hubbali

ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣ ಆಗುತ್ತಿಲ್ಲ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Share

ಬಿಜೆಪಿ ಬಿಟ್ಟು ಬೇರೆ ಪಕ್ಷಗಳ ಆಡಳಿತವಿರುವ ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣ ಆಗುತ್ತಿಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ ಕಾರ್ಮಿಕ ಕಲ್ಯಾಣ ನಿಧಿ ಸಹ ಬಳಕೆ ಆಗುತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ಕಟ್ಟಡ ಕಾರ್ಮಿಕರ ಕಲ್ಯಾಣ ಸೆಸ್ ಸರಿಯಾಗಿ ಬಳಕೆಯಾಗ್ತಿಲ್ಲಾ. ಕರ್ನಾಟಕದಲ್ಲಿ ಬರೀ ಮೆಡಿಕಲ್ ಕ್ಯಾಂಪ್, ಕಿಟ್ ಹಂಚಿಕೆ ಮಾತ್ರ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕಾರ್ಮಿಕ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರು.
ಚಿಕ್ಕಬಳ್ಳಾಪುರದಲ್ಲಿ 200 ಕೋಟಿಯಲ್ಲಿ ಕೇಂದ್ರ ಸರ್ಕಾರ ಇಎಸ್ ಐ ಆಸ್ಪತ್ರೆ ನಿರ್ಮಾಣ ಮಾಡಿದೆ. ಇದರ ಉದ್ಘಾಟನೆಗೂ‌ ಸಹ ಕರ್ನಾಟಕ ಸರ್ಕಾರ ನಿರಾಶಕ್ತಿ ತೋರುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಪಂಚರಾಜ್ಯಗಳ ಚುನಾವಣೆ ವಿಚಾರ

ಐದು ರಾಜ್ಯಗಳಲ್ಲಿ ಯಶಸ್ವಿಯಾಗಿ ಚುನಾವಣೆ ನಡೆದಿದೆ. ಎಲ್ಲಾ ಕಡೆ ಹೆಚ್ಚು ಮತದಾನವಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳದ ಅಲ್ಲಿನ ಗೂಂಡಾಗಿರಿ ಸರ್ಕಾರಗಳು ಹೋಗಬೇಕು . ಅಲ್ಲಿ ನರೇಂದ್ರ ಮೋದಿಯವರ ಡಬಲ್ ಇಂಜಿನ್ ಸರ್ಕಾರ ಬರಬೇಕು ಎಂದರು.

ಮಹಿಳಾ ಮೀಸಲಾತಿಯಲ್ಲಿ ವಿಪಕ್ಷಗಳು ಮೊಸಳೆ ಕಣ್ಣೀರು ಹಾಕುತ್ತಿವೆ

ಇದರಲ್ಲಿ ದಕ್ಷಿಣ ಭಾರತಕ್ಕೆ ಸಾಕಷ್ಟು ಅನ್ಯಾಯ ಆಗಿದೆ.
ಇಂಡಿ ಘಟಬಂಧನ ಉತ್ತರ ಭಾರತ ಮತ್ತು ದಕ್ಷಿಣ ಭಾರತ‌ ಅಂತ ದೇಶವನ್ನು ಒಡೆಯುವ ಷಡ್ಯಂತ್ರ ಮಾಡುತ್ತಿದೆ.
ದೇಶವನ್ನು ಒಡೆದು ಆಳುವ ನೀತಿಯಲ್ಲಿ ಇಂಡಿ ಅಲೈನ್ಸ್ ಇದೆ
ಅದಕ್ಕೆ ಮಹಿಳಾ ಮೀಸಲಾತಿಯನ್ನು ವಿರೋಧ ಮಾಡುತ್ತಿದೆ
ಎಂದರು.

Tags:

error: Content is protected !!