BELAGAVI

ಸುಪ್ರೀಂ ಕೋರ್ಟ್ ಪ್ರಕರಣಗಳ ವಿಲೇವಾರಿಗೆ ಸುವರ್ಣಾವಕಾಶ

Share

ಸುಪ್ರೀಂ ಕೋರ್ಟ್‌ನಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮುಂದಾಗಿದೆ. ಬೆಳಗಾವಿ ಜಿಲ್ಲೆಯ ಸುಮಾರು 400 ಪ್ರಕರಣಗಳು ಈ ವಿಶೇಷ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಳ್ಳಲಿದ್ದು, ಕಕ್ಷಿದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸಂದೀಪ್ ಪಾಟೀಲ್ ಅವರು, ಜನರಿಗೆ ತ್ವರಿತ ನ್ಯಾಯ ಸಿಗಬೇಕೆಂಬುದು ನ್ಯಾಯಾಲಯಗಳ ಮುಖ್ಯ ಉದ್ಧೇಶವಾಗಿದ್ದು, ಇದರ ಒಂದು ಭಾಗವಾಗಿ ರಾಷ್ಟಮಟ್ಟದ ಲೋಕ ಅದಾಲತ್’ಗಳನ್ನು ಆಯೋಜಿಸಲಾಗುತ್ತಿದೆ. ಆಯಾ ತಾಲೂಕು, ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ರಾಜಿ ಸಂಧಾನ ಮಾಡಲಾಗುತ್ತಿದೆ. ಇಂದಿನ ವಿಶೇಷ ಲೋಕ ಅದಾಲತ್ತಿನ ಉದ್ಧೇಶ ಸಮಾಧಾನ ಸಮಾರೋಹ. ಏಪ್ರೀಲ್ 21 ರಿಂದ ಇದರ ಪೂರ್ವ ಸಿದ್ಧತೆ ಆರಂಭಗೊಳ್ಳಲಿದ್ದು, 21, 22 ಮತ್ತು 23 ಆಗಸ್ಟ್ 2026ರ ವರೆಗೂ ಈ ಪ್ರಕ್ರಿಯೆ ನಡೆಯಲಿದೆ. ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದ್ದು, ಕರ್ನಾಟಕ ರಾಜ್ಯದಿಂದ 4128 ಪ್ರಕರಣಗಳಿದ್ದು, ಅದರಲ್ಲಿ ಬೆಳಗಾವಿ ಜಿಲ್ಲೆಯ ಸುಮಾರು 400 ಪ್ರಕರಣಗಳಿವೆ. ತಾಲೂಕಾಮಟ್ಟದಲ್ಲಿ ಕಕ್ಷಿದಾರರನ್ನು ಸಲಹೆಗಾರರೊಂದಿಗೆ ಸಂಪರ್ಕಿಸಿ ರಾಜಿಯಾದ ಬಳಿಕ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸುಪ್ರೀಂಕೋರ್ಟಿಗೆ ಕಳುಹಿಸಲಾಗುವುದು. ಈ ಪ್ರಕ್ರಿಯಯಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಬೇಕೆಂದಿಲ್ಲ. ಕಕ್ಷಿಗಾರರು ವಿಡೀಯೋ ಕಾನ್ಫರೆನ್ಸ್ ಮೂಲಕ ಇದರಲ್ಲಿ ಭಾಗವಹಿಸಬಹುದು ಎಂದರು.

Tags:

error: Content is protected !!