Belagavi

ಬೆಳಗಾವಿಯಲ್ಲಿ ಮೇ 9ರಿಂದ ‘ಜಿತೋ ಹರ್ಷೋತ್ಸವ’: ವಿವಿಧ ಕ್ಷೇತ್ರಗಳ ತಜ್ಞರಿಂದ ಜ್ಞಾನಾರ್ಜನೆ ಕಾರ್ಯಕ್ರಮ; ಜಿತೋ ಅಧ್ಯಕ್ಷ ಹರ್ಷವರ್ಧನ ಇಂಚಲ

Share

• ಬೆಳಗಾವಿಯಲ್ಲಿ ಎರಡು ದಿನಗಳ ‘ಜಿತೋ ಹರ್ಷೋತ್ಸವ’.
• ಮೇ 9 ಮತ್ತು 10 ರಂದು ಜ್ಞಾನದ ಹಬ್ಬ.
• ಕೆ.ಎಲ್.ಇ. ಶತಮಾನೋತ್ಸವ ಸಭಾಗೃಹದಲ್ಲಿ ಸಮಾವೇಶ.
• ದೇಶದ ಖ್ಯಾತ ತಜ್ಞರಿಂದ ವಿಶೇಷ ಉಪನ್ಯಾಸ.

ಕಳೆದ ಹಲವಾರು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿರುವ ಜೈನ ಇಂಟರ್ ನ್ಯಾಶನಲ್ ಟೈಡ್ ಆರ್ಗನೈಸೇಶನ್ ಚಿತೋ ಸಂಸ್ಥೆ ಬೆಳಗಾವಿ ವತಿಯಿಂದ ಹಾಗೂ ಜಿತೋ ಕೆಕೆಜಿ ವಲಯ ಸಹಯೋಗದೊಂದಿಗೆ ಮೇ. 9 ಮತ್ತು 10 ಎರಡು ದಿನಗಳ ಕಾಲ ಜಿತೋ ಹರ್ಷೋತ್ಸವ ಕಾರ್ಯಕ್ರಮವನ್ನು ಬೆಳಗಾವಿಯ ಕೆ.ಎಲ್.ಇ. ಶತಮಾನೋತ್ಸವ ಸಭಾಗೃಹದಲ್ಲಿ ನಡೆಯಲಿದೆ ಎಂದು ಜಿತೋ ಅಧ್ಯಕ್ಷ ಹರ್ಷವರ್ಧನ ಇಂಚಲ ಅವರು ಇಂದಿಲ್ಲಿ ಹೇಳಿದರು.

ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಾತನಾಡಿದರು. ಜಿತೋ ಸಂಸ್ಥೆಯು ಪ್ರತಿವರ್ಷ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಸೇರಿದಂತೆ ಇನ್ನಿತರ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ಇದೀಗ ಜಿತೊ ಹರ್ಷೋತ್ಸವ ಕಾರ್ಯಕ್ರಮ ಮೂಲಕ ಬೆಳಗಾವಿಯ ಜನತೆಗೆ ಹೆಚ್ಚಿನ ಜ್ಞಾನಾರ್ಜನೆ ನೀಡುವ ಉದ್ದೇಶದಿಂದ ವಿವಿಧ ಕ್ಷೇತ್ರಗಳ ತಜ್ಞ ಉಪನ್ಯಾಸಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದರು.
ಕಾರ್ಯಕ್ರಮ ಸಂಯೋಜಕ ವಿಕ್ರಮ ಜೈನ ಅವರು ಮಾತನಾಡಿ, ಏಪ್ರಿಲ್ 9 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಷ್ಟ್ರೀಯ ವ್ಯಾಪಾರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸುನಿಲ ಶಿಂಘಿ ಅವರು ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡುವರು. ಅವರೊಂದಿಗೆ ಜಿತೋ ಅಪೆಕ್ಸ್ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದರು.
ಮಧ್ಯಾಹ್ನದ ಅವಧಿಯಲ್ಲಿ ವಿವಿಧ ಸ್ಮರದ ನೈಜ ಕಥೆಗಳ ವಿವರವನ್ನು ಶಾನದಾರ ಶಾಂತಿಭಾಯಿ ಅವರು ನೀಡಲಿದ್ದಾರೆ. ತನ್ನ ಜಾದು ಕಲೆಯ ಮೂಲಕ ಮನಸ್ಸು ಅರ್ಥಮಾಡಿಕೊಂಡು ಅದನ್ನು ಉತ್ತರಿಸುವ ಕಲಾಕಾರ ವಿವೇಕ ಶಿಂಘಿ ಅವರು ತಮ್ಮ ಜಾದು ಕಲೆಯನ್ನು ಪ್ರದರ್ಶಿಸುವರು. ಸಾಯಂಕಾಲ 7 ಗಂಟೆಗೆ ಖ್ಯಾತ ಭಕ್ತಿಗೀತೆ ಹಾಡುವ ವಿವೇಕ ಡಿ. ಖಾರೇಖ ಮತ್ತು ಅವರ ತಂಡದಿಂದ ವಿಶೇಷ ಭಕ್ತಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಮೇ 10 ರಂದು ಬೆಳಿಗ್ಗೆ ದೈವಿಶಕ್ತಿ ಮತ್ತು ಮಹಿಳಾ ನಿರ್ಭರತಾ ಕುರಿತು ಖ್ಯಾತ ಆಧ್ಯಾತ್ಮಿಕ ಉಪನ್ಯಾಸಕ ರಿಷಿ ನಂದಾ ಅವರು ಉಪನ್ಯಾಸ ನೀಡುವರು. ತದನಂತರ ಕೃಷ್ಣಾ ರಾಠಿ ಇವರು ವೈಯಕ್ತಿಕ ಮತ್ತು ವ್ಯವಹಾರ ಲೆಂಡ್ ನಿರ್ಮಾಣ ಬಗ್ಗೆ ಮಾತನಾಡುವರು. ಭಾರತ ದೇಶದ ರಾಜತಾಂತ್ರಿಕ ಹಾಗೂ ಕೇಂದ್ರ ಸರಕಾರದ ಸರ್ವ ಸಲಹೆಗಾರರಾದ ನಿವೃತ್ತ ಐಎಫ್ ಎಸ ಅಧಿಕಾರಿ ಡಾ. ದೀಪಕ ವೋರಾ ಅವರು * ಜಾಮವಂತ ಪರಿಣಾಮ- ಇಂಡಿಯಾ ಹೇಗೆ ಭಾರತವಾಗುತ್ತದೆ” ಎಂಬ ವಿಷಯ ಬಗ್ಗೆ ಮಾತನಾಡುವರು ಎಂದರು.
ಮಧ್ಯಾಹ್ನದ ಅವಧಿಯಲ್ಲಿ ಜೀವನದಲ್ಲಿ ಎಲ್ಲವೂ ಸಾಧ್ಯ ಎಂಬ ವಿಷಯ ಕುರಿತು ರಾಹುಲ ಕಪೂರ ಅವರು ಮಾತನಾಡಲಿದ್ದಾರೆ. ಇದಾದ ಬಳಿಕ ಯುವ ಯಶಸ್ವಿ ಉದ್ಯಮಿಗಳ ಸಂದರ್ಶನ ನಡೆಯಲಿದೆ ಎಂದು ಹೇಳಿದ ಅವರು ಈ ಎಲ್ಲ ಕಾರ್ಯಕ್ರಮಗಳು ಆಹ್ವಾನಿತ ಪಾಸಗಳ ಮೇಲೆ ಪ್ರವೇಶ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿತೋ ಸಂಸ್ಥೆಯ ಪದಾಧಿಕಾರಿ ಅಭಯ ಆದಿಮನಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!