• ಕೆಎಲ್‌ಇ ಸಂಸ್ಥೆಯಲ್ಲಿ ಗ್ಲೇಸಿಯರ್ ಸೀಸನ್-6
• ಜಪಾನಿ ತಜ್ಞರಿಂದ ಬೇಕರಿ ಉತ್ಪನ್ನಗಳ ತರಬೇತಿ
• ಶಿಗೆಟೊ ಹಯಾಶಿ ಅವರಿಂದ ಪ್ರಾಯೋಗಿಕ ಮಾರ್ಗದರ್ಶನ
• ಹೋಟೆಲ್ ಉದ್ಯಮದ ವೃತ್ತಿಪರರಿಗೆ ವಿಶೇಷ ವೇದಿಕೆ

ಬೆಳಗಾವಿಯ ಕೆಎಲ್‌ಇ ಹೋಟೆಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಬೇಕರಿ ಲೋಕದ ವಿಸ್ಮಯಗಳನ್ನು ಪರಿಚಯಿಸಲು ಸಜ್ಜಾಗಿದೆ. ಜಪಾನ್ ತಂತ್ರಜ್ಞಾನದ ಸ್ಪರ್ಶದೊಂದಿಗೆ ನಡೆಯಲಿರುವ ಈ ಅಪರೂಪದ ಕಾರ್ಯಾಗಾರದ ಕುರಿತಾದ ಒಂದು ವರದಿ ಇಲ್ಲಿದೆ.
ಬೆಳಗಾವಿ ನಗರದ ಕೆಎಲ್‌ಇ ಜೆಎನ್‌ಎಂಸಿ ಆವರಣದಲ್ಲಿರುವ ಡಾ. ವಿ.ಡಿ ಪಾಟೀಲ್ ಸಭಾಂಗಣದಲ್ಲಿ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಹೋಟೆಲ್ ಮ್ಯಾನೇಜ್‌ಮೆಂಟ್ ವಿಭಾಗವು ‘ಗ್ಲೇಸಿಯರ್ ಸೀಸನ್-6’ ಎಂಬ ವಿನೂತನ ಬೇಕರಿ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ನೆಹರು. ಹೋಟೆಲ್ ಉದ್ಯಮದಲ್ಲಿ ವೃತ್ತಿಪರತೆಯನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಪ್ರಾಯೋಗಿಕ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಾಗಾರದ ಪ್ರಮುಖ ಆಕರ್ಷಣೆಯೆಂದರೆ ಜಪಾನ್‌ನ ಪ್ರಖ್ಯಾತ ‘ಕೋಬೊ’ (KOBO) ಸಂಸ್ಥೆಯ ಸಂಶೋಧನಾ ವಿಭಾಗದ ಹಿರಿಯ ವ್ಯವಸ್ಥಾಪಕರಾದ ಶಿಗೆಟೊ ಹಯಾಶಿ ಅವರು ತರಬೇತಿ ನೀಡಿದರು. ಜಪಾನಿ ತಂತ್ರಜ್ಞಾನವನ್ನು ಬಳಸಿಕೊಂಡು ಬೇಕರಿ ಉತ್ಪನ್ನಗಳನ್ನು ತಯಾರಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಮತ್ತು ಆಸಕ್ತರಿಗೆ ಇಲ್ಲಿ ಕಲಿಸಿಕೊಡಲಾಯಿತು. ‘ಕಲಿ, ಸಮೃದ್ಧನಾಗು ಮತ್ತು ಸಾಧಿಸು’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮವು ಬೇಕರಿ ಉದ್ಯಮದಲ್ಲಿ ಹೊಸ ಮೈಲಿಗಲ್ಲಾಯಿತು.
ಕಾಹೇರಿನ ಉಪಕುಲಪತಿಗಳಾದ ಡಾ. ಸಂದೀಪ್ ಶ್ರೀವಾಸ್ತ, ರೆಜಿಸ್ಟಾರ್ ಡಾ. ವಿ.ಎಂ. ಪಟ್ಟಣಶೆಟ್ಟಿ, ಪ್ರಾಂಶುಪಾಲರಾದ ಡಾ. ನಂದಕುಮಾರ್, ಕಿರಣ್ ಕಾರ್ತಿಕ್ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು. ಈ ವೇಳೆ ಮಾತನಾಡಿದ ಗಣ್ಯರುಹಾಸ್ಪಿಟ್ಯಾಲಿಟಿ ಸೇವೆಗಳನ್ನು ಅಭಿವೃದ್ಧಿಪಡಿಸಲು ಈ ಉಪಕ್ರಮವು ಪೂರಕವಾಗಿದೆ. 6ನೇ ಬಾರಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭಾಷಯಗಳನ್ನು ತಿಳಿಸಿದರು.
