• ಬೆಳಗುಂದಿಯಲ್ಲಿ ಸರ್ಕಾರಿ ಜಮೀನು ಅಕ್ರಮ ಲೂಟಿ ಆರೋಪ
• ಸಿಬಿಐ ತನಿಖೆಗೆ ಆಗ್ರಹ
• ಅವಧಿ ಮುಗಿದರೂ ನಿಲ್ಲದ ಬಾಕ್ಸೈಟ್ ಗಣಿಗಾರಿಕೆ
• ಅಂತರರಾಜ್ಯ ಗಣಿ ಜಾಲದ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಸಾಮಾಜಿಕ ಕಾರ್ಯಕರ್ತರು ಸಮರ ಸಾರಿದ್ದಾರೆ. ಇಂದು ಬೆಳಗಾವಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸುಜಿತ್ ಮುಳಗುಂದ ಹಾಗೂ ರಾಜಕುಮಾರ್ ಟೋಪಣ್ಣವರ್ ಅವರು, ಸರ್ಕಾರಿ ಭೂಮಿಯಲ್ಲಿ ನಡೆಯುತ್ತಿರುವ ಲೂಟಿ ಹಾಗೂ ಅಂತರರಾಜ್ಯ ಜಾಲದ ಬಗ್ಗೆ ಮಾಹಿತಿ ಹೊರಹಾಕಿದ್ದು, ಈ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ
ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಾಮಾಜೀಕ ಕಾರ್ಯಕರ್ತ ಸುಜೀತ್ ಮುಳಗುಂದ ಅವರು ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ಮಾಲಿನಿ ರಿಸೋರ್ಸಸ್ ಸಂಸ್ಥೆಯು ಬೆಳಗುಂದಿ ಗ್ರಾಮದ ವಿವಿಧ ಸರ್ವೇ ನಂಬರ್ಗಳಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದಿದ್ದರೂ, ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ ಸರ್ಕಾರಿ ಭೂಮಿಯೆಂದು ಗುರುತಿಸಲಾದ ಸರ್ವೇ ನಂಬರ್ 285ರಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂಬ ದೂರು ದಾಖಲಾಗಿದೆ. ಅರಣ್ಯ ಮತ್ತು ಕಂದಾಯ ಇಲಾಖೆಗಳಿಂದ ಈ ನಿರ್ದಿಷ್ಟ ಭೂಮಿಗೆ ಯಾವುದೇ ನಿರಾಕ್ಷೇಪಣಾ ಪತ್ರ (NOC) ಸಿಗದಿದ್ದರೂ, ಗಣಿ ಇಲಾಖೆ ಪರವಾನಗಿಯಲ್ಲಿ ಈ ಸಂಖ್ಯೆಯನ್ನು ಸೇರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದಲ್ಲದೆ, ಸಂಸ್ಥೆಯ ಪರಿಸರ ಅನುಮತಿ ಪತ್ರವು (EC) 2023ರಲ್ಲೇ ಮುಕ್ತಾಯಗೊಂಡಿದ್ದರೂ ಗಣಿಗಾರಿಕೆ ಮುಂದುವರಿದಿದೆ. ಕಿಣಯೆ ಗ್ರಾಮದ ಸರ್ವೇ ನಂಬರ್ 183 ಮತ್ತು 184ರಿಂದ ಬಾಕ್ಸೈಟ್ ಅದಿರನ್ನು ಅಕ್ರಮವಾಗಿ ಸಾಗಿಸಿ, ಬೆಳಗುಂದಿ ಗಣಿಯ ಪರವಾನಗಿಗಳನ್ನು ಬಳಸಿಕೊಂಡು ಸಾಗಾಟ ಮಾಡಲಾಗುತ್ತಿದೆ. ಇದರ ಸಿಬಿಐ ತನಿಖೆಯನ್ನು ಮಾಡಬೇಕು. ತಪ್ಪಿತಸ್ಥ ಅಧಿಕಾರಗಳ ವಿರುದ್ದ ಕ್ರಮಕೈಗೊಳ್ಳಬೇಕೆಂದು ಕರೆ ನೀಡಿದರು.
ಇನ್ನು ಇನ್ನೋರ್ವ ಸಾಮಾಜೀಕ ಕಾರ್ಯಕರ್ತ ರಾಜಕುಮಾರ್ ಟೋಪಣ್ಣವರ ಅವರು ಬೆಳಗಾವಿ ಮತ್ತು ಖಾನಾಪೂರ ತಾಲೂಕುಗಳಲ್ಲಿ ಅಕ್ರಮ ಗಣಿಗಾರಿಕೆ ಹೆಚ್ಚಾಗಿದೆ. ಇದೊಂದು ಅಂತರ ರಾಜ್ಯ ಜಾಲವಾಗಿದೆ. ಈಗಾಗಲೇ ಹೋರಾಟದ ಫಲವಾಗಿ 8 ಜನರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಪೊಲೀಸರು ಕೇವಲ ಮಣ್ಣು ಅಗೆಯುವವರ ವಿರುದ್ಧವಷ್ಟೇ ಅಲ್ಲದೇ ಮಣ್ಣು ಖರೀದಿಸುವವರ ವಿರುದ್ಧವು ಕ್ರಮಕೈಗೊಳ್ಳಬೇಕು. ಈಗಾಗಲೇ ಬೆಳಗಾವಿ ದಕ್ಷಿಣ ಶಾಸಕರು ಕೂಡ ಇದರ ವಿರುದ್ಧ ಧ್ವನಿ ಎತ್ತಿರುವುದು ಶ್ಲಾಘನೀಯ. ಜಿಲ್ಲಾಡಳಿತ ಇದರ ವಿರುದ್ಧ ಕ್ರಮಕೈಗೊಳ್ಳಬೇಕೆಂದರು. ಬೈಟ್
