• ಬೆಳಗಾವಿಯಲ್ಲಿ ಶಾಸಕರಿಂದ ಹೈಟೆಕ್ ಗ್ರಂಥಾಲಯ ಲೋಕಾರ್ಪಣೆ
• 30 ಲಕ್ಷ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ
• ಬಿಸಿಎಂ ಹಾಸ್ಟೆಲ್‌ನ ಹಾಳುಬಿದ್ದ ಕೊಠಡಿಗಳಿಗೆ ನವಕಳೆ
• ಶಾಸಕ ಆಸಿಫ್ ಸೇಠ್ ಜನಪರ ಕಾರ್ಯಕ್ಕೆ ಶ್ಲಾಘನೆ

ಬೆಳಗಾವಿಯ ಬಿಸಿಎಂ ಹಾಸ್ಟೆಲಿನಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ನೂತನ ವಿಷನ್ ಬೆಳಗಾವಿ ಗ್ರಂಥಾಲಯವನ್ನು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಲೋಕಾರ್ಪಣೆಗೊಳಿಸಿದರು.
ಬೆಳಗಾವಿಯ ಬಿಸಿಎಂ ಹಾಸ್ಟೆಲಿನಲ್ಲಿ ನಿರುಪಯುಕ್ತವಾಗಿದ್ದ ಕೊಠಡಿಗಳಲ್ಲಿ ಶಾಸಕರ ವಿಶೇಷ 30 ಲಕ್ಷ ರೂಪಾಯಿ ಅನುದಾನದಲ್ಲಿ ಗ್ರಂಥಾಲಯವನ್ನು ನಿರ್ಮಿಸಲಾಗಿದ್ದು, ಇಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಲೋಕಾರ್ಪಣೆಗೊಳಿಸಿದರು.
ಎಸಿ ಶ್ರವಣ್ ಕುಮಾರ್, ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಲಾದ ಹರ್ಷಾ, ಚೇತನ್ ಧರಿಗೌಡರ, ಮರಿಗೌಡರ ಸೇರಿದಂತೆ ಇನ್ನುಳಿದ ಗಣ್ಯರ ಉಪಸ್ಥಿತಿಯಲ್ಲಿ ವಿಷನ್ ಬೆಳಗಾವಿ ಗ್ರಂಥಾಲಯವನ್ನು ಲೋಕಾರ್ಪಣೆಗೊಳಿಸಲಾಯಿತು.
ಉತ್ತರ ವಿಧಾನ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು,ಬೆಳಗಾವಿಯ ಬಿಸಿಎಂ ಹಾಸ್ಟೆಲಿನಲ್ಲಿ 4 ಕೋಣೆಗಳ ಬಗ್ಗೆ ಬೆಳಗಾವಿಯ ಎಸಿ ಮತ್ತು ಜಿ.ಪಂ. ಸಿಇಓ ಅವರು ಗಮನ ಸೆಳೆದಿದ್ದರು. ಹಾಸ್ಟೆಲ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಸಕರ ಅನುದಾನದಲ್ಲಿ ವಿಷನ್ ಬೆಳಗಾವಿ ಗ್ರಂಥಾಲಯವನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ನಮ್ಮ ದೇಶದ ಭವಿಷ್ಯ ಅವರು ಕಲಿತು ದೇಶವನ್ನು ಕಟ್ಟುವ ಕಾರ್ಯವನ್ನು ಮಾಡಲಿ ಎಂದರು. ಶಿಕ್ಷಣ ಮತ್ತು ಆರೋಗ್ಯಕ್ಕೆ ನಾವು ಒತ್ತು ನೀಡುತ್ತಿದ್ದೇವೆ. ಈಗಾಗಲೇ ಬಿಮ್ಸ್ ಆಸ್ಪತ್ರೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳು 23 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ. ಅಲ್ಲದೇ ಸರ್ದಾರ್ಸ್ ಕಾಲೇಜಿಗೆ ಹೊಸ ಕಟ್ಟಡವನ್ನು ಮಂಜೂರು ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ ಅವರು ಬೆಳಗಾವಿಯ ಬಿಸಿಎಂ ಹಾಸ್ಟೆಲಿನಲ್ಲಿ 3 ಕೊಠಡಿಗಳು ಹಾಳು ಬಿದ್ದಿದ್ದವು. ಸುಮಾರು 30 ಲಕ್ಷದಲ್ಲಿ ಮಕ್ಕಳ ಅನುಕೂಲಕ್ಕೆ 3 ಗ್ರಂಥಾಲಯಗಳನ್ನು ಶಾಸಕರು ನಿರ್ಮಿಸಿದ್ದು, ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಿದೆ. ಶಾಸಕರ ಈ ಕಾರ್ಯವನ್ನು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಈ ವೇಳೆ ವಿವಿಧ ಗಣ್ಯರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ಧರು.
