ಆಗಸದಲ್ಲೇ ಉಯ್ಯಾಲೆಯಾಡಿದ ಫ್ಲೈಟ್:
ಕುಟುಂಬಸ್ಥರಿಗೆ ಅಂತಿಮ ಸಂದೇಶ ಕಳುಹಿಸಿದ್ದ ಪ್ರಯಾಣಿಕರು

ವಿಮಾನದಲ್ಲಿ ತಾಂತ್ರಿಕ ದೋಷ : ಆತಂಕಗೊಂಡ ಪ್ರಯಾಣಿಕರು
ದೇಶದಲ್ಲಿ ಮತ್ತೊಂದು ವಿಮಾನ ಮಹಾದುರಂತ ತಪ್ಪಿದೆ. ಹತ್ತಾರು ಜೀವಗಳು ನಾಲ್ಕು ಗಂಟೆ ಆಗಸದಲ್ಲೆ ಜೀವ ಕೈಯಲಿಡಿದು ಕುಳಿತು ಜೀವ ಉಳಿಸಿಕೊಂಡಿದ್ದಾರೆ ಪ್ರಯಾಣಿಕರು.. ಮತ್ತೊಂದು ಕಡೆ ಅವಘಡದಿಂದ ವಿಚಲೀತಗೊಂಡಿದ್ದ ಪ್ರಯಾಣಿಕರ ಕನಿಷ್ಠ ಸೌಜನ್ಯತೆಯಿಂದ ನಡೆದುಕೊಂಡಿಲ್ಲ ಎಂಬ ಆರೋಪ ಸಹ ಕೇಳಿಬಂದಿದೆ..
ಗುಜರಾತ್ ವಿಮಾನ ದುರಂತ ಮಾಸುವ ಮುನ್ನವೇ ಮತ್ತೊಂದು ಮಹಾದುರಂತ ತಪ್ಪಿದ್ದು
ಹತ್ತಾರು ಜೀವಗಳು ಸುತ್ತು ಬದುಕಿದಂತ ಘಟನೆ ನಿನ್ನೆ ಸಂಜೆ ಹುಬ್ಬಳ್ಳಿ ಆಗಸದಲ್ಲಿ ನಡೆದಿದೆ.. ಕಳೆದ ಎರಡು ದಿನಗಳಿಂದ ಕಾರ್ಯಾರಂಭ ಮಾಡಿದ್ದ
Fly91 ಏರ್ ಲೈನ್ಸ್ IC3401( ATRTURBOPROP AT7) ಸಂಖ್ಯೆ ಫ್ಲೈಟ್ ನಲ್ಲಿ ತಾಂತ್ರಿಕ ದೋಷ ಕಂಡಬಂದಿದ್ದು,ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಏಕಾಏಕಿ ಕಂಟ್ರೋಲ್ ಕಳೆದುಕೊಂಡ ಫ್ಲೈಟ್ ಸುಮಾರು ನಾಲ್ಕು ಗಂಟೆ ಆಗಸದಲ್ಲಿಯೇ ಮುಂಡಗೋಡ, ದಾವಣಗೆರೆ , ಶಿವಮೊಗ್ಗ ಸುತ್ತಾಟ ನಡೆಸಿ ಕೊನೆಗೆ ಸಂಜೆ 7.30 ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ..
