ ಪಾಟೀಲ ವಂದನಾರ್ಪಣೆ ಮಾಡಿದರು. ವಿಶೇಷವಾಗಿ ಕಾರ್ಯಕ್ರಮಕ್ಕೆ ಲಘು ಉಪಾಹಾರದ ಪ್ರಾಯೋಜಕತ್ವ ವಹಿಸಿದ್ದ ಜಯಶೀಲಾ ಬ್ಯಾಕೋಡ ಮತ್ತು ಜ್ಯೋತಿ ಬಾದಾಮಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಇಡೀ ಕಾರ್ಯಕ್ರಮವನ್ನು ರಾಜನಂದ ಗರ್ಗಿ ಅವರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು. ಸುಧಾ ಪಾಟೀಲ್ ಅವರು ವಂದಿಸಿದರು.

