hubbali

ಏ.27 ರಂದು ಸುಳ್ಳ ಗ್ರಾಮದಲ್ಲಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ, ಜೀರ್ಣೋದ್ಧಾರಗೊಂಡ ಶ್ರೀ ಕಲ್ಮೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ, ಶ್ರೀ ಗುರು ಸಿದ್ಧರಾಮೇಶ್ವರ ಮಂಗಲ ಭವನದ ಉದ್ಘಾಟನೆ ಕಾರ್ಯಕ್ರಮ

Share

ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ನಾಳೆ ಬೆಳಿಗ್ಗೆ 10:30 ಗಂಟೆಗೆ ಜಗದ್ಗುರು ಪಂಚಪೀಠಾಧೀಶ್ವರ ಅಡ್ಡಪಲ್ಲಕ್ಜಿ ಮಹೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಸುಳ್ಳ ಪಂಚಗೃಹ ಹಿರೇಮಠದ ಪಟ್ಟಧ್ಯಕ್ಷರಾದ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ‌

ಈ ಕುರಿತು ಪ್ರಕಟಣೆ ನೀಡಿರುವ ಅವರು, ಶ್ರೀ ಕಲ್ಮೇಶ್ವರ ದೇವರಿಗೆ ಮತ್ತು ಶ್ರೀ ಗುರು ಸಿದ್ದರಾಮೇಶ್ವರ ದೇವರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮ ಏಪ್ರಿಲ್ 27ರಂದು ಬೆಳಗ್ಗೆ 7 ಗಂಟೆಗೆ ಸುಳ್ಳ ಗ್ರಾಮದಲ್ಲಿ ಜರುಗಲಿದೆ.

ಬೆಳಿಗ್ಗೆ 10 ಗಂಟೆಗೆ ಜೀರ್ಣೋದ್ಧಾರಗೊಂಡ ಶ್ರೀ ಕಲ್ಮೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ, ಶ್ರೀ ಗುರು ಸಿದ್ಧರಾಮೇಶ್ವರ ಮಂಗಲ ಭವನದ ಉದ್ಘಾಟನೆ ನಡೆಯಲಿದೆ. ಬೆಳಿಗ್ಗೆ 10.30 ಕ್ಕೆ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಜರಗುವುದು. ಬಾಳೆಹೊನ್ನೂರಿನ ಮಹಾ ಭಗವತ್ಪಾದಂಗಳಾದ ಶ್ರೀ ಮದ್ರಂಭಾಪುರಿ ವೀರ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ, ಉಜ್ಜಯಿನಿ ಪೀಠದ ಮಹಾ ಭಗವತ್ಪಾದಂಗಳಾದ ಶ್ರೀ ಮದ್ದುಜ್ಜಯಿನಿ ಸದ್ಧರ್ಮ ಸಿಯಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ, ಶ್ರೀಶೈಲ ಪೀಠದ ಮಹಾ ಭಗವತ್ಪಾದಂಗಳಾದ ಶ್ರೀ ಶ್ರೀಮತ್ ಶ್ರೀಶೈಲ ಸೂರ್ಯ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನ ಸಿದ್ದರಾಮ ಪಾಂಡಿತ್ಯಾರಾಧ್ಯ ಶಿವಾಚಾರ್ಯ, ಶ್ರೀ ಕಾಶಿ ಕ್ಷೇತ್ರದ
ಮಹಾ ಭಗವತ್ಪಾದಂಗಳಾದ ಶ್ರೀಮತ್ ಕಾಶಿ ಜ್ಞಾನ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚಂದ್ರಶೇಖರ್ ಶಿವಾಚಾರ್ಯ, ಶ್ರೀ ಕಾಶಿ ಕ್ಷೇತ್ರದ
ಮಹಾ ಭಗವತ್ಪಾದಂಗಳಾದ ಶ್ರೀಮತ್ ಕಾಶಿ ಜ್ಞಾನ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರ ಅಡ್ಡ ಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯಗಳೊಂದಿಗೆ ಸುಮಂಗಲೆಯರ ಕುಂಭ, ಆರತಿ, ದೀಪೋತ್ಸವದೊಂದಿಗೆ ಮತ್ತು ಶ್ರೀ ಕಲ್ಮೇಶ್ವರ ಪಾಲಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗುವುದು. ಸಂಜೆ 5:00 ಗಂಟೆಗೆ ಶ್ರೀ ಕಲ್ಮೇಶ್ವರ ದೇವರ ಜಾತ್ರಾ ಮಹಾರಥೋತ್ಸವ ನಡೆಯುವುದು.

