• ಬೆಳಗಾವಿಯಲ್ಲಿ ಬುದ್ಧ ಪೂರ್ಣಿಮೆ ಸಂಭ್ರಮ
• “ಧಮ್ಮ ಎಂದರೆ ಕೇವಲ ಧರ್ಮವಲ್ಲ”
• ಮನಃ ಪರಿವರ್ತನೆಯೇ ಸಾಧನೆಯ ಹಾದಿ
• ಸದಾಶಿವನಗರದಲ್ಲಿ ಮೊಳಗಿದ ಶಾಂತಿ ಮಂತ್ರ

ಬೆಳಗಾವಿಯ ಸದಾಶಿವನಗರದ ಬುದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭೆಯ ವತಿಯಿಂದ ಬುದ್ಧ ಪೂರ್ಣಿಮೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮನುಷ್ಯನ ಮನಃ ಪರಿವರ್ತನೆ ಮತ್ತು ವಿವೇಕಯುತ ಬದುಕಿಗೆ ಬುದ್ಧನ ಧಮ್ಮ ದಾರಿದೀಪವಾಗಿದೆ ಎಂದು ಪ್ರೋಫೆಸರ್ ಕೆ.ಡಿ ಮಂತ್ರೇಶಿ ಹೇಳಿದರು.
ಭಾರತೀಯ ಬೌದ್ಧ ಮಹಾಸಭೆಯ ವತಿಯಿಂದ ಬುದ್ಧ ಪೌರ್ಣಿಮೆಯ ನಿಮಿತ್ಯ ಬೆಳಗಾವಿಯ ಸದಾಶಿವನಗರದ ಬುದ್ಧವಿಹಾರದಲ್ಲಿ ಧಮ್ಮ್ ಉಪನ್ಯಾಸ ನಡೆಯಿತು. ಈ ವೇಳೆ ಮಾತನಾಡಿದ ಉಪನ್ಯಾಸಕ ಕೆ.ಡಿ. ಮಂತ್ರೇಶಿ ಅವರು, ಬುದ್ಧರು ಮನಃ ಪರಿವರ್ತನೆಯ ಮೂಲಕ ಎಲ್ಲವನ್ನು ಸಾಧಿಸಲು ಸಾಧ್ಯ. ಭಗವಾನ್ ಬುದ್ಧರು ನಮಗೆ ಪ್ರಕಾಶಮಯವಾದ ಧಮ್ಮವನ್ನು ನೀಡಿದ್ದಾರೆ. ಧಮ್ಮ ಎಂದರೇ ಧರ್ಮವಲ್ಲ. ಧಮ್ಮ್ ಎಂದರೇ ಹುಟ್ಟಿನಿಂದ ಸಾವಿನ ವರೆಗಿನ ವಿಚಾರ ಮಾಡುವುದು. ವಿವೇಕವಾದಿ, ವಿಜ್ಞಾನವಾದಿ, ಸುಜ್ಞಾನವಾದಿಯಾಗಿಸುವ ಕೆಲಸವನ್ನು ಈ ಧಮ್ಮ ಮಾಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಯಮನಪ್ಪಾ ಗಡಿನಾಯಕ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಶೀಲಾಧರ ಮುಗಳಿ ಹಾಗೂ ಕೊಲ್ಲಾಪುರದ ನ್ಯಾಯವಾದಿ ಅರವಿಂದ ಕಾಂಬಳೆ ಅವರು ಧಮ್ಮ ಉಪನ್ಯಾಸ ನೀಡಿ, ಬುದ್ಧನ ತತ್ವಗಳ ಪ್ರಸ್ತುತತೆಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಸಮತಾ ಸೈನಿಕ ದಳದ ಸೈನಿಕರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಗಣ್ಯರಿಗೆ ಸತ್ಕಾರ ಮಾಡಲಾಯಿತು. ವಿವಿಧ ಬಹುಜನ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದ ಈ ಕಾರ್ಯಕ್ರಮವು ಸಾಮೂಹಿಕ ಅನ್ನದಾನದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಈ ವೇಳೆ ಸಮತಾ ಸೈನಿಕ ದಳದ ಶಿಸ್ತಿನ ನಡುಗೆಯೊಂದಿಗೆ ಗಣ್ಯರು ವಿಶ್ವರತ್ನ ಡಾ. ಬಾಬಾಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
