kagawad

ಕೆರೆಯಲ್ಲಿ ಈಜಲು ತೆರಳಿದ ಬಾಲಕಿ ನೀರಿನಲ್ಲಿ ಮುಳುಗಿ ಸಾವು

Share

ಈಜಲು ಹೋಗಿ ಕೆರೆಯಲ್ಲಿ ಬಾಲಕಿ ಸಾವು

ಶೇಡಬಾಳ ಸ್ಟೇಷನ್‌ನಲ್ಲಿ ನಡೆದ ದಾರುಣ ಘಟನೆ

ಪ್ರಾಣ ಕಳೆದುಕೊಂಡ 14 ವರ್ಷದ ಪ್ರತಿಕ್ಷಾ

ಜಮೀನಿನ ಕೆರೆಯಲ್ಲಿ ಸಂಭವಿಸಿದ ದುರ್ಘಟನೆ

ಕಾಗವಾಡ: ಕಳೆದ ಎಂಟು ದಿನಗಳಿಂದ ಬಿಸಿಲಿನ ತಾಪಮಾನ ತೀವ್ರಗೊಂಡಿರುವ ಪರಿಣಾಮ, ಈಜಲು ತೆರಳಿದ ಬಾಲಕಿಯೊಬ್ಬಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಕಾಗವಾಡ ತಾಲೂಕಿನ ಶೇಡಬಾಳ ಸ್ಟೇಷನ್ ಗ್ರಾಮದಲ್ಲಿ ಸಂಭವಿಸಿದೆ.

ಮೃತರನ್ನು ಶೇಡಬಾಳ ಸ್ಟೇಷನ್ ಗ್ರಾಮದ ೭ನೇ ತರಗತಿಯಲ್ಲಿ ಓದುತ್ತಿದ್ದ ಪ್ರತಿಕ್ಷಾ ರಾಮು ಮಾಳಿ (೧೪) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಸಂಜು ಬಾಗಣೆ ಎಂಬುವರ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಕೆರೆಯಲ್ಲಿ ಈಜಲು ಪ್ರತಿಕ್ಷಾ ತನ್ನ ಐವರು ಗೆಳತಿಯರೊಂದಿಗೆ ತೆರಳಿದ್ದಳು. ಈ ವೇಳೆ ನೀರಿನಲ್ಲಿ ಮುಳುಗಿ ಬಾಲಕಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.

ಮೃತ ಬಾಲಕಿ ತನ್ನ ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾಳೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!