ಎಪ್ರಿಲ್ 27 ರಂದು ಸಂಜೆ 7:30 ಗಂಟೆಗೆ ಜನ ಜಾಗೃತಿ ಧರ್ಮಸಮಾರಂಭ ನೆರವೇರುವುದು. ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ 1008 ಜಗದ್ಗುರು ಪಂಚಪೀಠಾಧೀಶ್ವರರು ವಹಿಸುವರು.

ಧರ್ಮ ಕ್ಷೇತ್ರ ಮುಕ್ತಿಮಂದಿರದ ಶ್ರೀ ಷ.ಬ್ರ. ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, ಎಂ ಚದರಂಗಿ ಮತ್ತು ಕಡಕೋಳದ ಶ್ರೀ.ಷ.ಬ್ರ. ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಕೆಳದಿ ರಾಜಗುರು ಶ್ರೀ. ಷ.ಬ್ರ. ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು, ಬಂಕಾಪುರ ಹಿರೇಮಠದ ಅರಳಲೇ ಮಠದ ಶ್ರೀ. ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು, ಕಲಘಟಗಿ ಹನ್ನೆರಡು ಮಠದ ಶ್ರೀ.ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು, ಹೂಲಿಯ ಸಂಬಯ್ಯನವರ ಮಠದ ಶ್ರೀ ಷ.ಬ್ರ. ಉಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಶಿರಕೋಳದ ಹಿರೇಮಠದ ಶ್ರಿ.ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ನವನಗರದ ಶ್ರೀ ಷ.ಬ್ರ. ರಾಜಶೇಖರ ಶಿವಾಚಾರ್ಯ ಸ್ವಾಮಿಗಳು, ಷ.ಬ್ರ.

ಸಂಸ್ಥಾನ ಮಳಲಿಮಠದ ಶ್ರೀ. ಷ.ಬ್ರ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಚಿಕ್ಕಮಠ ಬನ್ನೂರ ಶ್ರೀ. ಷ.ಬ್ರ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ನರಸಾಪೂರ ಹಿರೇಮಠದ ಶ್ರೀ. ಷ.ಬ್ರ. ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳು, ಸುತಗಟ್ಟಿಯ ಹಿರೇಮಠದ ಶ್ರೀ. ಷ.ಬ್ರ. ಶಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಬಡದಾಳದ ಶ್ರೀ. ಷ.ಬ್ರ. ಚನ್ನಮಲ್ಲ ಶಿವಾಚಾರ್ಯ ಸ್ವಾಮಿಗಳು, ಕನ್ನೂರ ಸಿಂಧನೂರು ಶ್ರೀ. ಷ.ಬ್ರ. ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಉಗರಗೋಳ ನಿರವಾಣೇಶ್ವರ ಮಠದ ಶ್ರೀ ಮ.ನಿ.ಪ್ರ ಮಹಾಂತ ಸ್ವಾಮಿಗಳು ಸಮ್ಮುಖ ವಹಿಸುವರು.

ಮುಖ್ಯ ಅತಿಥಿಗಳಾಗಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಕೇಂದ್ರ ಸಚಿವರಾದ ಪ್ರಲ್ಲಾದ ಜೋಶಿ, ಕಾರ್ಮಿಕ ಸಚಿವ ಸಂತೋಷ ಲಾಡ್, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಬಸಯ್ಯ ಕಾಡಯ್ಯ ಹಿರೇಮಠ, ಸಿ.ಪಿ.ಐ ಮುರಗೇಶ ಚನ್ನಣ್ಣವರ, ನಿವೃತ್ತ ಹೆಚ್ಚುವರಿ ಪೋಲಿಸ ಅಧೀಕ್ಷಕ ಮಡಿವಾಳಪ್ಪ ಬ. ಸಂಕದ ಭಾಗವಹಿಸುವರು ಎಂದು ಸುಳ್ಳ ಗ್ರಾಮದ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

error: Content is protected !!