Belagavi

ಬೆಳಗಾವಿಯ ಎಸ್. ನಿಜಲಿಂಗಪ್ಪ ಸಂಸ್ಥೆಯಲ್ಲಿ ಮಹತ್ವದ ಕಾರ್ಯಾಗಾರ

Share

Food Safety Management in sugar Industries ಕುರಿತು ಒಂದು ದಿನದ ಕಾರ್ಯಾಗಾರ

• ಸಕ್ಕರೆ ಉದ್ಯಮದಲ್ಲಿ ಆಹಾರ ಸುರಕ್ಷತಾ ತರಬೇತಿ
• ಗುಣಮಟ್ಟ ಕಾಯ್ದುಕೊಳ್ಳಲು ತಜ್ಞರಿಂದ ಮಹತ್ವದ ಸಲಹೆ
• ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೆ ಸಕ್ಕರೆ ಸಂಸ್ಥೆ ಕಣ್ಣು
• 65ಕ್ಕೂ ಹೆಚ್ಚು ಕಾರ್ಖಾನೆ ಪ್ರತಿನಿಧಿಗಳ ಭಾಗಿ

ಬೆಳಗಾವಿಯಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ” FOOD SAFETY MANAGEMENT IN SUGAR INDUSTRIES ” ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರದಲ್ಲಿ ಬೆಳಗಾವಿ ನುರಿತ ತಜ್ಞರಾದ ಮರುಳಸಿದ್ದಪ್ಪ ಎಸ್.ಎಲ್.ಆರ್. ಕನ್ಸಲ್ಟನ್ಸಿ ಬೆಂಗಳೂರು ಹಾಗೂ ಮಹಾಂತೇಶ ಸಾರಾಪೂರೆ ಧಾರವಾಡ ಇವರು ಸಕ್ಕರೆ ಕಾರ್ಖಾನೆಗಳ ಆಹಾರ ಸಂರಕ್ಷಣೆ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.

ಕಾರ್ಯಾಗಾರದ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ನಿರ್ದೇಶರಾದ ರಾಜಗೋಪಾಲ ಇವರು ಮಾತನಾಡಿ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟದ ಬಗ್ಗೆ ಕಾರ್ಖಾನೆಗಳಲ್ಲಿ ಆಗುವ ನಿರ್ಲಕ್ಷö್ಯಗಳ ಬಗ್ಗೆ ವಿವರಣೆ ನೀಡಿದರು. ಹಾಗೂ ಸಕ್ಕರೆ ಒಂದು ಆಹಾರದ ಅವಿಭಾಜ್ಯ ಪದಾರ್ಥವಾಗಿರುವದರಿಂದ ಇದರ ಗುಣಮಟ್ಟ ಕಾಯ್ದುಕೊಳ್ಳವುದು ಸೂಕ್ತವಾಗಿರುತ್ತದೆ ಅಂತಾ ತಿಳಿಸಿದರು. ಅದರಂತೆ ಶ್ರೀ ಸಿ.ಬಿ.ಪಾಟೀಲ ತಾಂತ್ರಿಕ ಸಲಹೆಗಾರರು ಮುಖ್ಯ ಅತಿಥಿಗಳನ್ನು ಪರಿಚಯಿಸಿ ಕಾರ್ಯಾಗಾರದ ಮಹತ್ವದ ಕುರಿತು ಹೇಳಿದರು.

ತದನಂತರ ಅತಿಥಿ ಉಪನ್ಯಾಸಕರು ಮರುಳಸಿದ್ದಪ್ಪ ಬೆಂಗಳೂರು ಇವರು ಆಹಾರ ಸಂರಕ್ಷಣೆ ನಿರ್ವಹಣೆಯ ಕುರಿತು ಮಾತನಾಡುತ್ತಾ FSSC 22000, GNP, HACCP, FDA ಅಳವಡಿಸುವುದು ಮತ್ತು ಅದರಿಂದ ಮೌಲ್ಯವರ್ಧಿ ಸಕ್ಕರೆ ಉತ್ಪಾಧಿಸಿ ಅಂತರಾಷ್ಟ್ರೀಯ ಹಾಗೂ ಇತರೆ ಮಾರುಕಟ್ಟೆಯಲ್ಲಿ ಸಕ್ಕರೆಗೆ ಹೆಚ್ಚಿನ ಬೆಲೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಇನ್ನೋರ್ವ ಅತಿಥಿ ತಜ್ಞರಾದ ಮಹಾಂತೆಶ ಸಾರಾಪೂರೆ ಇವರು ಅಂತರೀಕ ನಿರ್ವಹಣೆ ಮತ್ತು ಗುಣಮಟ್ಟದ ಸಕ್ಕರೆ ಸಂಸ್ಕರಣೆ ಎಸ್.ಓ.ಪಿ ಕುರಿತು ವಿವರವಾಗಿ ತಿಳಿಸಿದರು.

ಕಾರ್ಯಕ್ರಮವನ್ನು ವೃಷಭ ಅಸ್ಕಿ, ಸಕ್ಕರೆ ತಂತ್ರಜ್ಞರು ಕಾರ್ಯಾಗಾರವನ್ನು ನಿರೂಪಿಸಿ ವಂದನಾರ್ಪಣೆ ಹೇಳಿದರು. ಈ ಕಾರ್ಯಾಗಾರದಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳ ಸುಮಾರು 65ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು.

Tags:

error: Content is protected !!