ರೈತರು ಕೃಷಿ ಚಟುವಟಿಕೆಗಳಿಗೆ ಕೃಷಿ ಇಲಾಖೆ ಮಾರ್ಗಸೂಚನೆ ಗಳನ್ನು ಅನುಸರಿಸಿದರೆ ಮಾತ್ರ ಉತ್ತಮ ಫಲ ದೊರೆಯುವದು ಎಂದು ಹುಕ್ಕೇರಿ ಸಿವ್ಹಿಲ್ ನ್ಯಾಯಾಧೀಶ ಆದಿತ್ಯಾ ಕಲಾಲ ಹೇಳಿದರು.


ವಿಶ್ವ ಭೂ ದಿನ ಅಂಗವಾಗಿ ಹುಕ್ಕೇರಿ ಕೃಷಿ ಇಲಾಖೆ , ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘದಿಂದ ಹಮ್ಮಿಕೊಂಡ ಕಾರ್ಯಕ್ರಮ ವನ್ನು ನ್ಯಾಯಾಧೀಶ ಆದಿತ್ಯಾ ಕಲಾಲ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಹವಾಮಾನಕ್ಕೆ ಅನುಗುನವಾಗಿ ಕೃಷಿ ಇಲಾಖೆ ಮಾರ್ಗಸೂಚಿ ಅನುಸರಿಸಿ ಬೆಳೆಗಳನ್ನು ಬೆಳೆದರೆ ಮಾತ್ರ ಉತ್ತಮ ಫಲ ಪಡೆದು ಆರ್ಥಿಕವಾಗಿ ಸಭಲರಾಗಬಹುದು ಎಂದರು

ವೇದಿಕೆ ಮೇಲೆ ಅಪರ ಸರಕಾರಿ ವಕೀಲ ಅನಿಲ ಕರೋಶಿ, ನ್ಯಾಯವಾದಿಗಳ ಸಂಘದ ಅದ್ಯಕ್ಷ ಕೆ ಬಿ ಕುರಬೇಟ, ಉಪಾಧ್ಯಕ್ಷ ಬಿ ಎಂ ಜಿನರಾಳೆ, ಕಾರ್ಯದರ್ಶಿ ಎಸ್ ಜೆ ನದಾಫ್, ಕೃಷಿಕ ಸಮಾಜದ ಅದ್ಯಕ್ಷ ಬಾಬು ಮಗೆನ್ನವರ, ಎಸ್ ಬಿ ದೊಡಮನಿ ಉಪಸ್ಥಿತರಿದ್ದರು.
ಮಾದ್ಯಮಗಳೊಂದಿಗೆ ಮಾತನಾಡಿದ ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಆರ್ ಬಿ ರಾಯ್ಕರ ನಮ್ಮ ಭೂಮಿಯ ಫಲವತ್ತೆಯನ್ನು ಕಾಪಾಡುವ ಮತ್ತು ರಾಸಾಯನಿಕ ಗೋಬ್ಬರ ಉಪಯೋಗದಿಂದಾಗುವ ದುಷ್ಪರಿಣಾಮಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು
ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಿನ ರೈತರು, ವಿವಿಧ ಇಲಾಖೆ ಅಧಿಕಾರಿಗಳು ವಿಶೇಷವಾಗಿ ಮಹಿಳಾ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅನುಭವ ಹಂಚಿಕೊಂಡರು.
