BELAGAVI

ಜೀವನ ಮೌಲ್ಯ ಕಲಿಸಿದ ವಿಶ್ವ ಗುರು ಬಸವಣ್ಣ ಪ್ರೊ. ಎಫ್.ಡಿ.ಗಡ್ಡಿಗೌಡರ.

Share

ವಿಶ್ವಗುರು ಬಸವಣ್ಣವರು 12ನೇ ಶತಮಾನದ ಕನ್ನಡ ನಾಡಿನ ಮಹಾನ್ ಸಾಮಾಜ ಸುಧಾರಕ. ಆಧ್ಯಾತ್ಮಿಕ ಗುರು ಮತ್ತು ವಚನಕಾರ. ಅವರು ವಚನಗಳ ಮೂಲಕ ಜೀವನದ ಮೌಲ್ಯಗಳಾದ ಸಮಾನತೆ, ತತ್ವ ಸಾರಿ ಜಾತಿ ,ಲಿಂಗ, ವರ್ಣ ಭೇದಗಳನ್ನು ಖಂಡಿಸಿದರು. ಎಲ್ಲರೂ ಸಮಾನರು. ಎಂಬ ನೀತಿ ತಿಳಿಸಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿದರು .

ಕೆಲಸವೇ ದೇವರು. ಯಾವ ಕೆಲಸವೂ ಚಿಕ್ಕದು ಅಲ್ಲ ದೊಡ್ಡದು ಅಲ್ಲ ಎಂದು ಕಾಯಕವನ್ನು ಕೈಲಾಸ ಎಂದು ಕರೆದರು. . ಅನ್ನ ದಾಸೋಹ ,ಧನ ದಾಸೋಹ, ಜ್ಞಾನದಾಸೋಹ ,ಮೂಲಕ. ಸಮಾಜದ ಸೇವೆ ಮಾಡಲು ಕರೆ ನೀಡಿದರು. ದಯವೇ ಧರ್ಮ. ಧರ್ಮದ ನಿಜ ಅರ್ಥ ತಿಳಿಸಿ ವಿಶ್ವವನ್ನು ಸುಂದರ ಹೂದೋಟ ಮಾಡಿದ ಕೀರ್ತಿ ವಿಶ್ವ ಗುರು ಬಸವಣ್ಣನವರಿಗೆ ಸಲ್ಲುತ್ತದೆ. ಅವರ ವಚನಗಳಲ್ಲಿಯ ನೈತಿಕ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಂಡು ಸುಂದರ ಸಮಾಜ ನಿರ್ಮಿಸ ಬೇಕಿದೆ ಎಂದು ಸಾಹಿತಿ ಮತ್ತು ವಿಮರ್ಶಕ ಪ್ರೊ. ಎಫ್.ಡಿ.ಗಡ್ಡಿಗೌಡರ.

ಹೇಳಿದರು.ಕರ್ನಾಟಕ ರಾಜ್ಯ ಬರಹಾಗರರ ಸಂಘ ರಾಜ್ಯ ಘಟಕ. ಹೂವಿನಹಡಗಲಿ ಜಿಲ್ಲಾ ಘಟಕ ಬೆಳಗಾವಿ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಇವರ ಸಂಯೋಗದಲ್ಲಿ. ವಿಶ್ವಗುರು ಶ್ರೀ ಬಸವೇಶ್ವರ ಜಯಂತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ 27.04.2026 ರಂದು ಕನ್ನಡ ಸಾಹಿತ್ಯ ಭವನ ಚೆನ್ನಮ್ಮವೃತ ಬೆಳಗಾವಿಯಲ್ಲಿ ಜರುಗಿತು. .ಮೋಹನಗೌಡ ಪಾಟೀಲ ಮಾಜಿ ಕಸಾಪ ಅಧ್ಯಕ್ಷರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಎಲೆ ಮರೆಯ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವುದು ಶ್ಲಾಘನೀಯ ಕಾಯ೯ಎಂದರು.

ಇದೇ ಸಂದರ್ಭದಲ್ಲಿ ಪ್ರೊ. ಎಫ್ ಡಿ ಗಡ್ಡಿಗೌಡರ ವಿರಚಿತ ವಿಶ್ವ ಗುರು ಬಸವಾ ನೀನೇ ಬೇಕು ಬಸವಾ ಎಂಬ ಧ್ವನಿಸುರಳಿ ಬಿಡುಗಡೆ ಮಾಡಲಾಯಿತು. ಮತ್ತು .ಗೀತಾ ಸು ಬಸ್ತವಾಡ ಅವರ ಗೀತ ಗುಚ್ಛ ಕವನ ಸಂಕಲನಕ್ಕೆ ಪುಸ್ತಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು . ಡಾ ದಾನಮ್ಮಾ ಝಳಕಿ ಕ್ಷೇತ್ರ ಸಮನ್ವಯಾದಿಕಾರಿಗಳು ಬೆಳಗಾವಿ ಇವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. .ಮುಖ್ಯಅತಿಥಿಗಳಾಗಿ ಜಿಲ್ಲಾಧ್ಯಕ್ಷ ಕಲ್ಪವೃಕ್ಷ ಸಾಹಿತ್ಯ ವೇದಿಕೆ ಅಧ್ಯಕ್ಷ ಎಂ ವೈ ಮೆಣಸಿನಕಾಯಿ,ಡಾ ಹೇಮಾ ಸೊನಳ್ಳಿ ,ಪೃಥ್ವಿ ಪೌಂಡೆಶನ ರಜನಿ ಜಿರಿಗ್ಯಾಳ , ಸುಮಾ ದೊಡಮನಿ,ಅಧ್ಯಕ್ಷರು ಎಸ್ ಸಿ ಎಸ್ಟಿ ಶಿಕ್ಷಕರವೇದಿಕೆ ಅತಿಥಿಗಳಾಗಿ ಆಗಮಿಸಿದ್ದರು ಸುರೇಶ ಸಕ್ರಣ್ಣವರ ಅಧ್ಯಕ್ಷರು ಬರಹಗಾರಸಂಘಬೆಳಗಾವಿ ಸವ೯ರನ್ನ ಸ್ವಾಗತಿಸಿದರು.ಮಹಾದೇವಿ ಪಾಟೀಲ ನಿರೂಪಿಸಿದರು.ಇದೇ ಸಂದರ್ಭದಲ್ಲಿ ಬರಹಗಾರರ ಸಂಘದ ಖಾನಾಪುರ ಅಧ್ಯಕ್ಷರು ಗಂಗಾಧರ ಬಡಿಗೇರ, ನದಾಫ, ಗಾಣಗಿ, ಹರ್ಷಾರಾಣಿ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು.

ಮಹೇಶ ನಿಲಜಿ,ಬಸವರಾಜಮೇದಾರ,ರುದ್ರೇಶ ಬಡಿಗೇರ,ನಿಂಗಪ್ಪ ಕೌಜಲಗಿ,ಗಂಗಾಧರಬಡೀಗೇರ,ಡಿ ಡಿ ಹೊಳಿ,ಪ್ರವೀಣ ಪಾಳೇಕರ,ಎ ಬಿ ಮಡಿವಾಳರ,ಪ್ರಕಾಶ ಬಾಗೇವಾಡಿ,ರಮೇಶ ಬಾಗೇವಾಡಿ,ಮಹಾದೇವನಿಚ್ಚಣಕಿ,ಮುಂ ಉಪಸ್ಥಿತರಿದ್ದರು,ಕೊನೆಯಲ್ಲಿ ಶಿವಾನಂದ ತಲ್ಲೂರವಂದಿಸಿದರು.

Tags:

error: Content is protected !!