ಬಾಬಾಸಾಹೇಬರು ನೀಡಿದ ಹಕ್ಕುಗಳು ಇಡೀ ಮಾನವಕುಲಕ್ಕೆ ಸೇರಿವೆ. ಅಂಬೇಡ್ಕರ್’ರ ಸಂವಿಧಾನದಡಿ ನಾವೆಲ್ಲರೂ ಒಂದೇ ಎಂದು ಸಮತಾ ಸೈನಿಕ ದಳದ ಬೃಹತ್ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಜಿ.ಸಿ. ವೆಂಕಟರಮಣಪ್ಪ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಳಗಾವಿಯ ಶಾಹುನಗರದಲ್ಲಿ ಇಂದು ಸಮತಾ ಸೈನಿಕ ದಳದ ಜಿಲ್ಲಾ ಹಾಗೂ ಉತ್ತರ ಕರ್ನಾಟಕ ಮಟ್ಟದ ಪದಾಧಿಕಾರಿಗಳ ಮಹತ್ವದ ಸಮಾವೇಶ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ರಾಜ್ಯ ಅಧ್ಯಕ್ಷರಾದ ಜಿ.ಸಿ. ವೆಂಕಟರಮಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾವೇಶವನ್ನು ರಾಜ್ಯ ಉಪಾಧ್ಯಕ್ಷ ಪ್ರವೀಣ ಹಿರೇಮಠ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾರ್ಯಾಧ್ಯಕ್ಷರಾದ ಡಾ. ಜಿ. ಗೋವಿಂದಯ್ಯ ಹಾಗೂ ಗೌರವಾಧ್ಯಕ್ಷ ವಿನೋದ ಜಾಕೂ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸ್ತ್ರಿ ಹೊಸಮನಿ, ಯುವ ಘಟಕದ ರಾಜ್ಯಾಧ್ಯಕ್ಷ ದಲಿತ ಚಳುವಳಿ ನಾಗೇಶ್, ರಾಜ್ಯ ಮಹಿಳಾ ಅಧ್ಯಕ್ಷ ದಿಲಶಾದ ತಾಶೀಲದ್ದಾರೆ, ರಾಜ್ಯ ಖಜಾಂಚಿ ಕೆಂಚಯ್ಯ, ಮಹಾದೇವ ದಿಗ್ಗಿ, ಗುಲುಕಮಲೈ ಗೋಪಾಲ, ವೆಂಕಟೇಶಪ್ಪ, ಮುನಿರಾಜು, ಅರ್ಜುನ ಗೋಪಾಲಯ್ಯ, ಅಜೀತ ಕಟ್ಟಿ ಇನ್ನುಳಿದ ಗಣ್ಯರು ಸಮಾರಂಭವನ್ನು ಉದ್ಘಾಟಿಸಿದರು.
ಈ ವೇಳೆ ರಾಜ್ಯಾಧ್ಯಕ್ಷರಾಗಿ ಜಿ.ಸಿ.ವೆಂಕಟರಮಣಪ್ಪ, ರಾಜ್ಯ ಉಪಾಧ್ಯಕ್ಷರಾಗಿ ಪ್ರವೀಣ್ ಹಿರೇಮಠ, ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಹಸೀನಾ ಶೇಖ್ ಸೇರಿದಂತೆ ಇನ್ನುಳಿದವರು ಪದಗ್ರಹಣ ಮಾಡಿದರು.

ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ ಬಾಬಾಸಾಹೇಬ್ ಅಂಬೇಡ್ಕರರು ಬರೆದಿರುವ ಸಂವಿಧಾನಕ್ಕೆ ಎಲ್ಲರೂ ಒಳಪಡುತ್ತಾರೆ. ಇಂದು ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಜಾರಿಗೆ ಸರ್ಕಾರಗಳು ಮುಂದಾಗಿವೆ. ಆದರೇ, ಈ ಹಕ್ಕನ್ನು ಬಾಬಾಸಾಹೇಬರು 70 ವರ್ಷದ ಹಿಂದೆಯೇ ನೀಡಿದ್ದಾರೆ. ಬಾಬಾಸಾಹೇಬರನ್ನು ಕೇವಲ ಒಂದು ಜಾತಿ ಧರ್ಮಕ್ಕೆ ಸಿಮೀತವಾಗಿಸಬಾರದು. ಸಮತಾ ಸೈನಿಕ ದಳವು ಕಳೆದ 26 ವರ್ಷಗಳಿಂದ ಎಲ್ಲೆಡೆ ಬಾಬಾಸಾಹೇಬರ ತತ್ವಾದರ್ಶಗಳನ್ನು ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಬಾಬಾಸಾಹೇಬರು ಸಂವಿಧಾನದಡಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನೀಡಿದ್ದಾರೆ ಎಂದರು.
ರಾಜ್ಯ ಉಪಾಧ್ಯಕ್ಷರಾಗಿ ಪ್ರವೀಣ್ ಹಿರೇಮಠ ಅವರು, 1927 ರಲ್ಲಿ ಮಾರ್ಚ್ 13 ರಂದು ಸ್ವತಃ ಡಾ.ಬಾಬಾಸಾಹೇಬರು ರಚಿಸಿ ಸಂಘಟನೆ ಸಮತಾ ಸೈನಿಕ ದಳ. ಇದು ಯಾವ ಪಕ್ಷವು ಅಲ್ಲ. ಮಾನವೀಯತೆಯೊಂದಿಗೆ ನಿಲ್ಲುವ ಪಕ್ಷೇತರ ಸಂಘಟನೆ. ಸಮತಾ ಸೈನಿಕ ದಳವು ಸದಾ ಸಕ್ರಿಯವಾದ ಹರಿಯುವ ನೀರಿನಂತಹ ಸಂಘಟನೆ. ಬಾಬಾಸಾಹೇಬರು ನಾವಾಗಲೂ ಸಾಧ್ಯವಿಲ್ಲ. ಆದರೇ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವಂತಾಗಬೇಕು. ಸಮತಾ ಸೈನಿಕ ದಳ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಿಳೂರ, ಎನ್.ಎನ್. ಗಾಳೆಮ್ಮನವರ, ಪರಶುರಾಮ್ ಶಿಂಧೆ, ಮುನಿಸ್ವಾಮಿ, ಸುರೇಖಾ ಹುಬ್ಬಳ್ಳಿ, ಕವಿತಾ ಛಲವಾದಿ, ಉಮೇಶ್ ಛಲವಾದಿ, ಖಾಝಾಸಾಬ್ ಬಿಜಾಪೂರ, ಆದೀಲಬಾಷಾಮ ತಬರೇಜ್ ಶೇಖ್, ಸಮೀರ ಹಜರತ್’ಭಾಯಿ, ನಿಯಾಝ್ ಬೇಪಾಟಿ, ಸುನೀಲ್ ಸಿದ್ಧಾಪುರ ಇನ್ನುಳಿದವರು ಉಪಸ್ಥಿತರಿದ್ಧರು.
