• ಕಾಗವಾಡದಲ್ಲಿ ವಿಠ್ಠಲ-ರುಕ್ಮಿಣಿ ಮೂರ್ತಿ ಪ್ರತಿಷ್ಠಾಪನಾ ರಜತ ಮಹೋತ್ಸವ
• ಸೈನಿಕರು ಕಟ್ಟಿಸಿದ ಮಂದಿರ ಧರ್ಮ ರಕ್ಷಣೆಗೆ ಸಾಕ್ಷಿ
• ಮಕ್ಕಳಿಗೆ ಆಸ್ತಿಗಿಂತ ಸಂಸ್ಕಾರ ನೀಡುವುದು ಇಂದಿನ ಅಗತ್ಯ
• ನಾಳೆ ಮಾಜಿ ಸಚಿವ ಶ್ರೀಮಂತ ಪಾಟೀಲ್ ಭೇಟಿ

ಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- ರುಕ್ಮಿಣಿ ಮಂದಿರ ಸಾಕ್ಷಿಯಾಗಿದೆ. ಇದರಿಂದ ನಾವು ಎಲ್ಲರೂ ಧರ್ಮದ ರಕ್ಷಣೆ ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡಲಿದೆ, ಧರ್ಮೋ ಧರ್ಮ ರಕ್ಷಿತಾ ಎಂದು ಪರಮಾನಂದವಾಡಿ ಅಭಿನವ ಮಠದ ಡಾಕ್ಟರ್ ಅಭಿನವ ಸ್ವಾಮೀಜಿ ಕಾಗವಾಡದಲ್ಲಿ ಹೇಳಿದರು.

ಶನಿವಾರ ರಂದು ಕಾಗವಾಡದ
ಸಾವಿರಾರು ಭಕ್ತರ ಶ್ರದ್ಧಾ ಸ್ಥಾನವಾಗಿರುವ ಶ್ರೀ ಅಂಬಾಬಾಯಿ ಮಂದಿರದಲ್ಲಿ ವಿಠಲ ರುಕ್ಮಿಣಿ ಮೂರ್ತಿ ಪ್ರತಿಷ್ಠಾಪಿಸಿ 25 ವರ್ಷ ಗತಿಸಿದ್ದು ಸುವರ್ಣ ಮಹೋತ್ಸವವಾಗಿ, ಅಂಬಾ ಭವಾನಿ,
ಬ್ರಹ್ಮಚೈತನ್ಯ ಸದ್ಗುರು ಬಾಬಾಜಿ ಬೀಸಲೆ ಮಹಾರಾಜ್ ಇವರ ಕೃಪಾ ಆಶೀರ್ವಾದದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮಾರಂಭದ ನೇತೃತ್ವ ಹರಿಭಕ್ತ ಪಾರಾಯಣ ಗುರುವರ್ಯ
ಬಾಬಾಸಾಹೇಬ್ ಬಿಸಲೆ ಮಹಾರಾಜ್ ಮಾಂಜರಿ ಇವರ ಸಣಧ್ಯದಲ್ಲಿ ನೆರವೇರುತ್ತಿದೆ.