ಗ್ರೇಸರ್ ಸೀಜನ್ 6 ರಲ್ಲಿ ಭಾಗವಹಿಸಿ ತುಂಬಾ ಖುಷಿಯಾಗಿದ್ದು, ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ವೈರೈಟಿಯ ಕೇಕ್’ಗಳನ್ನು ಕಾಣಬಹುದಾಗಿದೆ. ಓ ಇಂಡಿಯಾ ಮತ್ತು ಕೋಬೋ ಸಹಯೋಗದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಐಸ್ ಕ್ರೀಂ ಬಳಸದೇ ಆರೋಗ್ಯಕರ ಕೇಕ್’ಗಳನ್ನು ಈ ಬಾರಿ ಪರಿಚಯಿಸಲಾಗಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಅನುಭವವನ್ನು ನೀಡಲಾಗಿದೆ ಎಂದು ಪ್ರಾಂಶುಪಾಲರಾದ ನಂದಕುಮಾರ್ ಅವರು ತಿಳಿಸಿದರು.
ಜಪಾನಿನ ಶೇಫ್ ಶೀಗೆಟೋ ಹಯಾಶಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಬಾರಿ ವಿವಿಧ ಬಗೆಯ ಕೇಕ್’ಗಳನ್ನು ತಯಾರಿಸಿದ್ದಾರೆ. ಈ ಫೆಸ್ಟ್’ಗೆ ಸಹಯೋಗ ನೀಡಿದ ಕೋಬೋ ಕಂಪನಿಯ ವಿವಿಧ ಆರೋಗ್ಯಕರ ಉತ್ಪನ್ನಗಳ ಮಾಹಿತಿಯನ್ನು ನೀಡಿ, ಈ ಬಾರಿ ವಿವಿಧ ಬ್ರೆಡ್’ಗಳನ್ನು ತಯಾರಿಸಲಾಗಿದೆ. ವಿದ್ಯಾರ್ಥಿಗಳು ಒಳ್ಳೆಯ ಪ್ರದರ್ಶನವನ್ನು ನೀಡಿದ್ದಾರೆಂದು ಎನ್.ಡಿ. ದೇಶಪಾಂಡೆ ಅವರು ತಿಳಿಸಿದರು.
ಇನ್ನು ವಿದ್ಯಾರ್ಥಿ ರೋನೀತ್ ಮಾಡಲಗಿ ಅವರು ತಾವು ತಯಾರಿಸಿದ ಆಪಲ್ 5 ಕುರಿತು ಮಾಹಿತಿಯನ್ನು ನೀಡಿದರು. ಆರೋಗ್ಯಕರ ಕೇಕ್ ತಯಾರಿಸಲು ಉತ್ತಮ ಮಾಹಿತಿಯನ್ನು ನೀಡಲಾಗಿದೆ. ಡ್ರೈಫ್ರೂಟ್ಸ್, ಚಾಕಲೇಟ್ ಇನ್ನುಳಿದ ವಸ್ತುಗಳನ್ನು ಬಳಸಿ ಕೇಕ್’ನ್ನು ತಯಾರಿಸಿರುವುದಾಗಿ ತಿಳಿಸಿದರು.
ಇನ್ನು ಕಾರ್ತಿಕ್ ಅವರು ಕೆ.ಎಲ್.ಇ ಹೊಟೇಲ್ ಮ್ಯಾನೇಜ್’ಮೆಂಟ್ ಜಪಾನಿನ ಓರಿಯಂಟಲ್ ಇಸ್ಟ್ ಇಂಡಿಯಾದ ಸಹಯೋಗದಲ್ಲಿ ಇಂದಿನ ತರಬೇತಿಯನ್ನು ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು. ಅದೇ ರೀತಿ ಓರಿಯಂಟಲ್ ಇಸ್ಟ್ ಇಂಡಿಯಾದ ಪ್ರಮುಖರಾದ ಹಯಾಶಿ ಅವರು ತಮ್ಮ ಕಂಪನಿಯ ಕುರಿತು ಮಾಹಿತಿಯನ್ನು ನೀಡಿದರು.
