Belagavi

ಬೆಳಗಾವಿ ಬಾರ್ ಅಸೋಸಿಯೇಷನ್ ಚುನಾವಣೆ ಫಲಿತಾಂಶ ಪ್ರಕಟ: ಬಿ.ಜೆ. ಗಂಗಾಯಿ ನೂತನ ಅಧ್ಯಕ್ಷರಾಗಿ ಭರ್ಜರಿ ಆಯ್ಕೆ!

Share

• ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಬಿ.ಜೆ.ಗಂಗಾಯಿ ಆಯ್ಕೆ
• ಸಚೀನ್ ಶಿವಣ್ಣವರ ಸಂಘದ ನೂತನ ಪ್ರಧಾನ ಕಾರ್ಯದರ್ಶಿ
• ಜಯಶ್ರಿ ಮಂಡ್ರೋಳಿ ಮಹಿಳಾ ಅಧ್ಯಕ್ಷೆಯಾಗಿ ಭರ್ಜರಿ ಜಯ
• ಸಮಿತಿಯ ಎಲ್ಲಾ ಪದಾಧಿಕಾರಿಗಳ ಹೆಸರುಗಳ ಪಟ್ಟಿ ಜಾರಿ

ಕುಂದಾನಗರಿ ಬೆಳಗಾವಿಯ ಪ್ರತಿಷ್ಠಿತ ಬಾರ್ ಅಸೋಸಿಯೇಷನ್‌ನ 2026-28ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಹೈವೋಲ್ಟೇಜ್ ಚುನಾವಣೆಯ ಫಲಿತಾಂಶ ಅಧಿಕೃತವಾಗಿ ಹೊರಬಿದ್ದಿದೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಕಣದಲ್ಲಿ ಬಿ.ಜೆ. ಗಂಗಾಯಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ವಕೀಲರ ಸಂಘದ ಚುಕ್ಕಾಣಿ ಹಿಡಿದಿದ್ದಾರೆ.
ಬೆಳಗಾವಿ ವಕೀಲರ ಸಂಘದ ಮುಂದಿನ ಎರಡು ವರ್ಷಗಳ ಅವಧಿಯ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಮತದಾನ ಪ್ರಕ್ರಿಯೆಯು ಅತ್ಯಂತ ವ್ಯವಸ್ಥಿತವಾಗಿ ಜರುಗಿತು. ಒಟ್ಟು 1,709 ಮತದಾರರನ್ನು ಹೊಂದಿರುವ ಈ ಚುನಾವಣಾ ಕಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ತೀವ್ರ ಪೈಪೋಟಿಯಲ್ಲಿ ಬಿ.ಜೆ. ಗಂಗಾಯಿ ಅವರು ಜಯಭೇರಿ ಬಾರಿಸಿದ್ದಾರೆ. ಮಹಿಳಾ ಅಧ್ಯಕ್ಷೆಯಾಗಿ ಜಯಶ್ರಿ ಮಂಡ್ರೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಚೀನ್ ಶಿವಣ್ಣವರ, ಜಂಟಿ ಕಾರ್ಯದರ್ಶಿಯಾಗಿ ಪ್ರಶಾಂತ್ ಪಾಟೀಲ್ ಹಾಗೂ ಖಜಾಂಚಿಯಾಗಿ ನಿರ್ಮಲಾ ಪಾಟೀಲ್ ಅವರು ಮತದಾರರ ಭಾರಿ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ಮ್ಯಾನೇಜ್‌ಮೆಂಟ್ ಕಮಿಟಿ ಸದಸ್ಯರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭಿಷೇಕ್ ತಾರಿಹಾಳಕರ, ವಸಂತ ಅಕ್ಕೆನ್ನವರ, ಹೊಳಿ ಮಲ್ಲಪ್ಪ ಮಾನಿಂಗಪ್ಪ ಹಾಗೂ ಜಿ.ಎ. ಹಿರೇಮಠ ಅವರು ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.
ಇನ್ನು ಮ್ಯಾನೇಜ್‌ಮೆಂಟ್ ಕಮಿಟಿಯ ಮಹಿಳಾ ಸದಸ್ಯರ ಸ್ಥಾನಕ್ಕೆ ದೀಪಾ ಮರಡಿ ಹಾಲನ್ನವರಮ, ಜ್ಯೋತಿ ಪಟ್ಟಣಶೆಟ್ಟಿ ಹಾಗೂ ರಾಜೇಶ್ವರಿ ಪಾಟೀಲ್ ಅವರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದರು. ರಿಟರ್ನಿಂಗ್ ಆಫೀಸರ್ ಜೆ.ಡಿ. ತಿಗಡಿ ಹಾಗೂ ಆರ್.ಎನ್. ಮಿಸಾಳೆ ನೇತೃತ್ವದ ತಂಡವು ಅತ್ಯಂತ ಪಾರದರ್ಶಕವಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟಿತು. ಸಂಜೆ 6:30ಕ್ಕೆ ಆರಂಭವಾದ ಮತ ಎಣಿಕೆ ಪ್ರಕ್ರಿಯೆಯು ತಡರಾತ್ರಿಯವರೆಗೆ ನಡೆದಿದ್ದು, ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ನೂತನ ಪದಾಧಿಕಾರಿಗಳ ಬೆಂಬಲಿಗರು ನ್ಯಾಯಾಲಯದ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು. ಈ ಹೊಸ ಆಡಳಿತ ಮಂಡಳಿಯು ಮುಂದಿನ ಎರಡು ವರ್ಷಗಳ ಕಾಲ ವಕೀಲರ ಹಿತರಕ್ಷಣೆಗಾಗಿ ಕಾರ್ಯನಿರ್ವಹಿಸಲಿದೆ.

Tags:

error: Content is protected !!