Political

ಬೆಲೆ ಏರಿಕೆ ವಿಚಾರವಾಗಿ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ ನಾಯಕತ್ವ ಬದಲಾವಣೆ; ಹೈಕಮಾಂಡ್ ತಿರ್ಮಾಣಕ್ಕೆ ಎಲ್ಲರೂ ತಲೆ ಬಾಗಲೇಬೇಕು!!!

Share

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ರಾಜ್ಯ ರಾಜಕಾರಣದ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳಿಗೂ ಅವರು ಮಹತ್ವದ ಪ್ರತಿಕ್ರಿಯೆ ನೀಡಿದ್ದು, ದಿನಾಂಕ ಫಿಕ್ಸ್ ಅದ್ರೇ ಖಂಡಿತ ತಿಳಿಸುತ್ತೇನೆ. ಹೈಕಮಾಂಡ್ ನಿರ್ಣಯಕ್ಕೆ ಎಲ್ಲರೂ ತಲೆ ಬಾಗಲೇ ಬೇಕು ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುದ್ಧ ಪೌರ್ಣಿಮೆಯ ಹಿನ್ನೆಲೆ ಭಗವಾನ್ ಬುದ್ಧರನ್ನು ಸ್ಮರಿಸಿ, ಶಾಂತಿ ಸೌಹಾರ್ದತೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ನಂತರ ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಎಲ್.ಪಿ.ಜಿ ಬೆಲೆ 993 ರೂಪಾಯಿಗೆ ಏರಿಕೆಯಾಗಿದೆ. ಪಿಎಂ ಮೋದಿ ಬೆಲೆ ಏರಿಕೆ ಮಾಡಲ್ಲ ಎನ್ನುತ್ತಿದ್ದರು. ಆದರೇ ಈಗ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿದ. ದೇಶಕ್ಕೆ ಸಂಕಷ್ಟ ತಂದರೂ ಮೋದಿ ನೇತೃತ್ವದ ಸರ್ಕಾರಕ್ಕೆ ಜನರು ಇನ್ನು ಯಾಕೆ ಬೆಂಬಲ ನೀಡುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದರು.

ಇನ್ನು ನೇತೃತ್ವ ಬದಲಾವಣೆಗೆ ಸಂಬಂಧಿಸಿದಂತೆ ತಾವು ಮತ್ತು ಹೈಕಮಾಂಡ್ ಚರ್ಚಿಸಿ ಕೈಗೊಳ್ಳುತ್ತೇವೆಂದು ಹೇಳಿದ್ದೇನೆ. ಸದ್ಯ ಈ ಚರ್ಚೆಗೆ ಯಾವುದೇ ದಿನಾಂಕವನ್ನು ನಿಶ್ಚಯಗೊಳಿಸಿಯೇ ಇಲ್ಲ. ಅದಾಗ್ಯೂ ದಿನಾಂಕವನ್ನು ನಿಶ್ಚಯ ಮಾಡಿದರೇ, ಎಲ್ಲರಿಗೂ ತಿಳಿಸುತ್ತೇನೆ. ಹೈಕಮಾಂಡ್ ತೆಗೆದುಕೊಂಡ ನಿರ್ಣಯಕ್ಕೆ ಎಲ್ಲರೂ ತಲೆಬಾಗಲೇ ಬೇಕಾಗುತ್ತದೆ ಎಂದರು.

Tags:

error: Content is protected !!