ನಿನ್ನೆ ಮಧ್ಯಾಹ್ನ 3 ಗಂಟೆ ಹೈದರಾಬಾದ್ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಿಂದ ಟೆಕ್ ಆಫ್ ಆದ ಫ್ಲೈಟ್, ಸಂಜೆ 4.30 ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ವಿಮಾನ ನಿಯಂತ್ರಣ ಕಳೆದುಕೊಂಡು, ಉಯ್ಯಾಲೆಯಂತೆ ತೂಗಾಡಿದೆ. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಮಾಡಲು ಫೈಲೇಟ್ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಇದು ಸಕ್ಸಸ್ ಆಗಿಲ್ಲ, ಹೀಗಾಗಿ ಸುಮಾರು ನಾಲ್ಕು ಗಂಟೆ ಆಗಸದಲ್ಲಿಯೇ ಸುತ್ತಾಟ ನಡೆಸಿದೆ. ಇದರಿಂದ ಕಂಗಾಲದ ಪ್ರಯಾಣಿಕರು, ಫ್ಲೈಟ್ ನಲ್ಲಿಯೇ ದೇವರಿಗೆ ಕೈಮುಗಿದು ಬೇಡಿಕೊಂಡು ಕಣ್ಣಿರು ಹಾಕಿದ್ದಾರೆ.ನಾವಿನ್ನು ಜೀವಂತವಾಗಿ ಬರೋದು ಅನುಮಾನ ಅಂತ ಕುಟುಂಬಸ್ಥರಿಗೆ ಮೊಬೈಲ್ ನಲ್ಲಿ ಸಂದೇಶ ಕಳುಹಿಸಿದ ಪ್ರಯಾಣಿಕರು, ಇದೇ ನಮ್ಮ ಅಂತಿಮ ಸಂದೇಶ ಅಂತ ಹೇಳಿಕೊಂಡಿದ್ದರು.. ಇದಾದ ಮೇಲೆ ಬೆಂಗಳೂರಿನಲ್ಲಿ 7.30 ಕ್ಕೆ ವಿಮಾನ ಸೇಫ್ ಆಗಿ ಲ್ಯಾಂಡ್ ಆಗಿದೆ. ಆದರೆ Fly91 ಏರ್ ಲೈನ್ಸ್ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ.ಫ್ಲೈಟ್ ಘಟನೆ ಬಗ್ಗೆ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿರುವ ಸಿಬ್ಬಂದಿ, ಘಟನೆ ಬಳಿಕ ಪ್ರಯಾಣಿಕರ ಜೊತೆಗೆ ಅಮಾನವೀಯತೆಯಿಂದ ನಡೆದುಕೊಂಡಿರುವ ಆರೋಪ ಕೇಳಿಬಂದಿದೆ..
ಇನ್ನೂ ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣದ ಪ್ರಭಾರಿ ನಿರ್ದೇಶಕ ಪ್ರವೀಣ ಜಾಧವ್,ನಿನ್ನೆ ಸಂಜೆ 4-30 ಕ್ಕೆ ಪ್ಲೈ 91 ಹುಬ್ಬಳ್ಳಿ ಯಲ್ಲಿ ಲ್ಯಾಂಡ್ ಆಗಬೇಕಿತ್ತು.ನಿನ್ನೆ ಹವಾಮಾನ ವೈಪರಿತ್ಯದಿಂದ ಲ್ಯಾಂಡ್ ಆಗಲಿಲ್ಲ ಒಂದು ಗಂಟೆ ಆಕಾಶದಲ್ಲಿ ಹಾರಾಡಿದೆ ನಂತರ ಬೆಂಗಳೂರಿನಲ್ಲಿ ಲ್ಯಾಂಡ್ ಆಯ್ತು ಫ್ಲೈ 91 ನಲ್ಲಿ 18 ಪ್ರಯಾಣಿಕರು ಇದ್ದರು.
ಸಿಬ್ಬಂದಿ ಅಮಾನವೀಯ ವರ್ತನೆ ಬಗ್ಗೆ ಸಂಸ್ಥೆ ಗೆ ಮಾಹಿತಿ ನೀಡಲಾಗುವುದು ಎಂದಿದ್ದಾರೆ..
ಪ್ರವೀಣ ಜಾಧವ್,ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣದ ಪ್ರಭಾರಿ ನಿರ್ದೇಶಕ
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ದೇಶದ ನಾಗರಿಕ ವಿಮಾನಯಾನದ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳುವ ಹಲವಾರು ಪ್ರಕರಣಗಳು ನಡೆಯುತ್ತಿದ್ದರೂ ವಿಮಾನದ ನಿಯಂತ್ರಣ ಇಲಾಖೆ ಮಾತ್ರ ಜಾಣ ನಿದ್ದೆಗೆ ಜಾರಿರುವಂತೆ ಭಾಸವಾಗುತ್ತಿದೆ. ಸಂಬಂಧಿಸಿದ ಏರ್ ಲೈನ್ಸ್ ವಿರುದ್ಧ ಕಠಿಣ ಕ್ರಮವಾಗಬೇಕೇಂಬವುದು ನೊಂದ ಪ್ರಯಾಣಿಕರ ಮಾತಾಗಿದೆ.
