ರಾಜ್ಯದಾದ್ಯಂತ ಅಹಿಂದ ವಿಚಾರ ಸಂಕಿರಣ ಮಾಡಲಾಗುತ್ತಿದೆ
25 ನೇ ವರ್ಷದ ಅಹಿಂದ ಸಮಾವೇಶದ ಸ್ಮರಣಾರ್ಥವಾಗಿ ಇದೀಗ ಸಮಾವೇಶದ ಚಿಂತನೆ ನಡೆಯುತ್ತಿದೆ.ಅಹಿಂದ ವರ್ಗದ ಶೈಕ್ಷಣಿಕ ಹಾಗೂ ಸಾಮಾಜಿಕ ಹಿತದೃಷ್ಠಿಯಿಂದ ಅಹಿಂದ ಸಮಾವೇಶದ ಚಿಂತನೆ ನಡೆಯುತ್ತಿದೆ. ಯಾವುದೇ ರಾಜಕೀಯ ಉದ್ದೇಶವನ್ನ ಈ ಸಮಾವೇಶ ಹೊಂದಬಾರದು ಎಂಬ ಉದ್ದೇಶ ಇದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ಇಡೀ ರಾಜ್ಯದಾದ್ಯಂತ ವಿಚಾರ ಸಂಕಿರಣದಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಅಹಿಂದ ವರ್ಗದ ಜನರ ಅಭಿಪ್ರಾಯ ಪಡೆದುಕೊಳ್ಳಲಾಗುತ್ತಿದೆ. ಬೃಹತ್ ಅಹಿಂದ ಸಮಾವೇಶ ನಡೆಸುವ ಕುರಿತು ಚರ್ಚೆ ಮಾಡಲಾಗುತ್ತಿದೆ.
ಈ ಸಮಾವೇಶ ಕೇವಲ ಸಾಮಾಜಿಕ ಹಾಗೂ ಶೈಕ್ಷಣಿಕ ಉದ್ದೇಶವನ್ನ ಮಾತ್ರ ಹೊಂದಿರಬೇಕು.
ಯಾವುದೇ ರಾಜಕೀಯ ಉದ್ದೇಶವನ್ನ ಈ ಸಮಾವೇಶ ಹೊಂದಬಾರದು ಎಂಬ ಉದ್ದೇಶ ಇದೆ ಎಂದರು.
ರಾಜಕೀಯ ಉದ್ದೇಶ ಹೊಂದುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೇವಲ ರಾಜಕೀಯಕ್ಕಾಗಿ ಸಮಾವೇಶ ಮಾಡಬಾರದು ಅನ್ನೋದು ಸಹ ನನ್ನ ವಾದವಿದೆ.
ಜಾತಿ ಗಣತಿ ವರದಿ ಮಂಡನೆ ವಿಳಂಬ ವಿಚಾರ
ಇನ್ನೂ ವಿಳಂಬವಾಗುತ್ತಿದೆ ಅದು ಶೀಘ್ರಗತಿ ಪಡೆದುಕೊಳ್ಳಬೇಕು ಅದರಿಂದ ಅನುಕೂಲವಾಗಲಿದೆ
ಒಳಮೀಸಲಾತಿ ವಿಚಾರದಲ್ಲಿ ನ್ಯಾಯಾಲಯದ ತಡೆಗೆ ಎಲ್ಲರೂ ತಲೆ ಬಾಗಲೇಬೇಕು. ಬಿಜೆಪಿಯವರು ಸುಖಾಸುಮ್ಮನೇ ನಮ್ಮ ಮೇಲೆ ಆರೋಪ ಮಾಡುತ್ತಾರೆ ಎಂದರು.
ಡಿಕೆಶಿ ದೆಹಲಿ ಭೇಟಿ ವಿಚಾರ
ಅವರ ಇಲಾಖೆ ವಿಚಾರದ ಬಗ್ಗೆ ದೆಹಲಿಗೆ ಹೋಗಿರುತ್ತಾರೆ.
ಸಚಿವ ಸಂಪುಟ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಅದು ನಮ್ಮ ವ್ಯಾಪ್ತಿಯಲ್ಲಿಲ್ಲ ಎಂದರು.
ಹಿರಿಯ ಸಚಿವರನ್ನ ಕೈಬಿಟ್ಟು ಸಚಿವ ಸಂಪುಟ ವಿಸ್ತರಣೆ ವಿಚಾರ.
ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರಬೇಕು.
ಹೈಕಮಾಂಡ್ ನ ಹಿರಿಯ ನಾಯಕರು ಯಾವ ನಿರ್ಧಾರ ಮಾಡುತ್ತಾರೆ ಅವರಿಗೆ ಬಿಟ್ಟ ವಿಚಾರ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರ. ಈ ಬಗ್ಗೆ ಯಾವುದೇ ಚರ್ಚೆಗಳಾಗಲಿ
ಅದರ ಬಗ್ಗೆ ಹೈಕಮಾಂಡ್ ನ ಹಿರಿಯರೇ ಉತ್ತರ ಕೊಡಬೇಕು ಎಂದರು.
