ಬೆಳಗಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 96ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದು, ಅಂತಹ ಪ್ರತಿಭಾವಂತರನ್ನು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸಿಫ್ ಸೇಠ್ ಇಂದು ಸನ್ಮಾನಿಸಿದರು. ಇದೇ ವೇಳೆ ಬಿಮ್ಸ್ ಆಸ್ಪತ್ರೆಯ ಮೂಲಭೂತ ಸೌಕರ್ಯಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಮಂಜೂರಾಗಿರುವ ಬಗ್ಗೆಯೂ ಶಾಸಕರು ಮಹತ್ವದ ಮಾಹಿತಿ ನೀಡಿದರು.


ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಶೇ. 96ಕ್ಕೂ ಹೆಚ್ಚು ಪ್ರತಿಶತ ಅಂಕ ಪಡೆದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಇಂದು ಅವರನ್ನು ಬೆಳಗಾವಿಯ ರಾಮತೀರ್ಥ ನಗರದ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಸನ್ಮಾನಿಸಿದರು. ಇದೇ ವೇಳ ವಿವಿಧ ಯೋಜನೆಯಡಿ ಹೊಲಿಗೆ ಯಂತ್ರ ಮಂಜೂರಾದ ಲಾಭಾರ್ಥಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.


ಈ ವೇಳೆ ಮಾತನಾಡಿದ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಮಕ್ಕಳ ಈ ಸಾಧನೆಯ ಹಿಂದೆ ಅವರ ಪಾಲಕರು, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಮತ್ತು ಶಿಕ್ಷಕರ ಪಾತ್ರ ಮಹತ್ತರವಾಗಿದೆ. ವಿದ್ಯಾರ್ಥಿಗಳು ವಿದ್ಯಾವಂತರಾಗಿ ಆರ್ಥಿಕ ಸಬಲತೆಯೊಂದಿಗೆ ತಮ್ಮ ಮನೆ ಮತ್ತು ಸಮಾಜವನ್ನು ಸುಧಾರಿಸುವ ಕೆಲಸವನ್ನು ಮಾಡಬೇಕು. ಸರ್ಕಾರಿ ಶಾಲೆಗೆ ಬಡಮಕ್ಕಳು ಓದಲು ಬರುತ್ತಾರೆ. ಅವರಿಗೆ ಯಾವುದೇ ತಾರತಮ್ಯವಿಲ್ಲದೇ ನಾವು ಬೆಂಬಲ ನೀಡುತ್ತೇವೆ. ಅವರ ಎಲ್ಲ ಸಮಸ್ಯೆಗಳನ್ನು ನೀಗಿಸುತ್ತೇವೆ. ನಮ್ಮ ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡುತ್ತದೆ. ಬೆಳಗಾವಿಯ ಬಿಮ್ಸ್’ನಲ್ಲಿ ಎಂ.ಆರ್.ಐ ಮಷೀನ್ ಮತ್ತು ಸ್ಕ್ಯಾನಿಂಗ್ ಮಷೀನ್ ಒಂದೇ ಇತ್ತು. ಈ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾದ ಹಿನ್ನೆಲೆ ಕಳೆದ ವಾರ 23 ಕೋಟಿ 50 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದ್ದಾರೆ ಎಂದರು.

ಇನ್ನು ಅಲ್ಪಸಂಖ್ಯಾತರ ವಿದ್ಯಾರ್ಥಿನಿಯ ವಸತಿ ನಿಲಯ, ಅಬ್ದುಲ್ ಕಲಾಂ ಹೈಸ್ಕೂಲ್, ಪಿಯು ಕಾಲೇಜು ಜಾಗೆ ಮಂಜೂರಾಗಿದ್ದು, ಅನುದಾನ ಕೂಡ ಬಂದಿದೆ. ಶೀಘ್ರದಲ್ಲೇ ಕಾಮಗಾರಿಯನ್ನು ಆರಂಭಿಸಲಾಗುವುದು. ಇನ್ನು ಸರ್ಕಾರಿ ಶಾಲೆಯಲ್ಲಿ ಉತ್ತಮ ಅಂಕಪಡೆದು ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ವೈಯಕ್ತಿಕ ಫೌಂಡೇಶನ್’ನ ವತಿಯಿಂದ ಪ್ರೋತ್ಸಾಹಧನ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಎಫ್.ಯು.ಪುಜಾರಿ, ಕೆಎಂಡಿಸಿ ಅಕ್ಬರ್’ಸಾಬ್ ಕುರ್ತಕೋಟಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
