• ನಂದಗಡದಲ್ಲಿ ರಾತೋರಾತ್ರಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ
• ಕಂದಾಯ ಇಲಾಖೆ ಜಾಗದಲ್ಲಿ ವಿಶ್ವಗುರು ಸ್ಥಾಪನೆ
• ವಿಎ ಕಚೇರಿ ಆವರಣದಲ್ಲಿ ಭಕ್ತರ ಸಂಭ್ರಮ
• ಸರ್ಕಾರಿ ಚಾವಡಿ ಈಗ ಬಸವೇಶ್ವರ ಸರ್ಕಲ್!

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಚಾವಡಿಯಲ್ಲಿ, ನಿನ್ನೆ ರಾತೋರಾತ್ರಿ ಬಸವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಕಂದಾಯ ಇಲಾಖೆಗೆ ಸೇರಿದ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ ಇದ್ದ ಜಾಗದಲ್ಲಿಯೇ ಈ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಮೂಲತಃ ಸರ್ಕಾರಿ ಇಲಾಖೆಗೆ ಸಂಬಂಧಿಸಿದ ಈ ಜಾಗವನ್ನು ಈಗ ಸಾರ್ವಜನಿಕವಾಗಿ ‘ಬಸವೇಶ್ವರ ಸರ್ಕಲ್’ ಎಂದು ನಾಮಕರಣ ಮಾಡಿ ಕರೆಯಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