ಕಾರ್ಯಕ್ರಮದಲ್ಲಿ ತಮ್ಮ ಪ್ರವಚನ ಮುಖಾಂತರ ಅಭಿನವ ಸ್ವಾಮೀಜಿ ಮುಂದೆವರೆದು ಹೇಳುವಾಗ ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಧರ್ಮದ ನೀತಿ ಪಾಠಗಳು ಹೇಳುವುದು ಅವಶ್ಯಕತೆ ಇದೆ. ಕಾರಣ ನಾವೆಲ್ಲ ಕುಟುಂಬದವರು ಏನೆಲ್ಲ ಆಸ್ತಿ ಐಶ್ವರ್ಯ ಸಂಗ್ರಹಿಸಲು ಕಾರಣವೆಂದರೆ ಮಕ್ಕಳಿಗಾಗಿ ಆದರೆ ಮಕ್ಕಳ ಮೇಲೆ ಒಳ್ಳೆಯ ಸಂಸ್ಕಾರ ಇಲ್ಲದೆ ಹೋದರೆ ಆ ಆಸ್ತಿ ವಿನಾಶಕ್ಕಾಗಿ ಉಪಯೋಗಿಸಬಹುದು, ಪದವಿ ಶಿಕ್ಷಣ ಪಡೆದರು ಮಕ್ಕಳು ಬುದ್ಧಿವಂತರಲ್ಲ ಅವರಿಗೆ ಜನ್ಮ ನೀಡಿದ ತಂದೆ ತಾಯಿ ಹಾಗೂ ಗುರುಗಳ ಆಧಾರ ಭಾವನೆ ಮನದಲ್ಲಿ ಗಟ್ಟಿಯಾಗಿ ಉಳಿಬೇಕು. ಎಷ್ಟೋ ಪದವಿದರೂ ತಮ್ಮ ತಂದೆ ತಾಯಿಗಳನ್ನು ವೃದ್ದಾಶ್ರಮಕ್ಕೆ ಕಳಿಸಿದ ಉದಾಹರಣೆ ನಮ್ಮ ಮುಂದೆ ಇದೆ. ಎಂದು ಎಚ್ಚರಿಕೆ ಮಾತು ಡಾ. ಅವಿನಾಶ್ ಸ್ವಾಮೀಜಿ ಹೇಳಿದರು.
ಸಮಾರಂಭದಲ್ಲಿ ಶಾಸ್ತ್ರಿ ಮಹಾರಾಜರು ತಮ್ಮ ಪ್ರವಚನ ಮುಖಾಂತರ ಎಲ್ಲರಿಗೆ ಬೋಧನೆ ಮಾಡಿದರು, ಅದೇ ರೀತಿ ಪ್ರವಚನಕಾರ ಶುಭಾಶ ಸೇವಳೆ ಗುರೂಜಿ ಹಾಗೂ ಜ್ಞಾನದೇವ ಮಹಾರಾಜ ಇಂಗಳಿಕರ್ ಇವರು ತಮ್ಮ ಕೀರ್ತನದಲ್ಲಿ ಅನೇಕ ವಿಚಾರಗಳನ್ನು ವ್ಯಕ್ತಪಡಿಸಿದರು.
ಬಾಬಾಸಾಹೇಬ್ ಬೀಸಲೆ ಮಹಾರಾಜ್ ಸಮಾರಂಭದ ಸಾನಿಧ್ಯ ವಹಿಸಿದರು.
ಕಳೆದ ಎರಡು ದಿನಗಳಲ್ಲಿ ಹಮ್ಮಿಕೊಂಡ ಸಮಾರಂಭದ ಅನ್ನದಾನ ಮಾಡಿರುವ ಗಣ್ಯರಿಗೆ ಸನ್ಮಾನಿಸಿದರು.
ಸಂಯೋಜಕ ರಮೇಶ್ ಲಾಂಡಗೆ ಗುರುಗಳು ಮಾಹಿತಿ ನೀಡುವಾಗ ನಾಳೆ ರವಿವಾರ ದಿನಾಂಕ 3 ರಂದು ಮಾಜಿ ಸಂಸದ
ಅಣ್ಣಸಾಬ್ ಜೊಲ್ಲೆ, ಮತ್ತು
ಅಂಕಲಿಕರ್ ಷಿತೋಳೆ ಸರ್ಕಾರ, ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರು ಉಪಸ್ಥಿತಿಯಲ್ಲಿ ಅಮೃತವಾಣಿ ಸಮ್ಮೇಳನ ಬೆಳಗ್ಗೆ 10 ಗಂಟೆಗೆ ಜರುಗಲಿದೆ. ಎಂದು ತಿಳಿಸಿದರು.
ಗ್ರಾಮದ ಸುಮಂಗಲದಿಂದ ಕಳೆದ ಮೂರು ದಿನಗಳಿಂದ ಜ್ಞಾನೇಶ್ವರಿ ಪಾರಾಯಣ ಹರಿಪಾಟ್ ನೆರವೇರಿದೆ.
